ಬೆಂಗಳೂರು: ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ. ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (KSMCL) ವಿವಿಧ 50 ಇಂಜಿನಿಯರ್, ಎಲೆಕ್ಟ್ರಿಷಿಯನ್ ಹಾಗೂ ಇತರ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಪ್ರಕಟಣೆ ಹೊರಡಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 29, 30 ಮತ್ತು 31, 2026 ರಂದು ನಡೆಯಲಿರುವ ವಾಕ್-ಇನ್ ಇಂಟರ್ವ್ಯೂ (Walk-in-Interview) ಮೂಲಕ ನೇರವಾಗಿ ಆಯ್ಕೆಯಾಗಬಹುದು.
ಹುದ್ದೆಗಳ ವಿವರ ಮತ್ತು ಮಾಸಿಕ ವೇತನ:
ಅಸಿಸ್ಟೆಂಟ್ ಮ್ಯಾನೇಜರ್ (ಪ್ರೊಡಕ್ಷನ್): 3 ಹುದ್ದೆಗಳು – ₹50,000/-
ಅಸಿಸ್ಟೆಂಟ್ ಮ್ಯಾನೇಜರ್ (ಲೀಸ್ & ಎಕ್ಸ್‌ಪ್ಲೋರೇಷನ್): 2 ಹುದ್ದೆಗಳು – ₹47,000/-
ಇಂಜಿನಿಯರ್ಸ್ (ಎನ್ವಿರಾನ್‌ಮೆಂಟ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಸಿವಿಲ್): 7 ಹುದ್ದೆಗಳು – ₹45,000/-
ಅಸಿಸ್ಟೆಂಟ್ ಮ್ಯಾನೇಜರ್ (ಸರ್ವೇ): 1 ಹುದ್ದೆ – ₹40,000/-
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್): 1 ಹುದ್ದೆ – ₹28,000/-
ಮೈನ್ ಫೋರ್‌ಮನ್ / ಮೈನ್ ಪಾರ್ಟ್‌ನರ್: 20 ಹುದ್ದೆಗಳು – ₹25,000/-
ಬ್ಲಾಸ್ಟರ್: 8 ಹುದ್ದೆಗಳು – ₹22,000/-
ಸರ್ವೇ ಅಸಿಸ್ಟೆಂಟ್ / ಎಲೆಕ್ಟ್ರಿಷಿಯನ್ (ITI): 3 ಹುದ್ದೆಗಳು – ₹21,000 – ₹21,400/-
ಬ್ಲಾಸ್ಟಿಂಗ್ ಹೆಲ್ಪರ್: 5 ಹುದ್ದೆಗಳು – ₹18,350/-
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 7ನೇ ತರಗತಿ, 10ನೇ ತರಗತಿ, ITI, ಡಿಪ್ಲೊಮಾ, ಪದವಿ, BE/B.Tech ಅಥವಾ ಸ್ನಾತಕೋತ್ತರ ಪದವಿ (Master’s Degree) ಪೂರ್ಣಗೊಳಿಸಿರಬೇಕು.
ವಾಕ್-ಇನ್ ಇಂಟರ್ವ್ಯೂ ವಿವರ ಮತ್ತು ದಿನಾಂಕಗಳು:
ಜುಲೈ 29, 2026: ಅಸಿಸ್ಟೆಂಟ್ ಮ್ಯಾನೇಜರ್, ಸಿವಿಲ್/ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎನ್ವಿರಾನ್‌ಮೆಂಟ್ ಇಂಜಿನಿಯರ್ಸ್ ಹಾಗೂ ಸರ್ವೇಯರ್ ಹುದ್ದೆಗಳಿಗೆ.
ಜುಲೈ 30, 2026: ಜೂನಿಯರ್ ಇಂಜಿನಿಯರ್, ಮೈನ್ ಫೋರ್‌ಮನ್ ಹಾಗೂ ಮೈನ್ ಪಾರ್ಟ್‌ನರ್ ಹುದ್ದೆಗಳಿಗೆ.
ಜುಲೈ 31, 2026: ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್ (ITI) ಮತ್ತು ಬ್ಲಾಸ್ಟಿಂಗ್ ಹೆಲ್ಪರ್ ಹುದ್ದೆಗಳಿಗೆ.
ಸಂದರ್ಶನ ನಡೆಯುವ ಸ್ಥಳ (Venue):
ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (KSMCL)
ಟಿ.ಟಿ.ಎಂ.ಸಿ ‘ಎ’ ಬ್ಲಾಕ್, 5ನೇ ಮಹಡಿ, ಬಿ.ಎಮ್.ಟಿ.ಸಿ ಕಟ್ಟಡ,
ಕೆ.ಹೆಚ್. ರಸ್ತೆ, ಶಾಂತಿನಗರ, ಬೆಂಗಳೂರು – 560027.
ಅಧಿಕೃತ ವೆಬ್‌ಸೈಟ್: ksmc.karnataka.gov.in
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳು, ಬಯೋಡಾಟಾ ಮತ್ತು ಸ್ವಯಂ-ದ್ಯುರೀಕರಿಸಿದ ನಕಲು ಪ್ರತಿಗಳೊಂದಿಗೆ (Self-attested copies) ನಿಗದಿತ ದಿನಾಂಕದಂದು ಬೆಳಿಗ್ಗೆ 10:30ಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
- Engineer Jobs in Karnataka
- Govt Jobs in Bangalore
- ITI Jobs in Bangalore
- Karnataka Govt Jobs 2026
- Karnataka State Minerals Corporation Limited
- KSMCL Notification 2026
- KSMCL Recruitment 2026
- KSMCL Salary Details
- KSMCL Walk in Interview 2026
- KSMCL ನೇಮಕಾತಿ 2026
- KSMCL ಹುದ್ದೆಗಳ ವಿವರ
- Mining Engineering Jobs Karnataka
- ಇಂಜಿನಿಯರಿಂಗ್ ಉದ್ಯೋಗಗಳು
- ಐಟಿಐ ಉದ್ಯೋಗಗಳು 2026
- ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ
- ನೇರ ಸಂದರ್ಶನ 2026
- ಬೆಂಗಳೂರು ಉದ್ಯೋಗ ವಾರ್ತೆ
- ವಾಕ್ ಇನ್ ಇಂಟರ್ವ್ಯೂ ಬೆಂಗಳೂರು
- ಸರ್ಕಾರಿ ಉದ್ಯೋಗ ಮಾಹಿತಿ.





Leave a comment