SUDDIKSHANA KANNADA NEWS/ DAVANAGERE/ DATE:22-10-2023
ಕಲಬುರಗಿ (Kalaburagi): ನಗರದ ಶಾಂತಿ ನಗರದಲ್ಲಿ ಬ್ಯೂಟಿಷಿಯನ್ ಕೊಲೆಗೈದ ಘಟನೆ ನಡೆದಿದೆ. ಶಾಹಿನಾ ಬಾನು (35) ಹತ್ಯೆಗೀಡಾದ ಮಹಿಳೆ. ಆಕೆಯನ್ನು ಕೊಂದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಹಿನ್ನೆಲೆ ಏನು…?
ಶಾಹಿನಾ ಬಾನು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮೊದಲ ಪತಿ ಜೊತೆಗೆ ಸಾಂಸಾರಿಕವಾಗಿ ಭಿನ್ನಾಭಿಪ್ರಾಯ ಬಂದ ಕಾರಣ ವಿಚ್ಚೇದನ ಪಡೆದುಕೊಂಡಿದ್ದರು. ಆ ಬಳಿಕ ಎರಡನೇ ವಿವಾಹವಾಗಿದ್ದರು. ಆದ್ರೆ, ಈಗ ಕುತ್ತಿಗೆಗೆ ವೇಲ್ ನಿಂದ ಬಿಗಿದು ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತಳ ಸಂಬಂಧಿಕರು ಎರಡನೇ ಪತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
Read Also This Story:
BIG BREAKING NEWS: ಚನ್ನಗಿರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರ: ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ಯಾಕೆ….?
ಮಹಿಳಾ ಬ್ಯೂಟಿಷಿಯನ್ ಕುತ್ತಿಗೆಗೆ ವೆಲ್ ದಿಂದ ಬಿಗಿದು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ನಗರದ ಶಾಂತಿ ನಗರದಲ್ಲಿ ನಡೆದಿದ್ದು, ಆಕೆಯ ಎರಡನೇ ಪತಿಯ ಮೇಲೆ ಕುಟುಂಬಸ್ಥರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಬ್ಯೂಟಿ ಪಾರ್ಲರನಲ್ಲಿ ಬ್ಯೂಟಿಷಿಯನ್ ಆಗಿದ್ದ ಶಾಹಿನಾ ಬಾನು ಈ ಮುಂಚೆ ಸೈಯದ್ ಜಿಲಾನಿ ಎಂಬಾತನೊಂದಿಗೆ ಮದುವೆಯಾಗಿದ್ದರು. ಒಬ್ಬ ಪುತ್ರ ಇದ್ದು, ಇಬ್ಬರ ನಡುವೆ ಹೊಂದಾಣಿಕೆ ಬಾರದ ಕಾರಣ ವಿಚ್ಚೇದನ ಪಡೆದಿದ್ದರು.
ಶಾಹಿನಾ ಬಾನು ಜೊತೆಗೆ ಡೈವರ್ಸ್ ಆದ ಮೇಲೆ ಸೈಯದ್ ಜಿಲಾನಿ ಆಕೆಯ ಸಹೋಧರಿಯನ್ನು ಮದುವೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇತ್ತ ಶಾಹಿನಾ ಬಾನು ಕಲಬುರಗಿಯ ಮಹಿಬೂಬ್ ನಗರದ ಶೇಕ್ ಹೈದರ್ ಎಂಬಾತನೊಂದಿಗೆ
ಎರಡನೇ ಮದುವೆಯಾಗಿ ಐದಾರು ವರ್ಷ ಸಂಸಾರ ನಡೆಸಿದ್ದಾರೆ. ಒಂದು ಹೆಣ್ಣು ಮಗು ಇದೆ.
ಆದ್ರೆ ಪತ್ನಿ ಮೇಲೆ ಅನುಮಾನ ಪಟ್ಟು ಇತ್ತೀಚಿಗಷ್ಟೆ ಶೇಕ್ ಹೈದರ್ ಕೂಡಾ ಬಿಟ್ಟಿದ್ದ. ಬಿಟ್ಟು ಹೋಗುವಾಗ ಶೇಖ್ ಹೈದರ್ ತನ್ನೊಂದಿಗೆ ಮಗಳನ್ನು ಕರೆದೊಯ್ದಿದ್ದ. ಆದ್ರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಶಾಹಿನಾ ಬಾನು ತನ್ನ ಪುತ್ರಿಯನ್ನು ಸುಪರ್ದಿಗೆ ಪಡೆದು ತನ್ನ ತಾಯಿಯ ಬಳಿ ಬಿಟ್ಟಿದ್ದಳು. ತಾನು ಮಾತ್ರ ಒಬ್ಬಂಟಿಯಾಗಿ ಶಾಂತಿ ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದಳು ಎಂದು ಮೃತಳ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಆಗಾಗ ತಾಯಿ ಹಾಗೂ ತನ್ನ ಮಕ್ಕಳ ಬಳಿ ಹೋಗಿ ಭೇಟಿಯಾಗಿ ಬರುತ್ತಿದ್ದ ಶಾಹಿನಾ ಬಾನು ಮೊನ್ನೆ ಅ. 20 ರಂದು ಮಗನನ್ನು ಭೇಟಿಯಾಗಿದ್ದಾಳೆ. ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ತಾಯಿಗೆ ಕರೆ ಮಾಡಿ ಮಾತಾಡಿದ್ದಾಳೆ. ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಗಾಬರಿಯಾದ ಮೃತಳ ತಾಯಿ ಮನೆಗೆ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಗಳನ್ನು ಕಸಿದುಕೊಂಡಳು ಅನ್ನೋ ಕಾರಣಕ್ಕೆ ಆಕೆಯ ಎರಡನೇ ಪತಿ ಶೇಖ ಹೈದರ್ ಕೊಲೆ ಮಾಡಿರಬಹುದು ಎಂದು ಶಾಹಿನಾ ಬಾನು ತಾಯಿ ಹೀಮಾಮ ಬೀ ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಆರ್. ಚೇತನ್, ಡಿಸಿಪಿ ಕನಿಕಾ ಸಿಕ್ರಿವಾಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೀಮಾಮ ಬೀ ಹೇಳಿಕೆಯಂತೆ ದೂರು ದಾಖಲಿಸಿಕೊಂಡ ಅಶೋಕ ನಗರ ಠಾಣೆಯ
ಪೊಲೀಸರು ತನಿಖೆ ಮುಂದುವರಿಸಿದ್ದಾರೆ.