Home ದಾವಣಗೆರೆ ದಾವಣಗೆರೆ ಜಲ ಎಚ್ಚರಿಕೆ: ಜಲಾಶಯದ ನೀರು ಕುಡಿಯಲು ಮಾತ್ರ ಮೀಸಲು, ಬೆಳೆ ಬೆಳೆಯದಂತೆ ಜಿಲ್ಲಾಡಳಿತ ರೈತರಿಗೆ ಹೇಳಿದ್ಯಾಕೆ?
ದಾವಣಗೆರೆಬೆಂಗಳೂರು

ದಾವಣಗೆರೆ ಜಲ ಎಚ್ಚರಿಕೆ: ಜಲಾಶಯದ ನೀರು ಕುಡಿಯಲು ಮಾತ್ರ ಮೀಸಲು, ಬೆಳೆ ಬೆಳೆಯದಂತೆ ಜಿಲ್ಲಾಡಳಿತ ರೈತರಿಗೆ ಹೇಳಿದ್ಯಾಕೆ?

Share
ದಾವಣಗೆರೆ
Share

ದಾವಣಗೆರೆ: ಪ್ರಸ್ತುತ ಜಲಾಶಯಗಳ ಒಳಹರಿವು ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ರಾಷ್ಟ್ರೀಯ ಹಾಗೂ ರಾಜ್ಯ ಜಲನೀತಿಗಳನ್ವಯ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿಗೆ ಮಾತ್ರ ಮೀಸಲು ಇಡಬೇಕಾಗಿದೆ.

ಮುಂಬರುವ ದಿನಗಳಲ್ಲಿ ಎಲ್ ನಿನೋ ಪರಿಣಾಮದಿಂದ ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇರುವುದಾಗಿ ಭಾರತೀಯ ಹವಮಾನ ಇಲಾಖೆಯು ಸೂಚನೆ ನೀಡಿರುವುದರಿಂದ ರಾಜ್ಯದ ಹಲವು ಕಡೆ ಬರ ಬರಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ‘ಜಲಾಶಯ ನಂಬಿಕೊಂಡು ಯಾವ ರೈತರು ಬೆಳೆ ಹಾಕಬಾರದು.

ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ನೀರಿಗೆ ಕಾಯ್ದಿರಿಸಲು ನಿರ್ದೇಶನಗಳಿರುವುದರಿಂದ ರೈತರು ಜಲಾಶಯದ ನೀರನ್ನು ಅವಲಂಭಿಸಿರುವ ಬೆಳೆಗಳನ್ನು ಹಾಗೂ ಅಧಿಕ ನೀರು ಬೇಡುವ ಬೆಳೆಗಳನ್ನು ಬೆಳೆಯದಂತೆ ಹಾಗೂ ರೈತರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಕೃಷಿ ಇಲಾಖಾಧಿಕಾರಿಗಳು ನೀಡುವ ಸಲಹೆಯಂತೆ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯಬೇಕಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಗಂಗಾಧರಸ್ವಾಮಿ ಜಿ. ಎಂ. ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles