Home ಕ್ರೈಂ ನ್ಯೂಸ್ ನಿನ್ನಂತ ಅಪ್ಪ ಇಲ್ಲ.. ನಿನ್ನಂತ ಮಗಳೂ ಇಲ್ಲ: ಗೊಬ್ಬರ ಖರೀದಿಸುವ ನಾಟಕವಾಡಿ ಗಲ್ಲಾಪೆಟ್ಟಿಗೆಯಿಂದ ಹಣ ಎಗರಿಸಿದ ತಂದೆ ಹಾಗೂ ಮಗಳ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನಿನ್ನಂತ ಅಪ್ಪ ಇಲ್ಲ.. ನಿನ್ನಂತ ಮಗಳೂ ಇಲ್ಲ: ಗೊಬ್ಬರ ಖರೀದಿಸುವ ನಾಟಕವಾಡಿ ಗಲ್ಲಾಪೆಟ್ಟಿಗೆಯಿಂದ ಹಣ ಎಗರಿಸಿದ ತಂದೆ ಹಾಗೂ ಮಗಳ ಬಂಧನ!

Share
ತಂದೆ
Share

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಖತರ್ನಾಕ್ ತಂದೆ-ಮಗಳ ಜೋಡಿಯೊಂದು ಗೊಬ್ಬರದ ಅಂಗಡಿಯ ವ್ಯಾಪಾರಿಯ ಗಮನ ಬೇರೆಡೆ ಸೆಳೆದು ಗಲ್ಲಾಪೆಟ್ಟಿಗೆಯಿಂದ ಬರೋಬ್ಬರಿ 1.50 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಗೊಬ್ಬರ ಖರೀದಿಸುವ ನಾಟಕವಾಡಿ ಅಂಗಡಿಗೆ ನುಗ್ಗಿರುವ ಈ ಜೋಡಿ, ಅತ್ಯಂತ ಚಾಣಾಕ್ಷತನದಿಂದ ಮಾಲೀಕರನ್ನು ದಿಕ್ಕು ತಪ್ಪಿಸಿ ಕೈಚಳಕ ತೋರಿದೆ.

ಘಟನೆಯ ವಿವರದಂತೆ, ತಂದೆ ಮತ್ತು ಮಗಳು ಬಿಜ್ನೋರ್‌ನ ಗೊಬ್ಬರದ ಅಂಗಡಿಗೆ ಬಂದು ಮಾಲೀಕನೊಂದಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿದ್ದಾರೆ. ತದನಂತರ ಗೊಬ್ಬರ ಖರೀದಿಸುವ ನಾಟಕವಾಡಿದ ತಂದೆ, ಅಂಗಡಿಯ ಒಳಗೆ ಹೋಗಿ ಗೊಬ್ಬರದ ಚೀಲಗಳನ್ನು ಪರಿಶೀಲಿಸುವಂತೆ ತನ್ನ ಮಗಳನ್ನು ಮಾಲೀಕನ ಜತೆಗೆ ಕಳುಹಿಸಿದ್ದಾನೆ.

ಮಾಲೀಕ ಹಾಗೂ ಯುವತಿ ಅಂಗಡಿಯ ಒಳಭಾಗಕ್ಕೆ ತೆರಳುತ್ತಿದ್ದಂತೆ, ಹೊರಗಿದ್ದ ತಂದೆ ತಕ್ಷಣವೇ ಕೌಂಟರ್‌ನಲ್ಲಿದ್ದ ಗಲ್ಲಾಪೆಟ್ಟಿಗೆಯನ್ನು ತೆರೆದು ಒಂದೂವರೆ ಲಕ್ಷ ರೂಪಾಯಿ ನಗದನ್ನು ಎಗರಿಸಿ ಪರಾರಿಯಾಗಲು ಯ ಪ್ರಯತ್ನಿಸಿದ್ದಾನೆ.

ಹಣ ಕಳವಾಗಿರುವುದು ತಕ್ಷಣವೇ ಗಮನಕ್ಕೆ ಬರುತ್ತಿದ್ದಂತೆಯೇ ಎಚ್ಚೆತ್ತ ಅಂಗಡಿ ಮಾಲೀಕ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಆರೋಪಿಗಳ ಬಂಧನ: ದೂರಿನ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡ ಬಿಜ್ನೋರ್ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಶಾಕಿಂಗ್ ವಿಚಾರ: ಪೊಲೀಸ್ ವಿಚಾರಣೆ ವೇಳೆ ಯುವತಿಯ ಹೆಸರು ಲಕ್ಷ್ಮಿ ಎಂದು ತಿಳಿದುಬಂದಿದ್ದು, ಆಕೆಗೆ ಈಗಾಗಲೇ ಮದುವೆಯಾಗಿದ್ದರೂ ತಂದೆಯೊಂದಿಗೆ ಸೇರಿಕೊಂಡು ವಂಚನೆ ಹಾಗೂ ಕಳ್ಳತನದ ಕೃತ್ಯಗಳಲ್ಲಿ ನಿರತರಾಗಿರುವುದು ಬೆಳಕಿಗೆ ಬಂದಿದೆ.

ಪೊಲೀಸ್ ತನಿಖೆ: ಸದ್ಯ ಪೊಲೀಸರು ತಂದೆ-ಮಗಳಿಬ್ಬರನ್ನೂ ಬಂಧಿಸಿದ್ದು, ಇವರ ಹಿಂದಿನ ಕೃತ್ಯಗಳ ಬಗ್ಗೆಯೂ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

ವ್ಯಾಪಾರ ಮಾಡುವ ಸ್ಥಳಗಳಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಈ ರೀತಿಯ ವಂಚನೆ ಎಸಗುವ ಖದೀಮರ ಬಗ್ಗೆ ಸ್ಥಳೀಯ ವರ್ತಕರು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles