ಮಹಬೂಬಾಬಾದ್ (ತೆಲಂಗಾಣ): “ನನ್ನ ಗಂಡನನ್ನು ರೋಡ್ ಆಕ್ಸಿಡೆಂಟ್ ಮಾಡಿ ಕೊಂದುಬಿಡು, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ…” – ಇದು ಪರಪುರುಷನ ಮೋಹಕ್ಕೆ ಬಿದ್ದು, ತನ್ನ ತಾಳಿ ಕಟ್ಟಿದ ಗಂಡನನ್ನೇ ಮುಗಿಸಲು ಸಂಚು ರೂಪಿಸಿದ್ದ ಪತ್ನಿಯೊಬ್ಬಳು ಪ್ರಿಯಕರನಿಗೆ ಕಳುಹಿಸಿದ ವಾಟ್ಸಾಪ್ ಸಂದೇಶ!
ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಚಿಲಕೋಡು ಗ್ರಾಮದಲ್ಲಿ ಇಂತಹದ್ದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಗಂಡನ ಸಮಯಪ್ರಜ್ಞೆಯಿಂದಾಗಿ ನಡೆಯಬೇಕಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.
ಘಟನೆಯ ಹಿನ್ನೆಲೆ
ಚಿಲಕೋಡು ಗ್ರಾಮದ ನಿವಾಸಿ ಹಾಗೂ ಖಾಸಗಿ ಆಸ್ಪತ್ರೆ ಉದ್ಯೋಗಿಯಾದ ಗೇಡೆ ರಾಜೇಶ್ವರ್ ರಾವ್ ಎಂಬುವವರಿಗೆ 2016ರಲ್ಲಿ ಭವಾನಿ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಕಳೆದ ಕೆಲವು ಸಮಯದಿಂದ ಭವಾನಿ, ಕೊರಿಯರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸೈದುಲು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು.
ಜುಲೈ 27ರಂದು ರಾಜೇಶ್ವರ್ ರಾವ್ ಮಧ್ಯಾಹ್ನದ ಊಟಕ್ಕೆ ಮನೆಗೆ ಬಂದಾಗ, ಪತ್ನಿ ಭವಾನಿ ಹಾಗೂ ಆಕೆಯ ಪ್ರಿಯಕರ ಸೈದುಲು ಅನುಮಾನಾಸ್ಪದ ರೀತಿಯಲ್ಲಿ ಸಿಕ್ಕಿಬಿದ್ದಿದ್ದರು. ಈ ವಿಚಾರವಾಗಿ ಮರುದಿನ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಕೂಡ ನಡೆದಿತ್ತು.
ಸಂಚು ಬಯಲಾಗಿದ್ದು ಹೇಗೆ?
ಪಂಚಾಯಿತಿ ನಡೆದ ದಿನವೇ ರಾಜೇಶ್ವರ್ ರಾವ್ ತಮ್ಮ ಸಹೋದರನನ್ನು ಕರೆತರಲು ನೆರೆಹೊರೆಯ ಗ್ರಾಮಕ್ಕೆ ತೆರಳುತ್ತಿದ್ದಾಗ ಸೈದುಲು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ. ಇದರಿಂದ ಅನುಮಾನಗೊಂಡ ರಾಜೇಶ್ವರ್ ರಾವ್ ಅಲ್ಲಿಂದ ತಕ್ಷಣವೇ ತಪ್ಪಿಸಿಕೊಂಡು ಮನೆಗೆ ಮರಳಿದ್ದಾರೆ. ಬಳಿಕ ಪತ್ನಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿದ್ದ ಚಾಟ್‌ಗಳನ್ನು ನೋಡಿ ಕಂಗಾಲಾಗಿದ್ದಾರೆ.
ಚಾಟ್‌ನಲ್ಲಿ ಭವಾನಿ, “ಗಂಡನನ್ನು ಕಾರು ಅಥವಾ ಬೈಕ್ ಅಪಘಾತದಂತೆ ಬಿಂಬಿಸಿ ಕೊಲೆ ಮಾಡು, ಇಲ್ಲದಿದ್ದರೆ ನಾನು ಸಾಯುತ್ತೇನೆ” ಎಂದು ಪ್ರಿಯಕರನಿಗೆ ಬೆದರಿಕೆ ಹಾಕಿ, ಮನೆಯಿಂದ ಹೊರಗಡೆ ಕೊಲೆ ಮಾಡುವಂತೆ ಪ್ಲಾನ್ ಕೊಟ್ಟಿರುವುದು ಗೊತ್ತಾಗಿದೆ.
ಪೋಲಿಸ್ ದೂರು ಮತ್ತು ತನಿಖೆ
ತಕ್ಷಣವೇ ಜಾಗರೂಕರಾದ ರಾಜೇಶ್ವರ್ ರಾವ್, ಚಾಟ್‌ಗಳ ಸ್ಕ್ರೀನ್‌ಶಾಟ್ ತೆಗೆದುಕೊಂಡು ದೋರ್ನಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಜೀರೋ ಎಫ್‌ಐಆರ್ (Zero FIR) ದಾಖಲಿಸಿಕೊಂಡು ಪ್ರಕರಣವನ್ನು ಖಮ್ಮಂ ರೂರಲ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ತಮಗೆ ಜೀವ ಬೆದರಿಕೆ ಇರುವುದರಿಂದ ತಕ್ಷಣವೇ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಪತಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಪೊಲೀಸರು ವಾಟ್ಸಾಪ್ ಸಂಭಾಷಣೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.
- Bhavani Saidulu case
- Crime News India.
- extramarital affair crime
- Gade Rajeshwar Rao
- Khammam police investigation
- Mahabubabad news
- staged road accident plot
- Telangana murder conspiracy
- WhatsApp chat murder plot
- Zero FIR Dornakal
- ಖಮ್ಮಂ ಪೋಲಿಸ್
- ಗೇಡೆ ರಾಜೇಶ್ವರ್ ರಾವ್
- ತೆಲಂಗಾಣ
- ದೋರ್ನಕಲ್ ಪೊಲೀಸ್ ಠಾಣೆ
- ಪತಿ ಕೊಲೆ ಸಂಚು
- ಪರಸ್ತ್ರೀ ಸಂಬಂಧ
- ಭವಾನಿ
- ಮಹಬೂಬಾಬಾದ್ ಸುದ್ದಿ
- ವಾಟ್ಸಾಪ್ ಚಾಟ್ ಬಯಲು
- ಸೈದುಲು





Leave a comment