Home ಕ್ರೈಂ ನ್ಯೂಸ್ ಸಾಯಲು ಯತ್ನಿಸಿದರೂ ಬದುಕಿದೆ, ಆತ್ಮಹತ್ಯೆ ಯತ್ನ ವಿಫಲವಾದಾಗ ಬೇಸರವಾಗಿತ್ತು: ದೌರ್ಜನ್ಯದ ಬಗ್ಗೆ ಮೈಕೆಲ್ ಜಾಕ್ಸನ್ ಮಗಳು ಓಪನ್ ಟಾಕ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಾಯಲು ಯತ್ನಿಸಿದರೂ ಬದುಕಿದೆ, ಆತ್ಮಹತ್ಯೆ ಯತ್ನ ವಿಫಲವಾದಾಗ ಬೇಸರವಾಗಿತ್ತು: ದೌರ್ಜನ್ಯದ ಬಗ್ಗೆ ಮೈಕೆಲ್ ಜಾಕ್ಸನ್ ಮಗಳು ಓಪನ್ ಟಾಕ್!

Share
ಮೈಕೆಲ್ ಜಾಕ್ಸನ್
Share

ನವದೆಹಲಿ: ಪಾಪ್ ಕಿಂಗ್ ಮೈಕೆಲ್ ಜಾಕ್ಸನ್ ಅವರ 28 ವರ್ಷದ ಪುತ್ರಿ ಪ್ಯಾರಿಸ್ ಜಾಕ್ಸನ್ ತಮ್ಮ ಜೀವನದ ಅತ್ಯಂತ ಕತ್ತಲೆಯ ದಿನಗಳು, ಆತ್ಮಹತ್ಯೆಯ ಯತ್ನಗಳು ಹಾಗೂ ಮಾದಕ ವ್ಯಸನದ ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೇ ಶೆಟ್ಟಿ ಅವರ ‘ಆನ್ ಪರ್ಪಸ್’ ಪೋಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ತಮ್ಮ ಅಪ್ರಾಪ್ತ ವಯಸ್ಸಿನಲ್ಲಿ ಎದುರಿಸಿದ ಮಾನಸಿಕ ಸಂಕಟಗಳನ್ನು ಬಿಚ್ಚಿಟ್ಟಿದ್ದಾರೆ.

15ನೇ ವಯಸ್ಸಿನಲ್ಲೇ ಆತ್ಮಹತ್ಯೆ ಯತ್ನ, ರಿಹ್ಯಾಬ್ ಸೆಂಟರ್‌ನಲ್ಲಿ ಹಿಂಸೆ:

2009ರಲ್ಲಿ ತಂದೆ ಮೈಕೆಲ್ ಜಾಕ್ಸನ್ ನಿಧನದ ನಂತರ ಖಿನ್ನತೆಗೆ ಒಳಗಾದ ಪ್ಯಾರಿಸ್, ತಮ್ಮ 15ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಬಳಿಕ ಅವರನ್ನು ಯೂಟಾದಲ್ಲಿರುವ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದರೆ ಅಲ್ಲಿ ಅವರಿಗೆ ಚಿಕಿತ್ಸೆ ಸಿಗುವ ಬದಲು ಮಾನಸಿಕ, ಭಾವುಕ ಮತ್ತು ಆಧ್ಯಾತ್ಮಿಕ ಕಿರುಕುಳ ಎದುರಾಯಿತು. “ಆ ಸೆಂಟರ್‌ನಿಂದ ಹೊರಬಂದ ಮೇಲೆ ನನಗೆ ಪಿಟಿಎಸ್‌ಡಿ (PTSD) ಸಮಸ್ಯೆ ಹೆಚ್ಚಾಯಿತು” ಎಂದು ಅವರು ಹೇಳಿಕೊಂಡಿದ್ದಾರೆ.

“ಆತ್ಮಹತ್ಯೆ ವಿಫಲವಾದಾಗ ಬೇಸರವಾಗಿತ್ತು”:

ತಮ್ಮ ಯುವಾವಸ್ಥೆಯಲ್ಲಿ ತೀವ್ರ ನಿದ್ರಾಹೀನತೆಯಿಂದ ಬಳಲುತ್ತಿದ್ದ ಪ್ಯಾರಿಸ್, ಅತಿಯಾದ ಮಾತ್ರೆ ಹಾಗೂ ಮದ್ಯ ಸೇವಿಸಿ ಜೀವ ಕಳೆದುಕೊಳ್ಳಲು ಯತ್ನಿಸಿದ್ದರು. ನಾಲ್ಕು ಗಂಟೆಗಳ ನಂತರ ಎಚ್ಚರಗೊಂಡಾಗ, “ಅಯ್ಯೋ, ಇದು ಕೂಡ ಕೆಲಸ ಮಾಡಲಿಲ್ಲವೇ” ಎಂದು ಬೇಸರಪಟ್ಟುಕೊಂಡಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ಪ್ರಸ್ತುತ ಸುಧಾರಣೆ ಹಾಗೂ ಹೊಸ ಆಲ್ಬಂ:

ಮದ್ಯಪಾನದಿಂದ ಸಂಪೂರ್ಣವಾಗಿ ದೂರವಿದ್ದು ಸೋಬರ್ ಆಗಿರುವ ಪ್ಯಾರಿಸ್, ಪ್ರಸ್ತುತ ಥೆರಪಿ, ಧ್ಯಾನ ಹಾಗೂ ಪ್ರಾರ್ಥನೆಗಳ ಮೂಲಕ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಪಡೆದ ಎಲೆಕ್ಟ್ರೋಕನ್ವಲ್ಸಿವ್ ಥೆರಪಿ (ECT) ಅನುಭವವು ಅವರ ಮುಂಬರುವ ‘ಹ್ಯಾಪಿಯೆಸ್ಟ್ ಡೇ ಆಫ್ ಮೈ ಲೈಫ್’ ಆಲ್ಬಂಗೆ ಪ್ರೇರಣೆಯಾಗಿದೆ.

Share

Leave a comment

Leave a Reply

Your email address will not be published. Required fields are marked *