Home ದಾವಣಗೆರೆ ಗಣಿ ಖಾತೆಯಲ್ಲೇ ಎಸ್. ಎಸ್. ಮಲ್ಲಿಕಾರ್ಜುನ್ ಮುಂದುವರಿಕೆ, ಕೆ. ಎಸ್. ಬಸವಂತಪ್ಪರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು: ಉಳಿದವರಿಗೆ ಯಾವ್ಯಾವ ಖಾತೆ?
ದಾವಣಗೆರೆನವದೆಹಲಿಬೆಂಗಳೂರು

ಗಣಿ ಖಾತೆಯಲ್ಲೇ ಎಸ್. ಎಸ್. ಮಲ್ಲಿಕಾರ್ಜುನ್ ಮುಂದುವರಿಕೆ, ಕೆ. ಎಸ್. ಬಸವಂತಪ್ಪರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು: ಉಳಿದವರಿಗೆ ಯಾವ್ಯಾವ ಖಾತೆ?

Share
ಎಸ್. ಎಸ್. ಮಲ್ಲಿಕಾರ್ಜುನ್
Share

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾಗಿ ಕೆಲವು ದಿನಗಳು ಕಳೆದ ಬಳಿಕ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕೊನೆಗೂ ಖಾತೆ ಹಂಚಿಕೆ ಮಾಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತೋಟಗಾರಿಕೆ ಸಚಿವರಾಗಿದ್ದ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಂದ ತೋಟಗಾರಿಕೆ ಕಿತ್ತುಕೊಂಡು ಕೇವಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ನೀಡಲಾಗಿದ್ದರೆ, ಮಾಯಕೊಂಡ ಶಾಸಕ ಹಾಗೂ ಇದೇ ಮೊದಲ ಬಾರಿಗೆ ಸಚಿವರಾಗಿರುವ ಕೆ. ಎಸ್. ಬಸವಂತಪ್ಪರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಖಾತೆ ನೀಡಲಾಗಿದೆ.

ಕಳೆದ ಆಗಸ್ಟ್ 3 ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅಚ್ಚರಿ ಬೆಳವಣಿಗೆ ಎಂದರೆ ಕೆ. ಹೆಚ್. ಮುನಿಯಪ್ಪರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಲಾಗಿದೆ.

ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಕಾಂಗ್ರೆಸ್ ನಲ್ಲಿ ಭಾರಿ ಭಿನ್ನಮತ ಭುಗಿಲೆದ್ದಿತ್ತು. ಕಾಂಗ್ರೆಸ್​​ ಹೈಕಮಾಂಡ್​​, ಅಳೆದು ತೂಗಿ ನೂತನ ಸಚಿವರಿಗೆ ಜವಾಬ್ದಾರಿ ನೀಡಿದೆ. ನಾಳೆಯಿಂದ ಅಂದರೆ ಆಗಸ್ಟ್ 13ರಿಂದ ಆಗಸ್ಟ್ 27ರವರೆಗೆ ವಿಧಾನಮಂಡಲ ಮುಂಗಾರು ಅಧಿವೇಶನ ನಡೆಯಲಿದ್ದು, ಸಚಿವರಿಗೆ ಖಾತೆ ಹಂಚಿಕೆ ಮಾಡದಿರುವ ಕುರಿತಂತೆ ವಿಪಕ್ಷಗಳು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದವು.

ಯಾವ ಖಾತೆ ಯಾರ್ಯಾರಿಗೆ? ಖಾತೆ ಬದಲಾವಣೆ ಆಗಿರುವುದು ಯಾವುದು?

ಎಸ್​.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂವಿಜ್ಞಾನ ಇಲಾಖೆ

ಕೆ.ಎಸ್.ಬಸವಂತಪ್ಪ- ಮೀನುಗಾರಿಕೆ, ಬಂದರು ಮತ್ತು ಒಳನಾಡು

ಮಧು ಬಂಗಾರಪ್ಪ – ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ

ಹೆಚ್​.ಸಿ.ಬಾಲಕೃಷ್ಣ-ಸಣ್ಣ ನೀರಾವರಿ ಇಲಾಖೆ

ಪುಟ್ಟರಂಗ ಶೆಟ್ಟಿ-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಎನ್​.ಚಲುವರಾಯಸ್ವಾಮಿ-ಕೃಷಿ ಇಲಾಖೆ

ರಿಜ್ವಾನ್ ಅರ್ಷದ್-ಆಹಾರ & ನಾಗರಿಕ ಸರಬರಾಜು ವ್ಯವಹಾರ

ಕೆ.ಹೆಚ್​.ಮುನಿಯಪ್ಪ-ಸಮಾಜ ಕಲ್ಯಾಣ ಇಲಾಖೆ

ಸಂತೋಷ್ ಲಾಡ್-ಕಾರ್ಮಿಕ ಇಲಾಖೆ

ಬಸವರಾಜ ರಾಯರೆಡ್ಡಿ- ಉನ್ನತ ಶಿಕ್ಷಣ ಇಲಾಖೆ

ಜಮೀರ್ ಅಹ್ಮದ್ ಖಾನ್​-ವಸತಿ ಇಲಾಖೆ

ಲಕ್ಷ್ಮಣ ಸವದಿ-ಸಹಕಾರ ಇಲಾಖೆ

ಡಾ.ಅಜಯ್​ ಸಿಂಗ್​-ಅರಣ್ಯ ಇಲಾಖೆ

ಪ್ರಮುಖ ಬದಲಾವಣೆಗಳು:

ಎಸ್. ಎಸ್. ಮಲ್ಲಿಕಾರ್ಜುನ್: ಈ ಹಿಂದೆ ಹೊಂದಿದ್ದ ತೋಟಗಾರಿಕೆ ಇಲಾಖೆಯನ್ನು ಹಿಂಪಡೆದು, ಕೇವಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

ಕೆ. ಹೆಚ್. ಮುನಿಯಪ್ಪ: ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಕೆ. ಎಸ್. ಬಸವಂತಪ್ಪ: ಮೊದಲ ಬಾರಿಗೆ ಸಚಿವರಾಗಿದ್ದು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಖಾತೆ ನೀಡಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles