Home ದಾವಣಗೆರೆ ಮೆಡಿಕಲ್, ಎಂಜಿನಿಯರ್ ಕಾಲೇಜಿಗಿಂತ ಕುರುಬ ಸಮುದಾಯ ಎಸ್ಟಿಗೆ ಸೇರಬೇಕೆಂಬುದೇ ನನ್ನ ಗುರಿ: ಕಾಗಿನೆಲೆ ಶ್ರೀಗಳ ಘೋಷಣೆ!
ದಾವಣಗೆರೆಬೆಂಗಳೂರು

ಮೆಡಿಕಲ್, ಎಂಜಿನಿಯರ್ ಕಾಲೇಜಿಗಿಂತ ಕುರುಬ ಸಮುದಾಯ ಎಸ್ಟಿಗೆ ಸೇರಬೇಕೆಂಬುದೇ ನನ್ನ ಗುರಿ: ಕಾಗಿನೆಲೆ ಶ್ರೀಗಳ ಘೋಷಣೆ!

Share
ಕುರುಬ
Share

ದಾವಣಗೆರೆ: ನನಗೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜಿಗಿಂತ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬುದೇ ನನ್ನ ಮುಖ್ಯ ಗುರಿ. ಕುರುಬ ಸಮುದಾಯದ ನಾಯಕರೆಲ್ಲರೂ ದೆಹಲಿಗೆ ಹೋಗಿ ಬಂದಿದ್ದೇವೆ. ಬಂಡಾಯ ಭೂಮಿ ದಾವಣಗೆರೆಯಿಂದ ಮತ್ತೆ ಹೋರಾಟ ಶುರು ಮಾಡಿದ್ದೇವೆ, ಯಶಸ್ವಿ ಆಗುತ್ತೇವೆ ಎಂಬ ವಿಶ್ವಾಸ ಇದೆ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರುಗಳಾದ ಪೂಜ್ಯ ಶ್ರೀ ಡಾ. ನಿರಂಜನಾನಂದಪುರಿ ಮಹಾಸ್ವಾಮೀಜಿ ಹೇಳಿದ್ದಾರೆ.

ದಾವಣಗೆರೆ ಜಿಲ್ಲಾ ಕುರುಬ ಸಮಾಜದ ವತಿಯಿಂದ ನೂತನವಾಗಿ ರಾಜ್ಯಸಭಾ ಸದಸ್ಯರಾದ ಮಾ. ನಾಗರಾಜ್ ಅವರಿಗೆ ಆಯೋಜಿಸಿದ್ದ “ಅಭಿಮಾನದ ಅಭಿನಂದನೆ” ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

2012ರಲ್ಲಿ ನಾನು ಹೋರಾಟ ಶುರು ಮಾಡಿದಾಗ ಕುರುಬ ಸಮುದಾಯಕ್ಕೆ ಯಾಕೆ ಎಸ್ಟಿ ನೀಡಬೇಕೆಂಬ ಮನಸ್ಥಿತಿ ನಾಯಕರಲ್ಲಿ ಇತ್ತು. ಈಗ ಮನಸ್ಥಿತಿ ಬದಲಾಗಿದೆ. ಇಂದು ಕುರುಬರಿಗೆ ಎಸ್ಟಿ ಮಾನ್ಯತೆ ಯಾಕೆ ಕೊಡಬಾರದೆಂದು ನಾಯಕರಲ್ಲಿದೆ. ಇದು ನನ್ನ ಮತ್ತು ನಿಮ್ಮ ಕೈಯಲ್ಲಿಲ್ಲ. ಕರ್ನಾಟಕದ ಕುರುಬರ ಕೈಯಲ್ಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅಭಿನಂದಿಸಲು ಈಗಾಗಲೇ ಹತ್ತು ಮಂದಿಯ ಹೆಸರನ್ನು ಕಳುಹಿಸಿಕೊಡಲಾಗಿದೆ. ಆದಷ್ಟು ಬೇಗ ಭೇಟಿಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಇದೆ. ನಮ್ಮ ಸಮಾಜದಿಂದ ಹೋಗಿ ಕಂಬಳಿ ಹೊದಿಸಿ ಬರಬೇಕೆಂಬ ಯೋಜನೆ ಇದೆ. ನಾವೆಲ್ಲರೂ ಹೋಗಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸೋಣ. ಡಾ. ಮಾ. ನಾಗರಾಜ್ ಅವರಿಗೆ ಕೂರಿಸಿ ಕಂಬಳಿ ಹಾಕಿದ್ದು ಶೋಕಿಗಲ್ಲ, ಅಖಂಡ ಕರ್ನಾಟಕದ ಕುರುಬರ ನೋವು ಈ ಕಂಬಳಿಯಲ್ಲಿದೆ. ಜಗದ್ಗುರು ರೇವಣ್ಣ ಸಿದ್ದರು ಈ ಬೇಡಿಕೆ ಈಡೇರಿಸುವಂಥ ಶಕ್ತಿ ನೀಡಲು ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರಂಜನಾನಂದಪುರಿ ಮಹಾಸ್ವಾಮಿಗಳು, ಬಿ. ಹೆಚ್. ಪರಶುರಾಮಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಇನ್ ಸೈಟ್ಸ್ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ, ಪ್ರಸನ್ನಕುಮಾರ ಕೆ., ಹೆಚ್.ಬಿ. ಗೋಣೆಪ್ಪ, ಎಸ್.ಎಲ್. ಆನಂದಪ್ಪ, ಜಡಗನಹಳ್ಳಿ ವಿರುಪಾಕ್ಷಪ್ಪ, ಬಿ.ಬಿ. ಮಲ್ಲೇಶ್, ಹೆಚ್. ಪರಶುರಾಮಪ್ಪ, ಕೆ.
ರೇವಣಸಿದ್ದಪ್ಪ, ಹೆಚ್.ಜಿ. ಸಂಗಪ್ಪ, ಶಿವಾನಂದ ದಳವಾಯಿ, ಪುಷ್ಪಾ ಆನಂದಪ್ಪ, ಗುರುನಾಥ್, ಹಾಲೇಕಲ್ ಅರವಿಂದ್, ಬಿ.ಎಂ. ಸತೀಶ್ ಕೊಳೇನಹಳ್ಳಿ, ರಾಜು ಮೌರ್ಯ, ಪಿ.ಜೆ. ರಮೇಶ್, ಶಿವಣ್ಣ ಮಾಸ್ಟರ್, ವೀರಣ್ಣ, ಅಣಬೇರು ಶಿವಮೂರ್ತಿ, ಅಣ್ಣೆಶ್ ಐರಣಿ, ಪಿ.ಬಿ. ಬೀರಪ್ಪ, ಸೊಕ್ಕೆ ನಾಗರಾಜ್, ಬೈರೇಶ್, ಬೀರಪ್ಪ, ಕೆ.ವಿ. ಚನ್ನಪ್ಪ, ಬಸವರಾಜಪ್ಪ, ಕಲ್ಲೇರ ಬಸವರಾಜ್, ಗೋಣಿಬಸಪ್ಪ ಸೇರಿದಂತೆ ಸಮಾಜದ ಹಿರಿಯರು, ಮುಖಂಡರು ಹಾಗೂ ಯುವ ಬಂಧುಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *