SUDDIKSHANA KANNADA NEWS/ DAVANAGERE/ DATE:22-09-2023
ಕಲಬುರಗಿ: ಹಲ್ಲೆ ಪ್ರಕರಣವೊಂದರ ಸಂಬಂಧ ಪೊಲೀಸ್ (Police) ವಶದಲ್ಲಿದ್ದ ಆರೋಪಿಯೊಬ್ಬ ತಪ್ಪಿಸಿಕೊಳ್ಳಲು ಹೋಗಿ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿಯ ಶಿವಾಜಿ ಮರಾಠ ಖಾನಾವಳಿಯಲ್ಲಿ ನಡೆದಿದೆ.
ಈ ಸುದ್ದಿಯನ್ನೂ ಓದಿ:
STOCK MARKET: ಷೇರುಪೇಟೆಯಲ್ಲಿ ಕರಡಿ ಹಿಡಿತ.: ನಿಫ್ಟಿ -68 ಅಂಕ, ಸೆನ್ಸೆಕ್ಸ್ 221 ಅಂಕ ಇಳಿಕೆ
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಮಹಾಂತೇಶ್ ಎಂಬ ವ್ಯಕ್ತಿಯೇ ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರಿದ ಆರೋಪಿ.
ಘಟನೆ ಹಿನ್ನೆಲೆ ಏನು…?
ಮಾಶಾಳ ಗ್ರಾಮದ ಮಹಾಂತೇಶ್ ಅಫಜಲಪುರ ಪಟ್ಟಣದಲ್ಲಿ ವಾಸವಿದ್ದ. ತಿಂಗಳಿಗೆ ಸುಮಾರು 2 ರಿಂದ ಮೂರು ಸಾವಿರ ರೂಪಾಯಿ ವಿದ್ಯುತ್ ಬಿಲ್ ತಿಂಗಳಿಗೆ ಬರುತಿತ್ತು. ಆರು ತಿಂಗಳ ಕರೆಂಟ್ ಬಿಲ್ ಎಂಟು ಸಾವಿರ ರೂಪಾಯಿ ಬಂದಿದ್ದಕ್ಕೆ ರೊಚ್ಚಿಗೆದ್ದಿದ್ದ ಮಹಾಂತೇಶ್, ಜೆಸ್ಕಾಂ ಕಚೇರಿಗೆ ತೆರಳಿ ಉಪ ವಿಭಾಗದ ಎಇಇ ಚಿದಾನಂದ ಕೊಳ್ಳಿ ಅವರ ಜೊತೆ ಜಗಳವಾಡಿದ್ದ. ಈ ವೇಳೆ ಮಾತಿನ ಚಕಮಕಿ ನಡೆದು ವಿಕೋಪತ್ತೆ ತಿರುಗಿತ್ತು. ಚಿದಾನಂದ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದ.
ಈ ಪ್ರಕರಣ ಸಂಬಂಧ ಜೆಸ್ಕಾಂ ಅಧಿಕಾರಿ ಚಿದಾನಂದ ಅಫಜಲಪುರ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹಾಂತೇಶ್ ನನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಊಟಕ್ಕೆಂದು ಶಿವಾಜಿ ಮರಾಠ ಖಾನಾವಳಿಗೆ ಹೋದರು. ಆಗ ಹೊಟ್ಟೆ ತುಂಬ ಊಟ ಮಾಡಿದ ಮಹಾಂತೇಶ್ ಪೊಲೀಸ (Police) ರಿಗೆ ಚಳ್ಳೆ ಹಣ್ಣು ತಿನ್ನಿಸಿ ಹೊಟೇಲ್ ಕಿಚನ್ ನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದಾನೆ. ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಊಟ ಮಾಡಿದ ಬಳಿಕಆರೋಪಿ ಮಹಾಂತೇಶ ಹೋಟೆಲ್ ನ ಕಿಚನ್ ಒಳಗೆ ಹೋಗಿದ್ದಾನೆ. ಈ ವೇಳೆ ಕಿಚನ್ ಹಿಂಬದಿ ಬಾಗಿಲಿನಿಂದ ಎಸ್ಕೆಪ್ ಆಗಲು ಯತ್ನಿಸಿದ್ದಾನೆ. ಆದರೆ ತೆರೆದ ಬಾಗಿಲ ಹೊರಗೆ ಆಳವಾದ ತಗ್ಗು ಗುಂಡಿ ಗಮನಿಸದೆ ಹಾರಿದ್ದಾನೆ. ಈ ವೇಳೆ ಬಲವಾಗಿ ಕೆಳಗೆ ಬಿದ್ದ ಪರಿಣಾಮ ಆರೋಪಿ ಮಹಾಂತೇಶ್ ನ ಬಲಗಾಲು, ಬಲಗೈ ಹಾಗೂ ಸೊಂಟದ ಮೂಳೆಗಳು ಮುರಿದ್ದಿದ್ದು, ತಕ್ಷಣವೇ ಪೊಲೀಸರು ಆತನನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ..
ಜೆಸ್ಕಾಂ ಎಇಇ ಚಿದಾನಂದ ಮೇಲೆ ಹಲ್ಲೆಗೈದಿದ್ದ ಮಹಾಂತೇಶ್ ಈ ಹಿಂದೆ ಬಿಜೆಪಿ ಕಾರ್ಯಕರ್ತನಾಗಿದ್ದ ಎನ್ನಲಾಗಿದೆ. ಅಫಜಲಪುರ ಪಟ್ಟಣದಲ್ಲಿ ಸ್ವಂತ ಮನೆ ಹೊಂದಿದ್ದನು. ಆದರೆ ಮನೆ ಯಾವಗಲೂ ಡೋರ್ ಲಾಕ್ ಇದ್ದಿದ್ದರಿಂದ ಜೆಸ್ಕಾಂ ಸಿಬ್ಬಂದಿ ಒಂದೇ ತಿಂಗಳ ಬಿಲ್ 8 ಸಾವಿರ ರೂಪಾಯಿ ನೀಡಿದ್ದರಂತೆ. ಹೀಗಾಗಿ ಇಷ್ಟೊಂದು ಬಿಲ್ ಅದು ಹೇಗೆ ಬರುತ್ತೆ ಅಂತಾ ಮಹಾಂತೇಶ್ ಜೆಸ್ಕಾಂ ಎಇಇ ಚಿದಾನಂದಗೆ ಪ್ರಶ್ನಿಸಿದ್ದ.
ಅವರಿಂದ ಸಮರ್ಪಕವಾಗಿ ಉತ್ತರ ಬಾರದ ಹಿನ್ನಲೆಯಲ್ಲಿ ತಾಳ್ಮೆ ಕಳೆದುಕೊಂಡು ಹಲ್ಲೆಗೆ ಯತ್ನಿಸಿದ್ದನು. ಹೀಗಾಗಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ನನ್ನ ಕೊಲೆಗೆ ಮಹಾಂತೇಶ್ ಯತ್ನಿಸಿದ್ದ ಅಂತಾ ಅಧಿಕಾರಿ ಚಿದಾನಂದ ಠಾಣೆಗೆ ದೂರು ನೀಡಿದ್ದರು. ಪೊಲೀಸರು ನನ್ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮುನ್ನ ಹೋಟೆಲ್ ಗೆ ಕರೆದುಕೊಂಡು ಹೋಗಿ ನನ್ನ ಹಣದಲ್ಲೆ ಊಟ ಮಾಡಲು ಕೇಳಿದ್ದರು. ಅದಕ್ಕೆ ಒಪ್ಪಿಕೊಂಡಿದ್ದೆ ಅಂತಾ ಮಹಾಂತೇಶ್ ಆರೋಪಿಸಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಪಿ ಮಹಾಂತೇಶ್, ನಾನು ಎಸ್ಕೆಪ್ ಆಗಲು ಪ್ರಯತ್ನಿಸಿಲ್ಲ. ಊಟದ ನಂತ್ರ ನಾನು ಹೋಟೆಲ್ ನ ಕಿಚನ್ ಹಿಂಬದಿ ಬಾಗಿಲು ಬಳಿ ಉಗುಳೋಕೆ ಅಂತಾ ಹೋಗಿದ್ದೆ. ಈ ವೇಳೆ ಕಾಲು ಜಾರಿ ಬಿದ್ದಿದ್ದೇನೆ ಅಷ್ಟೇ ಅಂತಾ ಡ್ರಾಮ ಮಾಡ್ತಿದ್ದಾನೆ.
ಎಸ್ಕೇಪ್ ಯತ್ನ ಸಂಬಂಧ ನಗರದ ಚೌಕ್ ಪೊಲೀಸ್ (Police)ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲು ಸೇರಬೇಕಾದವನು ಪೊಲೀಸರ ಕಸ್ಟಡಿಯಿಂದ ಎಸ್ಕೆಪ್ ಆಗಲು ಯತ್ನಿಸಿ ಕೆಳಗೆ ಬಿದ್ದು ಕೈ-ಕಾಲು ಮುರಿದುಕೊಂಡು ಈಗ ಅಯ್ಯೋ ಅಮ್ಮ ಅಂತಾ ಬಾಯಿ ಬಡಿದುಕೊಳ್ಳುತ್ತಿದ್ದಾನೆ.