ಬೆಂಗಳೂರು / ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ತಮಿಳು ಮೂಲದ ವ್ಯಕ್ತಿಗಳು ಮೃತಪಟ್ಟ ಪ್ರಕರಣ ಈಗ ಕರ್ನಾಟಕ ಹಾಗೂ ತಮಿಳುನಾಡು ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಈ ವಿಚಾರದಲ್ಲಿ ತಮಿಳುನಾಡು ನಾಯಕರ ಹಸ್ತಕ್ಷೇಪವನ್ನು ಖಂಡಿಸಿರುವ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ನಮ್ಮ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಮೂಗು ತೂರಿಸಬೇಡಿ, ನಿಮ್ಮ ಕೆಲಸವನ್ನು ನೀವು ಮಾಡಿ” ಎಂದು ತಮಿಳುನಾಡು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ 15ರಂದು ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಅರಣ್ಯ ವಲಯದಲ್ಲಿ ಅಕ್ರಮ ಬೇಟೆಗಾರರೆನ್ನಲಾದ ನಾಲ್ವರ ತಂಡದ ಮೇಲೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬೇಟೆಗಾರರು ಗನ್ ತೋರಿಸಿ ದಾಳಿಗೆತ್ನಿಸಿದಾಗ ಆತ್ಮರಕ್ಷಣೆಗಾಗಿ ಅರಣ್ಯ ರಕ್ಷಕರು ಗುಂಡು ಹಾರಿಸಿದ್ದು, ಮೂವರು ಮೃತಪಟ್ಟಿದ್ದರು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಆದರೆ, ಈ ಘಟನೆಯನ್ನು “ಸಂಹಾರ” ಎಂದು ಕರೆದಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ಅಲ್ಲಿನ ವಿಪಕ್ಷಗಳು, ಸಿಬಿಐ ತನಿಖೆ ಮತ್ತು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿವೆ. ಇದಕ್ಕೆ ತಿರುಗೇಟು ನೀಡಿದ ಸಿಎಂ ಡಿ.ಕೆ. ಶಿವಕುಮಾರ್, “ಇದು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಕರ್ನಾಟಕದ ಆಡಳಿತ ವಿಚಾರದಲ್ಲಿ ತಮಿಳುನಾಡು ನಾಯಕರು ಹಸ್ತಕ್ಷೇಪ ಮಾಡಬಾರದು. ಘಟನೆ ಕುರಿತು ಈಗಾಗಲೇ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
- Cauvery Wildlife Sanctuary
- Chamarajanagar Poaching Case
- DK Shivakumar
- Hanur Forest Firing
- Inter-State Dispute
- Karnataka Forest Shootout
- Karnataka TN Border Controversy
- Magisterial Inquiry
- Vijay CM Tamil Nadu
- ಕರ್ನಾಟಕ ತಮಿಳುನಾಡು ವಿವಾದ
- ಕಾವೇರಿ ವನ್ಯಜೀವಿ ಧಾಮ
- ಚಾಮರಾಜನಗರ ಅರಣ್ಯ ಇಲಾಖೆ
- ಡಿ. ಕೆ. ಶಿವಕುಮಾರ್
- ತಮಿಳುನಾಡು ಸರ್ಕಾರ
- ಮ್ಯಾಜಿಸ್ಟ್ರೇಟ್ ತನಿಖೆ
- ರಾಜಕೀಯ ಸಂಘರ್ಷ.
- ಸಿಎಂ ವಿಜಯ್
- ಹನೂರು ಗುಂಡಿನ ಚಕಮಕಿ





Leave a comment