Home ದಾವಣಗೆರೆ ನಕಲಿ ಮದುವೆ ಮಾಡಿಸಿ ಹಣ, ಚಿನ್ನಾಭರಣ ಲೂಟಿ ಮಾಡುತ್ತಿದ್ದ ಮಹಿಳೆಯರು, ಯುವತಿಯರು ಸೇರಿದಂತೆ 10 ಮಂದಿ ಬಂಧನ! ಸಿಕ್ಕಿಬಿದ್ದಿದ್ದೇಗೆ ‘ಲುಟೇರಿ ದುಲ್ಹನ್’ ಗ್ಯಾಂಗ್?
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ನಕಲಿ ಮದುವೆ ಮಾಡಿಸಿ ಹಣ, ಚಿನ್ನಾಭರಣ ಲೂಟಿ ಮಾಡುತ್ತಿದ್ದ ಮಹಿಳೆಯರು, ಯುವತಿಯರು ಸೇರಿದಂತೆ 10 ಮಂದಿ ಬಂಧನ! ಸಿಕ್ಕಿಬಿದ್ದಿದ್ದೇಗೆ ‘ಲುಟೇರಿ ದುಲ್ಹನ್’ ಗ್ಯಾಂಗ್?

Share
ಮದುವೆ
Share

ಬಿಹಾರ/ಧನ್‌ಬಾದ್: ಮದುವೆಯ ನೆಪದಲ್ಲಿ ಕುಟುಂಬಗಳನ್ನು ವಂಚಿಸುತ್ತಿದ್ದ 10 ಮಂದಿಯ ‘ಲುಟೇರಿ ದುಲ್ಹನ್’ (ದರೋಡೆಕೋರ ವಧು) ಗ್ಯಾಂಗ್ ಅನ್ನು ಧನ್‌ಬಾದ್ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಕುಟುಂಬವೊಂದಕ್ಕೆ ಮದುವೆಯ ಆಮಿಷವೊಡ್ಡಿ, ನಕಲಿ ವಿವಾಹ ಮಾಡಿಸಿ, ನಂತರ ಹಲ್ಲೆ ನಡೆಸಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ

ಸೆಪ್ಟೆಂಬರ್ 3 ರಂದು ರಾಜಸ್ಥಾನದ ನಿವಾಸಿ ರಮೇಶ್ ನಟ್ ಎಂಬುವವರನ್ನು ಸಪ್ನಾ ಎಂಬ ಮಹಿಳೆ ಸಂಪರ್ಕಿಸಿ, ಮದುವೆಯ ಪ್ರಸ್ತಾಪ ಇಟ್ಟಿದ್ದಳು. ಮಾತುಕತೆ ಮುಂದವರಿದಂತೆ, ರಮೇಶ್ ತಮ್ಮ ಸಹೋದರ, ಅತ್ತಿಗೆ ಮತ್ತು ಮದುವೆಯಾಗಬೇಕಿದ್ದ ಅಳಿಯ ಇಕ್ಬಾಲ್ ಜೊತೆ ರಾಜಸ್ಥಾನದಿಂದ ಧನ್‌ಬಾದ್‌ಗೆ ಆಗಮಿಸಿದ್ದರು.

ಕುಟುಂಬವು ಧನ್‌ಬಾದ್‌ಗೆ ತಲುಪಿದ ನಂತರ, ಗ್ಯಾಂಗ್ ಸದಸ್ಯರು ಮದುವೆಯ ಸಿದ್ಧತೆಯ ನೆಪದಲ್ಲಿ ಅವರಿಂದ ಬಟ್ಟೆ ಮತ್ತು ಆಭರಣಗಳನ್ನು ಖರೀದಿಸುವಂತೆ ಮಾಡಿದ್ದಾರೆ. ಬಳಿಕ ಅವರನ್ನು ಹಳ್ಳಿಯೊಂದಕ್ಕೆ ಕರೆದೊಯ್ದು, ಯುವತಿಯ ಹಣೆಗೆ ಸಿಂಧೂರ ಇಡುವ ಮೂಲಕ ನಕಲಿ ವಿವಾಹ ಶಾಸ್ತ್ರವನ್ನು ನೆರವೇರಿಸಲಾಯಿತು. ಶಾಸ್ತ್ರದ ನಂತರ ವರನ ಕುಟುಂಬವನ್ನು ಊಟಕ್ಕೆ ಆಹ್ವಾನಿಸಲಾಗಿತ್ತು. ವರನ ಕಡೆಯವರು ಅಲ್ಲಿಗೆ ಹೋಗಲು ಹಿಂಜರಿದಾಗ, ಗ್ಯಾಂಗ್ ಸದಸ್ಯರು ಅವರ ಮೇಲೆ ಹಲ್ಲೆ ನಡೆಸಿ ಬೆದರಿಸಿ ಓಡಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ ಮತ್ತು ಬಂಧನ

ಸಂತ್ರಸ್ತ ಕುಟುಂಬವು ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಮೊಬೈಲ್ ಲೊಕೇಶನ್ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದರು. ಡಿಎಸ್ಪಿ ಕುಮಾರ್ ವಿನೋದ್ ನೇತೃತ್ವದ ತಂಡವು ಗ್ಯಾಂಗ್‌ನಲ್ಲಿದ್ದ ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರನ್ನು ಅಜಯ್ ದಾಸ್, ರಾಜೇಶ್ ಕುಮಾರ್, ಮಂತೋಷ್ ಸಾವ್, ಸುಮನ್ ವಿಶ್ವಕರ್ಮ, ಚಂದನ್ ಶರ್ಮಾ, ನೀಲಂ ದೇವಿ, ಪೂಜಾ ಕುಮಾರಿ, ಮಕ್ರಿ ದೇವಿ, ವಿಶು ಯಾದವ್ ಮತ್ತು ರಾಜೇಂದ್ರ ಸಾವ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮದುವೆಗಾಗಿ ಖರೀದಿಸಿದ್ದ ಬಟ್ಟೆಗಳು, ಆಭರಣಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗ್ಯಾಂಗ್ ಈ ಹಿಂದೆಯೂ ಅನೇಕ ಕುಟುಂಬಗಳಿಗೆ ಇದೇ ರೀತಿಯಲ್ಲಿ ವಂಚನೆ ಮಾಡಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles