ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ ಎದುರಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ (KSP) ಇಲಾಖೆಯು ಖಾಲಿ ಇರುವ ಒಟ್ಟು 8,176 ಪೊಲೀಸ್ ಕಾನ್ಸ್ಟೇಬಲ್, ಸಬ್ಇನ್ಸ್ಪೆಕ್ಟರ್ (SI) ಹಾಗೂ ಎಎಸ್ಐ (ASI) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಶೀಘ್ರದಲ್ಲೇ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಿದೆ.
ಕರ್ನಾಟಕ ಸರ್ಕಾರದ ಬೃಹತ್ 56,432 ಹುದ್ದೆಗಳ ಭರ್ತಿ ಪ್ರಕ್ರಿಯೆಯ ಭಾಗವಾಗಿ ಈ ನೇಮಕಾತಿ ನಡೆಯುತ್ತಿದ್ದು, ಆಂತರಿಕ ಪ್ರಕ್ರಿಯೆಗಳು ಈಗಾಗಲೇ ಚುರುಕಾಗಿವೆ.
ಹುದ್ದೆಗಳ ವಿವರ :
ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ (KK) ಭಾಗಕ್ಕೆ 1,786 ಹುದ್ದೆಗಳು ಹಾಗೂ ಉಳಿಕೆ ಮೂಲ ವೃಂದದ (NKK) ಭಾಗಕ್ಕೆ 6,390 ಹುದ್ದೆಗಳನ್ನು ಮೀಸಲಿಡಲಾಗಿದೆ.
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್: 4,110 ಹುದ್ದೆಗಳು
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (APC): 1,650 ಹುದ್ದೆಗಳು
ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (KSRP): 2,032 ಹುದ್ದೆಗಳು
ಕೆಎಸ್ಐಎಸ್ಎಫ್ (KSISF) ಕಾನ್ಸ್ಟೇಬಲ್: 76 ಹುದ್ದೆಗಳು
ಡಿಡೆಕ್ಟಿವ್ ಸಬ್ ಇನ್ಸ್ಪೆಕ್ಟರ್ (DSI): 56 ಹುದ್ದೆಗಳು
ಅರ್ಹತೆಗಳು ಮತ್ತು ವಯೋಮಿತಿ:
ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪಿಯುಸಿ (12th), ಐಟಿಐ, ಡಿಪ್ಲೊಮಾ ಅಥವಾ ಯಾವುದೇ ಪದವಿ (Degree) ಮುಗಿಸಿರಬೇಕು.
ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿ 38 ವರ್ಷಗಳು (ಹುದ್ದೆಯ ನಿಯಮಾವಳಿಗಳ ಪ್ರಕಾರ).
ವಯೋಮಿತಿ ಸಡಿಲಿಕೆ: ಒಬಿಸಿ (2A, 2B, 3A, 3B) ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Written Exam), ದೈಹಿಕ ಸಾಮರ್ಥ್ಯ ಪರೀಕ್ಷೆ (Endurance Test), ದೈಹಿಕ ಜಾಣ್ಮೆ ಪರೀಕ್ಷೆ (Physical Standard Test) ಹಾಗೂ ಸಂದರ್ಶನದ (ಅನ್ವಯಿಸುವ ಹುದ್ದೆಗಳಿಗೆ ಮಾತ್ರ) ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು ಮತ್ತು ಲಿಂಕ್ಗಳು:
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಶೀಘ್ರದಲ್ಲೇ ಪ್ರಕಟಿಸಲಾಗುವುದು (Upcoming Soon)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ್ರಕಟಣೆ ಹೊರಬಿದ್ದ ತಕ್ಷಣ ತಿಳಿಸಲಾಗುವುದು.
ಅಧಿಕೃತ ವೆಬ್ಸೈಟ್: ksp-recruitment.in ಅಥವಾ ksp.karnataka.gov.in
- 8176 Police Constable Vacancy
- 8176 ಪೊಲೀಸ್ ಹುದ್ದೆಗಳ ಅಧಿಸೂಚನೆ
- Apply Online KSP Constable
- Deductive Sub Inspector Recruitment
- Karnataka Civil Police Constable Jobs
- Karnataka Govt Jobs 2026
- Karnataka Police Recruitment 2026
- KSISF PC Vacancy
- KSP Recruitment 2026
- KSRP Recruitment 2026
- Police Job Notification Karnataka
- ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗಗಳು
- ಕರ್ನಾಟಕ ಸರ್ಕಾರಿ ಕೆಲಸಗಳು 2026
- ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್
- ಕೆಎಸ್ಪಿ ಆನ್ಲೈನ್ ಅರ್ಜಿ
- ಕೆಎಸ್ಪಿ ನೇಮಕಾತಿ 2026
- ಪೊಲೀಸ್ ಇಲಾಖೆ ನೇಮಕಾತಿ ಪ್ರಕ್ರಿಯೆ
- ಸಬ್ ಇನ್ಸ್ಪೆಕ್ಟರ್ ಹುದ್ದೆಗಳು
- ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ
- ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಅರ್ಜಿ





Leave a comment