Home ದಾವಣಗೆರೆ ಬಿಜೆಪಿಯೊಂದಿಗೆ ಮಾತುಕತೆ ಯಶಸ್ವಿ: ಕೌನ್ಸಿಲರ್ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದ ಆರ್‌ ಶ್ರೀಲೇಖಾ!
ದಾವಣಗೆರೆನವದೆಹಲಿಬೆಂಗಳೂರು

ಬಿಜೆಪಿಯೊಂದಿಗೆ ಮಾತುಕತೆ ಯಶಸ್ವಿ: ಕೌನ್ಸಿಲರ್ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದ ಆರ್‌ ಶ್ರೀಲೇಖಾ!

Share
ಬಿಜೆಪಿ
Share

ತಿರುವನಂತಪುರಂ: ಕೇರಳ ರಾಜಧಾನಿಯ ತಿರುವನಂತಪುರಂ ಮಹಾನಗರ ಪಾಲಿಕೆಯ ಬಿಜೆಪಿ ಕೌನ್ಸಿಲರ್ ಹಾಗೂ ರಾಜ್ಯದ ಮಾಜಿ ಡಿಜಿಪಿ ಆರ್‌. ಶ್ರೀಲೇಖಾ ಅವರು ನೀಡಿದ್ದ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಬಿಜೆಪಿ ಉನ್ನತ ನಾಯಕರೊಂದಿಗೆ ನಡೆದ ಸುದೀರ್ಘ ಮಾತುಕತೆಯ ನಂತರ ಅವರು ಕೌನ್ಸಿಲರ್ ಆಗಿ ಮುಂದುವರಿಯಲು ಸಮ್ಮತಿಸಿದ್ದು, ಬಿಜೆಪಿಗೆ ಎದುರಾಗಿದ್ದ ತೀವ್ರ ರಾಜಕೀಯ ಬಿಕ್ಕಟ್ಟು ಸದ್ಯ ಶಮನಗೊಂಡಿದೆ.

ತಿರುವನಂತಪುರಂ ಪಾಲಿಕೆಯ ಶಾಸ್ತಮಂಗಲಂ ವಾರ್ಡ್‌ನಿಂದ ಸ್ಪರ್ಧಿಸಿ ಭಾರಿ ಬಹುಮತದಿಂದ ಗೆಲುವು ಸಾಧಿಸಿದ್ದ ಶ್ರೀಲೇಖಾ ಅವರು, ಮೇಯರ್ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದರು. ಶನಿವಾರ ದಿಢೀರನೆ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಪಕ್ಷಕ್ಕೆ ಆಘಾತ ನೀಡಿದ್ದರು. ಪಾಲಿಕೆಯಲ್ಲಿ ಆಡಳಿತ ಉಳಿಸಿಕೊಳ್ಳಲು ಪ್ರತಿ ಸ್ಥಾನವೂ ನಿರ್ಣಾಯಕವಾಗಿದ್ದರಿಂದ ಬಿಜೆಪಿ ನಾಯಕತ್ವ ತಕ್ಷಣವೇ ಕಾರ್ಯಪ್ರವೃತ್ತರಾಗಿ ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದೆ.

ಮೇಯರ್ ಸ್ಥಾನದ ಮೇಲಿನ ಅಸಮಾಧಾನ:

ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 45 ವರ್ಷಗಳ ಎಡಪಂಥೀಯ (LDF) ಆಡಳಿತಕ್ಕೆ ತೆರೆ ಎಳೆದು ಐತಿಹಾಸಿಕ ಜಯ ಸಾಧಿಸಿತ್ತು. ಚುನಾವಣಾ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದ ಶ್ರೀಲೇಖಾ ಅವರಿಗೆ ಮೇಯರ್ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಪಕ್ಷವು ವಿ.ವಿ. ರಾಜೇಶ್ ಅವರನ್ನು ಮೇಯರ್ ಆಗಿ ಆಯ್ಕೆ ಮಾಡಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಸಂಖ್ಯಾಬಲದ ಆತಂಕ ದೂರ:

101 ಸದಸ್ಯ ಬಲದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು 50 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಒಬ್ಬ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿದೆ. ಶ್ರೀಲೇಖಾ ಅವರ ರಾಜೀನಾಮೆಯಿಂದ ಬಿಜೆಪಿಯ ಸಂಖ್ಯಾಬಲ 48ಕ್ಕೆ ಕುಸಿಯುವ ಭೀತಿ ಇತ್ತು. ಇದೀಗ ಅವರು ರಾಜೀನಾಮೆ ಹಿಂಪಡೆದಿರುವುದರಿಂದ ಬಿಜೆಪಿ ಆಡಳಿತಕ್ಕೆ ಎದುರಾಗಿದ್ದ ತಕ್ಷಣದ ಕಂಟಕ ದೂರವಾದಂತಾಗಿದೆ.
ಶ್ರೀಲೇಖಾ ಅವರು ಕೇರಳದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದು, 2020ರಲ್ಲಿ ಡಿಜಿಪಿಯಾಗಿ ನಿವೃತ್ತರಾದ ಬಳಿಕ 2024ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಅವರು ಕೇರಳ ಬಿಜೆಪಿ ರಾಜ್ಯ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
Share

Leave a comment

Leave a Reply

Your email address will not be published. Required fields are marked *

Related Articles