Home ದಾವಣಗೆರೆ ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ ಹವಾ: ರೂ. 800 ಕೋಟಿ ಕ್ಲಬ್‌ಗೆ ಲಗ್ಗೆಯಿಡಲು ಸಜ್ಜಾದ ‘ಜೈಲರ್ 2’!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಬಾಕ್ಸ್ ಆಫೀಸ್‌ನಲ್ಲಿ ರಜನಿಕಾಂತ್ ಹವಾ: ರೂ. 800 ಕೋಟಿ ಕ್ಲಬ್‌ಗೆ ಲಗ್ಗೆಯಿಡಲು ಸಜ್ಜಾದ ‘ಜೈಲರ್ 2’!

Share
ಜೈಲರ್ 2
Share

ಚೆನ್ನೈ / ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಸಿನಿಮಾದ ಗಳಿಕೆಯಲ್ಲಿ ಸಣ್ಣ ಇಳಿಕೆ ಕಂಡುಬಂದಿದ್ದು, ಒಟ್ಟಾರೆ ವಿಶ್ವದಾದ್ಯಂತ ಸಿನಿಮಾವು ರೂ. 800 ಕೋಟಿ ಗಡಿ ದಾಟುವ ಸಮೀಪದಲ್ಲಿದೆ.

ಇಂಡಸ್ಟ್ರಿ ಟ್ರ್ಯಾಕರ್ ಸಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ಬಿಡುಗಡೆಯಾಗಿ 16 ದಿನಗಳು ಕಳೆದಿದ್ದು, ವಿಶ್ವಾದ್ಯಂತ ಒಟ್ಟು ಗ್ರಾಸ್ ಕಲೆಕ್ಷನ್ ರೂ. 776.95 ಕೋಟಿ ತಲುಪಿದೆ.

ಭಾರತದಲ್ಲೇ ಸಿನಿಮಾವು ಒಟ್ಟು ರೂ. 509.45 ಕೋಟಿ ಗ್ರಾಸ್ ಹಾಗೂ ರೂ. 435.40 ಕೋಟಿ ನೆಟ್ ಕಲೆಕ್ಷನ್ ಗಳಿಸಿದೆ. ಬಿಡುಗಡೆಯಾದ ಕೇವಲ 15 ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರೂ. 500 ಕೋಟಿ ಗ್ರಾಸ್ ಗಳಿಸಿದ ಎರಡನೇ ತಮಿಳು ಚಿತ್ರ ಎಂಬ ಹೆಗ್ಗಳಿಗೆ ‘ಜೈಲರ್ 2’ ಪಾತ್ರವಾಗಿದೆ. ಈ ಹಿಂದೆ ರಜನಿಕಾಂತ್ ಅವರೇ ನಟಿಸಿದ್ದ ‘2.0’ ಸಿನಿಮಾ ಈ ಮೈಲಿಗಲ್ಲು ತಲುಪಿದ ಮೊದಲ ತಮಿಳು ಚಿತ್ರವಾಗಿತ್ತು.

ದಿನದ ಕಲೆಕ್ಷನ್: ಮೂರನೇ ಗುರುವಾರ ರೂ. 5.9 ಕೋಟಿ ಗಳಿಸಿದ್ದ ಚಿತ್ರ, ಶುಕ್ರವಾರದಂದು (16ನೇ ದಿನ) ರೂ. 5.50 ಕೋಟಿ ಕಲೆಕ್ಷನ್ ಮಾಡಿದೆ.

ವಿವಿಧ ಭಾಷೆಗಳಲ್ಲಿ ಪ್ರದರ್ಶನ: 16ನೇ ದಿನದಂದು ದೇಶಾದ್ಯಂತ ಒಟ್ಟು 8,079 ಶೋಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿದೆ. ತಮಿಳಿನಲ್ಲಿ ರೂ. 3.75 ಕೋಟಿ, ಹಿಂದಿಯಲ್ಲಿ ರೂ. 1 ಕೋಟಿ, ತೆಲುಗಿನಲ್ಲಿ ರೂ. 55 ಲಕ್ಷ ಹಾಗೂ ಕನ್ನಡದಲ್ಲಿ ರೂ. 20 ಲಕ್ಷ ಸಂಗ್ರಹಿಸಿದೆ.

ಟಿಕೆಟ್ ಮಾರಾಟ: ಸಿನಿಮಾ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 3 ಕೋಟಿಗೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ.

ಸ್ಟಾರ್ ನಟರ ಬಳಗ: ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಎಸ್‌ಜೆ ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ರಮ್ಯಾ ಕೃಷ್ಣನ್ ಸೇರಿದಂತೆ ಮೋಹನ್‌ಲಾಲ್, ಶಿವರಾಜ್‌ಕುಮಾರ್, ಜಾಕಿ ಶ್ರಾಫ್ ಮತ್ತು ಹೃತಿಕ್ ರೋಷನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles