Home ಉದ್ಯೋಗ ವಾರ್ತೆ ಜೆಸ್ಕಾಂ ನೇಮಕಾತಿ 2026: 275 ಗ್ರಾಜುಯೇಟ್ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಜೆಸ್ಕಾಂ ನೇಮಕಾತಿ 2026: 275 ಗ್ರಾಜುಯೇಟ್ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Share
ಜೆಸ್ಕಾಂ
Share

ಕಲಬುರಗಿ: ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೊಮಾ ಮುಗಿಸಿ ಸರ್ಕಾರಿ ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಬಂದಿದೆ.

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) 2026-27ನೇ ಸಾಲಿನ ವೃತ್ತಿ ತರಬೇತಿಗಾಗಿ ಖಾಲಿ ಇರುವ ಒಟ್ಟು 275 ಗ್ರಾಜುಯೇಟ್ ಹಾಗೂ ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 05, 2026 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:

ಗ್ರಾಜುಯೇಟ್ (BE/B.Tech) ಅಪ್ರೆಂಟಿಸ್: 175 ಹುದ್ದೆಗಳು

ಡಿಪ್ಲೊಮಾ ಅಪ್ರೆಂಟಿಸ್: 100 ಹುದ್ದೆಗಳು

ಒಟ್ಟು ಹುದ್ದೆಗಳು: 275

ಶೈಕ್ಷಣಿಕ ಅರ್ಹತೆ ಮತ್ತು ನಿಯಮಗಳು:

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್‌ನಿಂದ ಸಂಬಂಧಪಟ್ಟ ವಿಭಾಗದಲ್ಲಿ (Electrical & Electronics) ಬಿಇ/ಬಿ.ಟೆಕ್ ಅಥವಾ 3 ವರ್ಷದ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ತೇರ್ಗಡೆಯಾದ ವರ್ಷ: ಜನವರಿ 2022ರ ನಂತರ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಭಾಷೆ: ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು. ಕರ್ನಾಟಕದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ವೇತನ (ಮಾಸಿಕ ಸ್ಟೈಫಂಡ್):

ಗ್ರಾಜುಯೇಟ್ (BE) ಅಪ್ರೆಂಟಿಸ್‌ಗಳಿಗೆ: ತಿಂಗಳಿಗೆ ರೂ. 9,000/-

ಡಿಪ್ಲೊಮಾ ಅಪ್ರೆಂಟಿಸ್‌ಗಳಿಗೆ: ತಿಂಗಳಿಗೆ ರೂ. 8,000/-

ವಯೋಮಿತಿ ಹಾಗೂ ಆಯ್ಕೆ ಪ್ರಕ್ರಿಯೆ:

ವಯೋಮಿತಿ: ಕನಿಷ್ಠ 18 ವರ್ಷ ತುಂಬಿರಬೇಕು. (ಸಾಮಾನ್ಯ ವರ್ಗಕ್ಕೆ ಗರಿಷ್ಠ 40 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ).

ಆಯ್ಕೆ ವಿಧಾನ: ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ (Merit List) ನೇರ ಆಯ್ಕೆ ಮಾಡಲಾಗುವುದು. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತರು ಜೆಸ್ಕಾಂ ಅಧಿಕೃತ ವೆಬ್‌ಸೈಟ್ (gescom.karnataka.gov.in) ಮೂಲಕ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯವಿರುವ ಎಲ್ಲಾ ಅಂಕಪಟ್ಟಿಗಳು ಹಾಗೂ ದಾಖಲೆಗಳ ಸ್ವಯಂ ದೃಢೀಕೃತ ನಕಲುಗಳನ್ನು ಲಗತ್ತಿಸಬೇಕು. ಲಕೋಟೆಯ ಮೇಲೆ “For 2026–27 Apprenticeship Training – BE / Diploma holder” ಎಂದು ಸ್ಪಷ್ಟವಾಗಿ ಬರೆದು ಈ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.

ಅರ್ಜಿ ತಲುಪಿಸಬೇಕಾದ ವಿಳಾಸ:

ಪ್ರಧಾನ ವ್ಯವಸ್ಥಾಪಕರು (ಮಾ.ಸಂ.ಅ),

ಕಾರ್ಪೊರೇಟ್ ಕಚೇರಿ, ಜೆಸ್ಕಾಂ (GESCOM),

ಸ್ಟೇಷನ್ ರಸ್ತೆ, ಕಲಬುರಗಿ – 585102

ಪ್ರಮುಖ ದಿನಾಂಕಗಳು:

ಆಫ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 18 ಮೇ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಜೂನ್ 2026 (ಸಂಜೆ 5:00 ಗಂಟೆಯೊಳಗೆ)

Share

Leave a comment

Leave a Reply

Your email address will not be published. Required fields are marked *