Home ದಾವಣಗೆರೆ ದಾವಣಗೆರೆಯಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಬಾಡಿಗೆ ದರ ಭಾರಿ ಏರಿಕೆ: ಹೊಸ ದರಪಟ್ಟಿ ಪ್ರಕಟ, ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯಲ್ಲಿ ಜೆಸಿಬಿ, ಟ್ರ್ಯಾಕ್ಟರ್ ಬಾಡಿಗೆ ದರ ಭಾರಿ ಏರಿಕೆ: ಹೊಸ ದರಪಟ್ಟಿ ಪ್ರಕಟ, ನಿಯಮ ಉಲ್ಲಂಘಿಸಿದರೆ 10,000 ರೂ. ದಂಡ!

Share
ದಾವಣಗೆರೆ
Share

ದಾವಣಗೆರೆ: ರಾಜ್ಯದಲ್ಲಿ ಜೆಸಿಬಿ (JCB) ಮತ್ತು ಟ್ರ್ಯಾಕ್ಟರ್‌ಗಳ ಬಾಡಿಗೆ ದರದಲ್ಲಿ ಭಾರಿ ಬದಲಾವಣೆ ಮಾಡಲಾಗಿದ್ದು, ಪರಿಷ್ಕೃತ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಗ್ರೀಸ್, ಆಯಿಲ್, ಟೈಯರ್ ಹಾಗೂ ಇತರೆ ಬಿಡಿಭಾಗಗಳ ಮೇಲಿನ ಜಿಎಸ್‌ಟಿ (GST) ಮತ್ತು ತೆರಿಗೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಜೆಸಿಇ ಮತ್ತು ಟ್ರಾಕ್ಟರಿ ಮಾಲೀಕರ ಸಂಘದ ಅಧ್ಯಕ್ಷ ಜೆಸಿಬಿ ಬಾತಿ ಹನುಮಂತಪ್ಪ ಅವರು ತಿಳಿಸಿದರು.

ಹೊಸ ದರಗಳು ಈಗಾಗಲೇ ಜಾರಿಗೆ ಬಂದಿದ್ದು, ಸಾರ್ವಜನಿಕರು, ಬಿಲ್ಡಿಂಗ್ ಇಂಜಿನಿಯರ್‌ಗಳು, ಡೆವಲಪರ್ಸ್ ಹಾಗೂ ಮಹಾನಗರ ಪಾಲಿಕೆ ಗುತ್ತಿಗೆದಾರರು ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪರಿಷ್ಕೃತ ಬಾಡಿಗೆ ದರಗಳ ವಿವರ ಹೀಗಿದೆ:

ಜೆಸಿಬಿ ಕನಿಷ್ಠ ಬಾಡಿಗೆ (3 ಗಂಟೆಗೆ): ಕನಿಷ್ಠ 3 ಗಂಟೆಯ ಕೆಲಸಕ್ಕೆ 3,600 ರೂಪಾಯಿ ನಿಗದಿಪಡಿಸಲಾಗಿದೆ.

ಜೆಸಿಬಿ 1 ಗಂಟೆಯ ಬಾಡಿಗೆ: ಪ್ರತಿ ಗಂಟೆಗೆ 1,200 ರೂಪಾಯಿ.

ಜೆಸಿಬಿ ಡೋಜಿಂಗ್ (1 ಗಂಟೆಗೆ): ಪ್ರತಿ ಗಂಟೆಗೆ 1,400 ರೂಪಾಯಿ.

ಜೆಸಿಬಿ ಬ್ರೇಕರ್ (1 ಗಂಟೆಗೆ): ಪ್ರತಿ ಗಂಟೆಗೆ 1,600 ರೂಪಾಯಿ.

ಟ್ರ್ಯಾಕ್ಟರ್ ದಿನದ ಬಾಡಿಗೆ: ಕನಿಷ್ಠ 3,300 ರೂಪಾಯಿ.

ರೋಡ್ ರೀಡಿಂಗ್ ಮತ್ತು ಪ್ರಮುಖ ಷರತ್ತುಗಳು:

ಬಾಡಿಗೆ ಆಧಾರದ ಮೇಲೆ ವಾಹನ ಬಳಸುವವರು ಕಡ್ಡಾಯವಾಗಿ ರೋಡ್ ರೀಡಿಂಗ್ ನೀಡಬೇಕು. ಕೆಲಸದ ಸ್ಥಳವು 5 ಕಿಲೋಮೀಟರ್ ಒಳಗಿದ್ದರೆ 1 ಸೈಡ್ ರೀಡಿಂಗ್ ಹಾಗೂ 5 ಕಿಲೋಮೀಟರ್‌ಗಿಂತ ದೂರವಿದ್ದರೆ 2 ಸೈಡ್ ರೀಡಿಂಗ್ ನೀಡಬೇಕಾಗುತ್ತದೆ. ಈ ನಿಯಮಗಳು ಜಿಲ್ಲೆಯ ಇತರೆ ತಾಲ್ಲೂಕುಗಳ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮಾಲೀಕರಿಗೂ ಅನ್ವಯಿಸಲಿದೆ.

ನಿಯಮ ಉಲ್ಲಂಘಿಸಿದರೆ ₹10,000 ದಂಡ!

ಸಂಘದ ತೀರ್ಮಾನದಂತೆ ಎಲ್ಲಾ ಮಾಲೀಕರು ಕಡ್ಡಾಯವಾಗಿ ಇದೇ ದರಪಟ್ಟಿಯನ್ನು ಪಾಲಿಸಬೇಕು. ಒಂದು ವೇಳೆ ಯಾವುದೇ ಮಾಲೀಕರು ನಿಗದಿತ ದರಕ್ಕಿಂತ ಕಡಿಮೆ ಅಥವಾ ಹೆಚ್ಚಿನ ದರ ಪಡೆದು ನಿಯಮ ಉಲ್ಲಂಘಿಸಿದರೆ, ಅಂತವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ 10,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಸಂಘವು ಎಚ್ಚರಿಕೆ ನೀಡಿದೆ.

ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಜಾಧವ್, ಖಜಾಂಚಿ ಸಂಗಮೇಶ್, ಶಾಮನೂರು ರವಿ, ಸಂದೀಪ, ಅರುಣ್, ಮೆಹಬೂಬಾ ಬಾಷಾ, ಯಾಸಿನ್, ಮಲ್ಲೇಶಣ್ಣ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *