ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಲೋಕಸಭೆ ಚುನಾವಣೆ ಹಿನ್ನೆಲೆ: ಕುಣಿಯಲು ಶುರುವಾಗಿದೆ ಕಾಂಚಾಣ, ಲೋಕಿಕೆರೆ ಪೋಸ್ಟ್ ನಲ್ಲಿ ಲಕ್ಷಾಂತರ ರೂ. ವಶ

On: March 21, 2024 8:23 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:21-03-2024

ದಾವಣಗೆರೆ: ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಕುರುಡು ಕಾಂಚಾಣವೂ ಕುಣಿಯಲು ಶುರುವಾಗಿದೆ.

ದಾವಣಗೆರೆ ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ ರೆಹಮತ್ ವುಲ್ಲಾ ಎನ್ನುವವರು ನಲ್ಲೂರಿನಿಂದ ದಾವಣಗೆರೆ ಕಡೆಗೆ ಕಾರ್ ನಲ್ಲಿ ಹೋಗುತ್ತಿರುವಾಗ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ರೂ 1,99,028 ನಗದು
ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ. ಕಳೆದ ಎರಡರಿಂದ ಮೂರು ದಿನಗಳ ಹಿಂದೆಯೂ ಲಕ್ಷಾಂತರ ರೂಪಾಯಿ ಪತ್ತೆಯಾಗಿತ್ತು. ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ತನಿಖೆ
ಮುಂದುವರಿಸಲಾಗಿದೆ.

ಚೆಕ್ ಪೋಸ್ಟ್ ಪರಿಶೀಲನೆ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರು ಮಾರ್ಚ್ 21 ರಂದು ಜಗಳೂರು ತಾ. ಕಾನನಕಟ್ಟೆ, ಮುಸ್ಟೂರು, ಬಿದರಿಕೆರೆ ಚೆಕ್ ಪೋಸ್ಟ್ ಪರಿಶೀಲನೆ ನಡೆಸಿ ಮಾರ್ಗದಲ್ಲಿ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡಬೇಕು, ತಪಾಸಣೆ ಮಾಡದೇ ವಾಹನ ಹೋಗಲು ಬಿಟ್ಟಲ್ಲಿ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವರದಿಯಾದಲ್ಲಿ ಸಂಬಂಧಿಸಿದ ಚೆಕ್ ಪೋಸ್ಟ್ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸಹಾಯಕ ಚುನಾವಣಾಧಿಕಾರಿ ಸಿದ್ದರಾಮ್ ಮರಿಹಾಳ್ ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment