Home ದಾವಣಗೆರೆ ರಾಜನಹಳ್ಳಿ ಶಿವಕುಮಾರ್ ನಿವಾಸದಲ್ಲಿ ಕಮಲ ನಾಯಕರ ಸಮ್ಮಿಲನ: ನೂತನ ಸಂಸದ ಪ್ರೊ. ನಾಗರಾಜ್‌ಗೆ ಸನ್ಮಾನ.
ದಾವಣಗೆರೆಬೆಂಗಳೂರು

ರಾಜನಹಳ್ಳಿ ಶಿವಕುಮಾರ್ ನಿವಾಸದಲ್ಲಿ ಕಮಲ ನಾಯಕರ ಸಮ್ಮಿಲನ: ನೂತನ ಸಂಸದ ಪ್ರೊ. ನಾಗರಾಜ್‌ಗೆ ಸನ್ಮಾನ.

Share
ರಾಜನಹಳ್ಳಿ ಶಿವಕುಮಾರ್
Share

ದಾವಣಗೆರೆ: ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಪ್ರೊ. ಎಂ. ಎ. ನಾಗರಾಜ್ ಅವರಿಗೆ ದೂಡಾ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ರಾಜನಹಳ್ಳಿ ಶಿವಕುಮಾರ್ ಅವರ ನಿವಾಸದಲ್ಲಿ ಅದ್ಧೂರಿ ಸ್ವಾಗತ ಕೋರಿ, ಅಭಿನಂದಿಸಲಾಯಿತು.

ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಗಮಿಸಿದ್ದ ನೂತನ ಸಂಸದರನ್ನು ಗೌರವಿಸುವ ಸಲುವಾಗಿ ರಾಜನಹಳ್ಳಿ ಶಿವಕುಮಾರ್ ಅವರ ಗೃಹದಲ್ಲಿ ವಿಶೇಷ ಸೌಹಾರ್ದ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ವಿವಿಧ ಘಟಕಗಳ ಪ್ರಮುಖ ನಾಯಕರು ಹಾಗೂ ಸಮುದಾಯದ ಗಣ್ಯರು ಭಾಗವಹಿಸಿ ನೂತನ ಸಂಸದರಿಗೆ ಶಾಲು ಹೊದಿಸಿ, ಶುಭ ಕೋರಿದರು.

ಸಭೆಯಲ್ಲಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಜಿ. ಎಸ್. ಶ್ಯಾಮ್, ಪಕ್ಷದ ಹಿರಿಯ ಹಾಗೂ ಪ್ರಮುಖ ಮುಖಂಡರಾದ ಬಿ. ಟಿ. ಸಿದ್ದಪ್ಪ, ಬಿ. ಎಂ. ಸತೀಶ್ ಕೊಳೇನಹಳ್ಳಿ,  ಅಣಜಿ ಗುಡ್ಡೇಶ್ ಹಾಜರಿದ್ದು, ಪಕ್ಷ ಸಂಘಟನೆ ಹಾಗೂ ಜಿಲ್ಲೆಯ ಅಭಿವೃದ್ಧಿ ಕುರಿತು ನೂತನ ಸಂಸದರೊಂದಿಗೆ ಚರ್ಚಿಸಿದರು.

ಇದೇ ವೇಳೆಯಲ್ಲಿ, ಜಿಲ್ಲಾ ಹಾಲುಮತ ಮಹಾಸಭಾದ ಅಧ್ಯಕ್ಷರಾದ ಹಾಲ್ಲೇಕಲ್ಲು ವೀರಣ್ಣ ಅವರು ಉಪಸ್ಥಿತರಿದ್ದು, ನೂತನ ಸಂಸದರಿಗೆ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಿದರು. ಇದರ ಜೊತೆಗೆ ಬಿಜೆಪಿ ಯುವ ಮೋರ್ಚಾ ಮುಖಂಡ ನವೀನ್ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಜನಸೇವೆಯಲ್ಲಿ ಸುದೀರ್ಘ ಅನುಭವ ಹೊಂದಿರುವ ಪ್ರೊ. ಎಂ. ಎ. ನಾಗರಾಜ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವುದು ಜಿಲ್ಲೆ ಹಾಗೂ ರಾಜ್ಯದ ಪ್ರಗತಿಗೆ ಮತ್ತಷ್ಟು ವೇಗ ನೀಡಲಿದೆ ಎಂದು ಸಭೆಯಲ್ಲಿದ್ದ ಪ್ರಮುಖ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles