ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ‘ ಯೋಜನೆಯಡಿ (Gruha Lakshmi Scheme) ಈಗಾಗಲೇ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಮರುಅರ್ಜಿ ಅಥವಾ ಮರುನೋಂದಣಿ ಮಾಡಿಸಬೇಕು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿವೆ. ಈ ಗೊಂದಲಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಧಿಕೃತ ಸ್ಪಷ್ಟನೆ ನೀಡಿದ್ದು, “ಇದು ಸಂಪೂರ್ಣ ಸುಳ್ಳು ಸುದ್ದಿ, ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು” ಎಂದು ತಿಳಿಸಿದ್ದಾರೆ.
ಯಾವುದೇ ಹೊಸ ಆದೇಶ ಬಂದಿಲ್ಲ:
ಗೃಹಲಕ್ಷ್ಮಿ ಯೋಜನೆಯ ಮರುನೋಂದಣಿ ಅಥವಾ ಇ-ಕೆವೈಸಿ (e-KYC) ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರಧಾನ ಕಚೇರಿಯಿಂದ ಇದುವರೆಗೆ ಯಾವುದೇ ಅಧಿಕೃತ ಆದೇಶವಾಗಲಿ ಅಥವಾ ಹೊಸ ಮಾರ್ಗಸೂಚಿಗಳಾಗಲಿ ಹೊರಬಿದ್ದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಕಚೇರಿಗಳಿಗೆ ಅಲೆಯಬೇಡಿ:
ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ಸದ್ಯದ ಫಲಾನುಭವಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ. ಸಾರ್ವಜನಿಕರು ಸೈಬರ್ ಕೇಂದ್ರಗಳಿಗೆ ಅಥವಾ ಇಲಾಖೆಯ ಕಚೇರಿಗಳಿಗೆ ಅನಗತ್ಯವಾಗಿ ಭೇಟಿ ನೀಡಿ ಸಮಯ ಹಾಗೂ ಹಣ ವ್ಯರ್ಥ ಮಾಡಿಕೊಳ್ಳಬಾರದು. ಒಂದು ವೇಳೆ ಭವಿಷ್ಯದಲ್ಲಿ ಯಾವುದೇ ಬದಲಾವಣೆ ತರಲಿದ್ದರೂ, ಅದನ್ನು ಸರ್ಕಾರದ ವತಿಯಿಂದ ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕವೇ ಜನರಿಗೆ ತಿಳಿಸಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ನೆನಪಿಸಿದ್ದಾರೆ.
- Gruha Lakshmi application status
- Gruha Lakshmi fake news
- Gruha Lakshmi Scheme
- Gruhalakshmi eKYC update
- Gruhalakshmi re registration rumors
- Karnataka Guarantee Schemes
- Women and Child Development Department Karnataka
- ಇ-ಕೆವೈಸಿ ಸುಳ್ಳು ಸುದ್ದಿ
- ಕರ್ನಾಟಕ ಗ್ಯಾರಂಟಿ ಯೋಜನೆ
- ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ 2026
- ಗೃಹಲಕ್ಷ್ಮಿ ಮರುನೋಂದಣಿ ವದಂತಿ
- ಗೃಹಲಕ್ಷ್ಮಿ ಯೋಜನೆ
- ಗೃಹಲಕ್ಷ್ಮಿ ಹೊಸ ಅಪ್ಡೇಟ್
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ





Leave a comment