SUDDIKSHANA KANNADA NEWS/ DAVANAGERE/ DATE:25-07-2024
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಪ್ರತಿನಿತ್ಯ ಮನೆಯೂಟಕ್ಕೆ ಮ್ಯಾಜಿಸ್ಟ್ರೇಟ್ ನಿರಾಕರಿಸಿದೆ. ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ದರ್ಶನ್ ತೂಗುದೀಪ ಅವರು ಮನೆಯೂಟಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇಂದು ಆದೇಶ ಕಾಯ್ದಿರಿಸಲಾಗಿತ್ತು. 24ನೇ ಎಸಿಎಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕುರಿತಂತೆ ವಾದ – ಪ್ರತಿವಾದ ಆಲಿಸಲಾಗಿತ್ತು. ಅಂತಿಮವಾಗಿ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಕೋರ್ಟ್ ವಿಶೇಷ ಆತಿಥ್ಯ ಹಾಗೂ ಮನೆಯೂಟಕ್ಕೆ ಅನುಮತಿ ನೀಡಲಾಗದು ಎಂದು ಹೇಳಿ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿರುವ ದರ್ಶನ್ ತೂಗುದೀಪ ಅವರನ್ನು ಕಳೆದ ಒಂದು ತಿಂಗಳ ಹಿಂದೆ ಬಂಧಿಸಲಾಗಿತ್ತು. ಬಂಧನವಾದ ಬಳಿಕ ಮನೆಯೂಟ ಸಿಗದ ಕಾರಣ ಕಾಟೇರ ತೆಳ್ಳಗಾಗಿದ್ದರು. ಮಾತ್ರವಲ್ಲ, ಜೈಲೂಟ ಸೇರುತ್ತಿಲ್ಲ ಎಂದು ಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ, ದರ್ಶನ್ ತೂಗುದೀಪ ಅವರಿಗೆ ಮನೆಯೂಟಕ್ಕೆ ಅನುಮತಿ ನೀಡಿದರೆ ಇತರೆ ಖೈದಿಗಳು ಸಹ ಮನೆಯೂಟಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಾದ – ಪ್ರತಿವಾದ ಆಲಿಸಿ ಅಂತಿಮವಾಗಿ ದರ್ಶನ್ ತೂಗುದೀಪ ಅವರ ಅರ್ಜಿ ವಜಾಗೊಳಿಸಿದ್ದು, ಜೈಲಿನ ಮುದ್ದೆಯನ್ನೇ ದರ್ಶನ್ ತೂಗುದೀಪ ಸೇವಿಸುವಂತಾಗಿದೆ.
ಹೈಕೋರ್ಟ್ ನಲ್ಲಿ ಮತ್ತೆ ಜುಲೈ 29ಕ್ಕೆ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಜೈಲೂಟ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಚಾಲೆಂಜಿಂಗ್ ಸ್ಚಾರ್ ದರ್ಶನ್ ತೂಗುದೀಪ ಅವರಿಗೆ ಫಿಕ್ಸ್ ಆಗಿದೆ.