Home ದಾವಣಗೆರೆ ₹1.22 ಲಕ್ಷಕ್ಕಿಂತ ಕೆಳಗಿಳಿದ ಚಿನ್ನ, ಶೇ. 6.3ರಷ್ಟು ಕುಸಿದ ಬೆಳ್ಳಿ: ಬೆಲೆ ಇನ್ನೂ ಇಳಿಕೆಯಾಗಲಿದೆಯೇ? ಹೂಡಿಕೆದಾರರ ಮುಂದಿರುವ ಆಯ್ಕೆಗಳೇನು?
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

₹1.22 ಲಕ್ಷಕ್ಕಿಂತ ಕೆಳಗಿಳಿದ ಚಿನ್ನ, ಶೇ. 6.3ರಷ್ಟು ಕುಸಿದ ಬೆಳ್ಳಿ: ಬೆಲೆ ಇನ್ನೂ ಇಳಿಕೆಯಾಗಲಿದೆಯೇ? ಹೂಡಿಕೆದಾರರ ಮುಂದಿರುವ ಆಯ್ಕೆಗಳೇನು?

Share
ಚಿನ್ನ
Share

ನವದೆಹಲಿ: ಅಮೂಲ್ಯ ಲೋಹಗಳ ಮಾರುಕಟ್ಟೆಯಲ್ಲಿ ಭಾರೀ ಮಾರಾಟದ ಒತ್ತಡ ಕಂಡುಬಂದಿದ್ದು, ಚಿನ್ನ ಮತ್ತು ಬೆಳ್ಳಿ ದರಗಳು ತೀವ್ರ ಕುಸಿತ ಕಂಡಿವೆ.

ದೇಶೀಯ ಫ್ಯೂಚರ್ಸ್ ವಹಿವಾಟಿನಲ್ಲಿ ಬೆಳ್ಳಿಯು ಶೇ. 6ಕ್ಕಿಂತ ಹೆಚ್ಚು ಕುಸಿತ ಕಂಡಿದ್ದರೆ, ಚಿನ್ನವು ಶೇ. 4.5ಕ್ಕಿಂತ ಅಧಿಕ ಇಳಿಕೆಯಾಗಿದೆ. ಬೆಳಿಗ್ಗೆ 10.49ರ ಸುಮಾರಿಗೆ ಎಂಸಿಎಕ್ಸ್ (MCX) ಚಿನ್ನದ ಫ್ಯೂಚರ್ಸ್ ಬೆಲೆಯು ಶೇ. 4.54ರಷ್ಟು ಇಳಿಕೆಯಾಗಿ ಪ್ರತಿ 10 ಗ್ರಾಂಗೆ ₹1,21,663ಕ್ಕೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಫ್ಯೂಚರ್ಸ್ ಶೇ. 6.36ರಷ್ಟು ಕುಸಿದು ಪ್ರತಿ ಕೆಜಿಗೆ ₹1,47,464ಕ್ಕೆ ತಲುಪಿದೆ.

ಬೆಲೆ ಕುಸಿತಕ್ಕೆ ಪ್ರಮುಖವಾಗಿ ಫ್ಯೂಚರ್ಸ್ ಮಾರುಕಟ್ಟೆಯಲ್ಲಿನ ಒತ್ತಡ ಹಾಗೂ ಕರೆನ್ಸಿ ಚಲನವಲನಗಳು ಕಾರಣವಾಗಿವೆ ಎಂದು ಎನ್‌ರಿಚ್ ಮನಿ ಸಿಇಒ ಪೊನ್ಮುಡಿ ಆರ್ ವಿಶ್ಲೇಷಿಸಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಶೇ. 0.2ರಷ್ಟು ಬಲಗೊಂಡಿರುವುದು ದೇಶೀಯ ಮಾರುಕಟ್ಟೆಯಲ್ಲಿ ಆಮದು ಚಿನ್ನದ ಬೆಲೆ ಅಗ್ಗವಾಗಲು ಮತ್ತು ದರ ಮತ್ತಷ್ಟು ಇಳಿಯಲು ಕಾರಣವಾಗಿದೆ. ಅತ್ತ ಬೆಳ್ಳಿಯು ಚಿನ್ನಕ್ಕಿಂತಲೂ ತೀವ್ರವಾದ ಮಾರಾಟದ ಒತ್ತಡಕ್ಕೆ ಸಿಲುಕಿ ಭಾರೀ ಕುಸಿತ ದಾಖಲಿಸಿದೆ.

ಬೆಲೆ ಇನ್ನೂ ಎಷ್ಟು ಇಳಿಯಬಹುದು?: ತಜ್ಞರ ಪ್ರಕಾರ ಚಿನ್ನವು ಪ್ರಸ್ತುತ ₹1,22,000–₹1,22,800ರ ಪ್ರಮುಖ ಬೆಂಬಲ ಮಟ್ಟವನ್ನು ಪರೀಕ್ಷಿಸುತ್ತಿದೆ. ಈ ಮಟ್ಟಕ್ಕಿಂತ ಕೆಳಗೆ ಕುಸಿದರೆ ಮುಂದಿನ ಬೆಂಬಲ ₹1,18,000–₹1,19,000ರ ಆಸುಪಾಸಿನಲ್ಲಿ ಕಂಡುಬರಬಹುದು.

ಬೆಳ್ಳಿಯ ಮುಂದಿನ ಹಂತ: ಬೆಳ್ಳಿಗೆ ₹1,48,000 ರಿಂದ ₹1,50,000 ತಕ್ಷಣದ ಬೆಂಬಲ ಮಟ್ಟವಾಗಿದ್ದು, ಇದಕ್ಕಿಂತ ಕೆಳಗೆ ಜಾರಿದರೆ ಪ್ರತಿ ಕೆಜಿಗೆ ₹1,40,000–₹1,42,000 ಮಟ್ಟಕ್ಕೆ ಕುಸಿಯುವ ಸಾಧ್ಯತೆಯಿದೆ.

ಹೂಡಿಕೆದಾರರು ಈಗ ಏನು ಮಾಡಬೇಕು?: ಬೆಲೆ ಇಳಿದಿದೆ ಎಂಬ ಕಾರಣಕ್ಕೆ ತಕ್ಷಣವೇ ದೊಡ್ಡ ಮೊತ್ತದ ಖರೀದಿಗೆ ಮುಗಿಬೀಳುವುದು ಸೂಕ್ತವಲ್ಲ. ಮಾರುಕಟ್ಟೆಯು ಸ್ಥಿರಗೊಳ್ಳುವವರೆಗೆ ಕಾಯುವುದು ಉತ್ತಮ ಎಂದು ವಿಶ್ಲೇಷಕರು ಸಲಹೆ ನೀಡಿದ್ದಾರೆ.

ಹಂತ ಹಂತದ ಹೂಡಿಕೆಗೆ ಸಲಹೆ: ದೀರ್ಘಕಾಲೀನ ಹೂಡಿಕೆದಾರರು ಒಂದೇ ಬಾರಿಗೆ ಹಣ ತೊಡಗಿಸುವ ಬದಲು ಹಂತ ಹಂತವಾಗಿ ಖರೀದಿಸುವುದು ಸುರಕ್ಷಿತ. ಬೆಳ್ಳಿ ಮಾರುಕಟ್ಟೆ ಹೆಚ್ಚು ಅಸ್ಥಿರವಾಗಿರುವುದರಿಂದ ಸಿಲ್ವರ್ ಇಟಿಎಫ್  ಹೂಡಿಕೆದಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಹಾಗೂ ಈಗಾಗಲೇ ಹೂಡಿಕೆ ಮಾಡಿರುವವರು ಗಾಬರಿಯಾಗಿ ಮಾರಾಟ ಮಾಡುವ ಅಗತ್ಯವಿಲ್ಲ.

Share

Recent Posts

Recent Comments

No comments to show.
Related Articles