ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಬೆಂಕಿ ಹಚ್ಚಿ” ಎಂದಿದ್ದ ಕಾಂಗ್ರೆಸ್ ಮುಖಂಡ ಕರೀಂಖಾನ್ ಗಡಿಪಾರು ಮಾಡಿ: ಯಶವಂತರಾವ್ ಜಾಧವ್ ಒತ್ತಾಯ

On: April 14, 2025 6:38 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:14-04-2025

ದಾವಣಗೆರೆ: ರೈಲು, ಬಸ್ಸಿಗೆ ಬೆಂಕಿ ಇಡಬೇಕು, ದಂಗೆ ಏಳಬೇಕು, ಸಾಯಲು ತಯಾರಾಗಬೇಕು ಎಂಬ ಪ್ರಚೋದನಾತ್ಮಕ ವಿಡಿಯೋ ಹರಿಬಿಟ್ಟಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದ ಮಾಜಿ ಸದಸ್ಯ ಕಬೀರ್ ಖಾನ್ ಅಲಿಯಾಸ್ ಕಬೀರ್ ಅಹ್ಮದ್ ಖಾನ್ ನನ್ನು ರಾಜಸ್ತಾನದ ಅಜೀರ್ ನಲ್ಲಿ ಪೊಲೀಸರು ಬ೦ಧಿಸಿದ್ದು ಮೆಚ್ಚುಗೆ ಕಾರ್ಯ. ಆದ್ರೆ, ಈತನನ್ನು ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದು ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚೋದನಕಾರಿಯಾಗಿ ಮಾತನಾಡುವಾಗ ವಿಡಿಯೋ ಮಾಡಿದ್ದ ದುಷ್ಕರ್ಮಿಗಳು ಬಂಧನವಾಗಿ ಎರಡೇ ದಿನದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಯಾವ ಸೆಕ್ಷನ್ ಅವರ
ಮೇಲೆ ದಾಖಲಿಸಲಾಗಿದೆ ಎಂದು ಪ್ರಶ್ನಿಸಿದರು.

ಈ ಹಿಂದೆ ಗಣಪತಿ ಹಬ್ಬದ ವೇಳೆ ಹಿಂದೂ ಅಮಾಯಕ ಯುವಕರು ಕಾಲೇಜು ಹೋಗುತ್ತಿದ್ದಾಗ ಹಲವು ಕೇಸ್ ಗಳನ್ನು ಹಾಕಲಾಗಿತ್ತು. ವಿನಯ್, ವಿಕಾಸ್, ಪ್ರದೀಪ್ ಕೂಲಿ ಮಡುತ್ತಿದ್ದ ಹುಡುಗರು. ಅಮರೇಶ್, ರುದ್ರೇಶ್, ಪ್ರದೀಪ್, ಮಲ್ಲಿಕಾರ್ಜುನ್ ಸೇರಿದಂತೆ ಒಟ್ಟು 17 ಮಂದಿಯೂ ಅಮಾಯಕರೇ. ಗಲಾಟೆ ಸಮಯದಲ್ಲಿ ಇಲ್ಲದವರ ಮೇಲೂ ಒಂದೇ ಕೇಸ್ ಹಾಕಿದ್ದರು. ಜಾಮೀನು ತಕ್ಷಣವೇ ಸಿಗದಂತೆ ಪೊಲೀಸರು ಮಾಡಿದ್ದರು. 24 ದಿನ ಕಾರಾಗೃಹದಲ್ಲಿ ಇರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿದರು.

ಸಮಾಜದಲ್ಲಿ ಅಶಾಂತಿ ಉ೦ಟುಮಾಡುವಂತ ಕೆಲಸವನ್ನು ಹಿಂದೂ ಯುವಕರು ಮಾಡಿಲ್ಲ. ಯಾವುದೇ ಸಮಾಜದ ವಿರುದ್ಧ ಪ್ರಚೋದನಕಾರಿ ವಿಡಿಯೋ ಮಾಡಿಲ್ಲ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿಲ್ಲ. ಆದರೂ ಪ್ರಚೋದನಕಾರಿ ಮತ್ತು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಗೂಂಡಾಗಳಿಗೆ ಹಾಕಲಾಗುತ್ತಿದ್ದ ಕೇಸ್ ಹಾಕಲಾಗಿತ್ತು, ಜಾಮೀನು ರಹಿತ ಕೇಸ್ ದಾಖಲಿಸಲಾಗಿತ್ತು. ಆದ್ರೆ, ಕೋಮುಪ್ರಚೋದಕ, ಪ್ರಚೋದನೆ ನೀಡುವಂಥ ಹೇಳಿಕೆ ಕೊಟ್ಟರೂ ವಿಡಿಯೋ ಮಾಡಿದ್ದ ಇಬ್ಬರು ಬಿಡುಗಡೆ ಆಗಿರುವುದನ್ನು ನೋಡಿದರೆ ಇವರಿಗೆ ಕಾನೂನಿನ ರಕ್ಷಣೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೈತಿಕ ಬೆಂಬಲ ಸಿಕ್ಕಿರುವ ಅನುಮಾನ ಕಾಡುತ್ತಿದೆ ಎಂದು ದೂರಿದರು.

ಕಬೀರ್ ಖಾನ್ ಯಾವುದೇ ಕಾರಣಕ್ಕೂ ಜಾಮೀನಿನ ಮೇಲೆ ಹೊರಗಡೆ ಬರಬಾರದು. ಗೂಂಡಾ ಕಾಯ್ದೆಯಡಿ ಜಿಲ್ಲೆಯಿಂದ ಗಡೀಪಾರು ಮಾಡಬೇಕು. ಯಾವುದೇ ಕಾರಣಕ್ಕೂ ಜಿಲ್ಲಾ ಉಸ್ತುವಾರಿ ಸಚಿವರ ಒತ್ತಡಕ್ಕೆ ಮಣಿಯಬಾರದು. ಮುಂದೆ ಅನಾಹುತಗಳಾದರೆ ಪೊಲೀಸ್ ಇಲಾಖೆಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಯಶವಂತರಾವ್ ಜಾಧವ್ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಣಬೇರು ಜೀವನಮೂರ್ತಿ, ಟಿಂಕರ್ ಮಂಜಣ್ಣ, ಕಿಶೋರ್ ಕುಮಾರ್, ಬಿ. ರಮೇಶ್ ನಾಯ್ಕ್, ರಾಜು ನೀಲಗುಂದ, ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment