SUDDIKSHANA KANNADA NEWS/ DAVANAGERE/ DATE:13-12-2024
ದಾವಣಗೆರೆ: ಎಂದಿಗೂ ಪ್ರತಿಫಲಾಕ್ಷೆ ಬಯಸದ, ಜನರ ಸೇವಕ ಎಂದೇ ಪ್ರಸಿದ್ಧಿಯಾಗಿರುವ ಅಜ್ಜನಗೌಡ್ರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದಾವಣಗೆರೆ ತಾಲೂಕಿನ ಆವರಗೆರೆ ಗ್ರಾಮದ ಅಜ್ಜನಗೌಡ್ರು ಜನರಿಗಾಗಿ ಸೇವೆ ಸಲ್ಲಿಸಿದರೂ ಎಂದಿಗೂ ಪ್ರಚಾರ ಬಯಸದವರು. ಆವರಗೆರೆ ಗ್ರಾಮದಲ್ಲಿ ಎಲ್ಲರಿಗೂ ಚಿರಪರಿಚಿತ.
ಅಂದ ಹಾಗೆ ಶಿವ ಸಹಕಾರ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಅಜ್ಜನ ಗೌಡ್ರು ಎಂ. ಅವರು ನಾಮಪತ್ರ ಸಲ್ಲಿಸಿದರು. ಆವರಗೆರೆ ಗ್ರಾಮದ ಎ. ಜಿ. ಮಹೇಶ್ವರಪ್ಪ ಹಾಗೂ ನಾಗಮ್ಮ ದಂಪತಿ ಪುತ್ರರಾಗಿರುವ ಅಜ್ಜನಗೌಡ್ರು ಉಮೇದುವಾರಿಕೆ ಸಲ್ಲಿಸುವ ಮೂಲಕ ನಿರ್ದೇಶಕರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಅವರು ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.
ಬಿಜೆಪಿ ಪಕ್ಷದ ಕಟ್ಟಾಳು. ಪಕ್ಷದ ಹೋರಾಟ, ಪ್ರತಿಭಟನೆ ಸೇರಿದಂತೆ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಮುಡಾ ಹಗರಣ ವಿರೋಧಿಸಿ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಬೆಂಗಳೂರು ಟು ಮೈಸೂರು ಪಾದಯಾತ್ರೆ ವೇಳೆ ಪಾಲ್ಗೊಂಡು
ಶಿಸ್ತಿನ ಸಿಪಾಯಿ ಎನಿಸಿಕೊಂಡಿದ್ದರು.
ಆವರಗೆರೆ ಗ್ರಾಮದಲ್ಲಿ ಅಜ್ಜನಗೌಡ್ರು ಎಂದರೆ ಜನರಿಗೂ ಅಚ್ಚುಮೆಚ್ಚು. ಕೇವಲ ಗ್ರಾಮ ಮಾತ್ರವಲ್ಲ, ಅಕ್ಕಪಕ್ಕದ, ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಅಜ್ಜನಗೌಡ್ರು ಎಂದ್ರೆ ತುಂಬಾನೇ ಪ್ರೀತಿ. ಅದೇ ರೀತಿಯಲ್ಲಿ ಕಿರಿಯರನ್ನು ವಿಶ್ವಾಸಕ್ಕೆ ಪಡೆಯುವ, ಹಿರಿಯರನ್ನು ಗೌರವಿಸುವ ಅಜ್ಜನಗೌಡ್ರು ವ್ಯಕ್ತಿತ್ವಕ್ಕೆ ಎಲ್ಲರೂ ತಲೆದೂಗುತ್ತಾರೆ.
ಅಜ್ಜನಗೌಡ್ರು ಕೇವಲ ಬಿಜೆಪಿ ಪಕ್ಷದ ಮುಖಂಡರಷ್ಟೇ ಅಲ್ಲ. ಎಲ್ಲಾ ವರ್ಗದ, ಎಲ್ಲಾ ಸಮುದಾಯದವರು, ಎಲ್ಲಾ ಧರ್ಮದವರನ್ನು ಪ್ರೀತಿಯಿಂದ ಕಾಣುವ ಗುಣ ಪ್ರತಿಯೊಬ್ಬರಿಗೂ ಮೆಚ್ಚುಗೆ ಆಗುವಂಥದ್ದು. ಈ ಕಾರಣಕ್ಕಾಗಿ ಅಜ್ಜನಗೌಡ್ರು
ಅಂದರೆ ಜನಮೆಚ್ಚಿದ ನಾಯಕ ಎಂಬ ಹೆಗ್ಗಳಿಕೆ ಇರೋದು.
ಶಿವ ಸಹಕಾರ ಬ್ಯಾಂಕ್ ನ 11 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. 11 ನಿರ್ದೇಶಕ ಸ್ಥಾನಗಳಿಗೆ ಸುಮಾರು 40ಕ್ಕೂ ಹೆಚ್ಚು ಜನರು ಸ್ಪರ್ಧೆ ಮಾಡುತ್ತಿದ್ದಾರೆ. ಅಜ್ಜನಗೌಡ್ರು ಅವರು ಸೇವೆಗೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಹಣ ಮಾಡುವುದಕ್ಕಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಜನರ ಪ್ರೀತಿ ಉಳಿಸಿಕೊಳ್ಳಲು, ತನ್ನಿಂದ ಆದಷ್ಟು ಒಳ್ಳೆಯ ಕೆಲಸ ಮಾಡುವುದಕ್ಕಾಗಿ ಸ್ಪರ್ಧೆ ಮಾಡಿದ್ದೇನೆ. ಷೇರುದಾರರು, ಮತದಾರರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ. ಜನರು
ನನ್ನ ಮೇಲೆ ಇಟ್ಟಿರುವ ವಿಶ್ವಾಸ, ಪ್ರೀತಿಯನ್ನು ಗೆದ್ದ ಬಳಿಕವೂ ಉಳಿಸಿಕೊಳ್ಳುತ್ತೇನೆ ಎನ್ನುತ್ತಾರೆ.
ಅಜ್ಜನಗೌಡ್ರು ವ್ಯಕ್ತಿತ್ವ, ರಾಜಕೀಯ ನಡೆ ಹಾಗೂ ಸಂಘಟನೆ ಚತುರತೆ ಎಲ್ಲರಿಗೂ ಇಷ್ಟವಾಗಿದೆ. ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆವರಗೆರೆಯಲ್ಲಿ ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ
ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಅಜ್ಜನಗೌಡ್ರು ಎಂದರೆ ಊರಿನಲ್ಲಿರುವ ಜನರೆಲ್ಲರೂ ನಮ್ಮ ನಾಯಕರು ಎಂಬಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಶಿವ ಸಹಕಾರ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಗೆದ್ದು, ಅಧ್ಯಕ್ಷರಾಗಿ ಆಯ್ಕೆಯಾಗಲಿ ಎಂಬುದು ಹಿತೈಷಿಗಳು, ಸ್ನೇಹಿತರು, ಆವರಗೆರೆ ಗ್ರಾಮದ ಜನರ ಮನದಾಳದ ಹಾರೈಕೆಯಾಗಿದೆ.