ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೇ ಇಲಾಖೆಯು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈಲ್ವೇ ನೇಮಕಾತಿ ಮಂಡಳಿ (RRB) ಒಟ್ಟು 6,565 ಟೆಕ್ನಿಷಿಯನ್ ಗ್ರೇಡ್-1 (ಸಿಗ್ನಲ್) ಮತ್ತು ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳ ಭರ್ಜಿಗೆ ತಾತ್ಕಾಲಿಕ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ:
ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್: 323 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್ III: 6,242 ಹುದ್ದೆಗಳು
ಒಟ್ಟು ಹುದ್ದೆಗಳು: 6,565 (ತಾತ್ಕಾಲಿಕ)
ಶೈಕ್ಷಣಿಕ ಅರ್ಹತೆ:
ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್: ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಸ್ಸಿ (ಫಿಸಿಕ್ಸ್ / ಎಲೆಕ್ಟ್ರಾನಿಕ್ಸ್ / ಕಂಪ್ಯೂಟರ್ ಸೈನ್ಸ್ / ಐಟಿ / ಇನ್ಸ್ಟ್ರುಮೆಂಟೇಶನ್) ಅಥವಾ ಇಂಜಿನಿಯರಿಂಗ್ ಡಿಪ್ಲೊಮಾ/ಡಿಗ್ರಿ ಉತ್ತೀರ್ಣರಾಗಿರಬೇಕು.
ಟೆಕ್ನಿಷಿಯನ್ ಗ್ರೇಡ್ III: 10ನೇ ತರಗತಿ (ಮೆಟ್ರಿಕ್ಯುಲೇಷನ್) ಜೊತೆಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ NCVT/SCVT ಇಂದ ಐಟಿಐ (ITI) ಅಥವಾ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು.
ವಯೋಮಿತಿ ಮತ್ತು ವೇತನ:
ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್: 18 ರಿಂದ 36 ವರ್ಷಗಳು (ಆರಂಭಿಕ ವೇತನ: ರೂ. 29,200/-)
ಟೆಕ್ನಿಷಿಯನ್ ಗ್ರೇಡ್ III: 18 ರಿಂದ 33 ವರ್ಷಗಳು (ಆರಂಭಿಕ ವೇತನ: ರೂ. 19,900/-)
(ನಿಯಮಾನುಸಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ).
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಯಾವುದೇ ಆಪ್ಟಿಟ್ಯೂಡ್ ಟೆಸ್ಟ್ (CBAT) ಇರುವುದಿಲ್ಲ. ಪರೀಕ್ಷೆಯು ಒಟ್ಟು 100 ಅಂಕಗಳಿಗೆ 90 ನಿಮಿಷಗಳ ಕಾಲ ನಡೆಯಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ನೆಗೆಟಿವ್ ಅಂಕಗಳಿರುತ್ತವೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಆರಂಭ: 30 ಜೂನ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಜುಲೈ 2026 (ರಾತ್ರಿ 11:59 ರವರೆಗೆ)
ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿಗಾಗಿ ರೈಲ್ವೇ ಮಂಡಳಿಯ ಅಧಿಕೃತ ಪ್ರಾದೇಶಿಕ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.
ಅಧಿಕೃತ ವೆಬ್ ಸೈಟ್: https://www.rrbcdg.gov.in (and all regional RRB websites)
- Apply Online RRB Technician
- ITI Railway Jobs
- Railway Jobs 2026
- Railway Recruitment Board Alerts
- Railway Technician Vacancy
- RRB Notification 2026 PDF
- RRB Technician Recruitment 2026
- Technician Grade 1 Signal
- ಆನ್‌ಲೈನ್ ಅರ್ಜಿ ಲಿಂಕ್
- ಆರ್ಆರ್ಬಿ ಟೆಕ್ನಿಷಿಯನ್ ಉದ್ಯೋಗಗಳು
- ಆರ್ಆರ್ಬಿ ಬೆಂಗಳೂರು
- ಐಟಿಐ ಉದ್ಯೋಗಗಳು
- ಕೇಂದ್ರ ಸರ್ಕಾರಿ ಕೆಲಸಗಳು 2026
- ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗಳು
- ರೈಲ್ವೇ ಇಲಾಖೆ ನೇಮಕಾತಿ
- ರೈಲ್ವೇ ನೇಮಕಾತಿ 2026





Leave a comment