Home ದಾವಣಗೆರೆ ಐಟಿ ಉದ್ಯೋಗ ತೊರೆದು ಬೆಂಗಳೂರು ರಸ್ತೆಗಳಲ್ಲಿ ಆಟೋ ಓಡಿಸುತ್ತಿರುವ ಮಹಿಳೆ: ಈ ಸ್ಪೂರ್ತಿದಾಯಕ ಕಥೆ ನೀವು ಓದ್ಲೇಬೇಕು!
ದಾವಣಗೆರೆಉದ್ಯೋಗ ವಾರ್ತೆನವದೆಹಲಿಬೆಂಗಳೂರು

ಐಟಿ ಉದ್ಯೋಗ ತೊರೆದು ಬೆಂಗಳೂರು ರಸ್ತೆಗಳಲ್ಲಿ ಆಟೋ ಓಡಿಸುತ್ತಿರುವ ಮಹಿಳೆ: ಈ ಸ್ಪೂರ್ತಿದಾಯಕ ಕಥೆ ನೀವು ಓದ್ಲೇಬೇಕು!

Share
ಐಟಿ
Share

ಬೆಂಗಳೂರು: ಕಾರ್ಪೊರೇಟ್ ಐಟಿ ಉದ್ಯೋಗ ನೀಡುವ ಸುಖ-ಸೌಕರ್ಯಗಳನ್ನು ಬದಿಗೊತ್ತಿ, ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಸ್ಟೀರಿಂಗ್ ಹಿಡಿದ ಮಹಿಳೆಯೊಬ್ಬರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಉತ್ತಮ ಆರೋಗ್ಯ, ಕುಟುಂಬದ ಜವಾಬ್ದಾರಿ ಹಾಗೂ ಕೆಲಸದ ಸಮಯವನ್ನು ತಾವೇ ನಿರ್ಧರಿಸುವ ಸ್ವಾತಂತ್ರ್ಯಕ್ಕಾಗಿ ಆಕೆ ಕೈಗೊಂಡ ಈ ನಿರ್ಧಾರ ಅನೇಕರಿಗೆ ಪ್ರೇರಣೆಯಾಗಿದೆ.

ಹೆಚ್ಚಿನ ಜನರು ಪ್ರತಿಷ್ಠಿತ ಕಾರ್ಪೊಟೆ ಹುದ್ದೆ ಮತ್ತು ಕೈತುಂಬಾ ಸಂಬಳ ಬರುವ ಐಟಿ ಉದ್ಯೋಗಗಳನ್ನೇ ಬಯಸುತ್ತಾರೆ. ಆದರೆ ಇನ್‌ಫ್ಲುಯೆನ್ಸರ್ ತನ್ವಿ ಶೆಟ್ಟಿ ಅವರೊಂದಿಗೆ ಪ್ರಯಾಣಿಸುವಾಗ ತಮ್ಮ ಪಯಣವನ್ನು ಹಂಚಿಕೊಂಡ ಈ ಮಹಿಳೆ ವಿಭಿನ್ನವಾಗಿ ಯೋಚಿಸಿದರು. ಆರೋಗ್ಯ, ಕುಟುಂಬ ಹಾಗೂ ಸಮಯದ ಸ್ವಾತಂತ್ರ್ಯಕ್ಕಿಂತ ಬೇರೇನೂ ಮುಖ್ಯವಲ್ಲ ಎಂದು ನಿರ್ಧರಿಸಿದ ಆಕೆ, ಐಟಿ ಉದ್ಯೋಗವನ್ನು ತೊರೆದು ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಓಡಿಸಲು ಆರಂಭಿಸಿದರು.

ಆರೋಗ್ಯ ಕಾಳಜಿ: ನಿರಂತರ ನೈಟ್ ಶಿಫ್ಟ್‌ಗಳು ಹಾಗೂ ಪಿಸಿಒಡಿಯಂತಹ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಕುಟುಂಬದ ಜವಾಬ್ದಾರಿ: ವಯಸ್ಸಾದ ತಾಯಿಯ ಆರೈಕೆ ಮಾಡುವ ದೊಡ್ಡ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ಸ್ವಾವಲಂಬನೆ ಮತ್ತು ನೆಮ್ಮದಿ: ಆಟೋ ಓಡಿಸುವುದರಿಂದ ಉತ್ತಮ ಆದಾಯದ ಜೊತೆಗೆ ಮಾನಸಿಕ ನೆಮ್ಮದಿ ಹಾಗೂ ಸಮಯದ ಸ್ವಾತಂತ್ರ್ಯ ಸಿಗುತ್ತಿದೆ.

ಕೇವಲ ವೃತ್ತಿ ಮತ್ತು ಸಾಮಾಜಿಕ ಅಂತಸ್ತಿಗೆ ಜೋತುಬೀಳದೆ, ಆರೋಗ್ಯ ಮತ್ತು ಕುಟುಂಬಕ್ಕೆ ಮೊದಲ ಆದ್ಯತೆ ನೀಡಿದ ಈ ಬೆಂಗಳೂರು ಮಹಿಳೆಯ ಕಥೆ ಕಾರ್ಪೊರೇಟ್ ಜಗತ್ತಿನ ಒತ್ತಡದಲ್ಲಿ ಸಿಲುಕಿರುವ ನೌಕರರಿಗೆ ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬಯಸುವ ಮಹಿಳೆಯರಿಗೆ ದೊಡ್ಡ ಸ್ಫೂರ್ತಿಯಾಗಿದೆ.

Share

Leave a comment

Leave a Reply

Your email address will not be published. Required fields are marked *