ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಕ್ರೂಸ್ ದೋಣಿ ದುರಂತವು ಒಂದು ಸುಖಿ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಮ್ಯಾಸಿ ಕುಟುಂಬವು ಗೃಹಪ್ರವೇಶ ಸಮಾರಂಭಕ್ಕಾಗಿ ಜಬಲ್ಪುರಕ್ಕೆ ತೆರಳಿತ್ತು. ಗುರುವಾರ ಸಂಜೆ ಬರ್ಗಿ ಅಣೆಕಟ್ಟಿನ ನರ್ಮದಾ ನದಿಯಲ್ಲಿ ಪ್ರವಾಸ ಕೈಗೊಂಡಾಗ ಈ ದುರ್ಘಟನೆ ಸಂಭವಿಸಿದೆ.
ದೋಣಿ ಮುಳುಗುವ ಮೊದಲು ಮರಿನಾ ಎಂಬುವವರು ತಮ್ಮ ಕುಟುಂಬದವರೊಂದಿಗೆ ವಿಡಿಯೋ ಕಾಲ್‌ನಲ್ಲಿದ್ದರು. “ನನ್ನನ್ನು ಉಳಿಸಿ… ಉಳಿಸಿ…” ಎಂದು ಕಿರುಚುತ್ತಲೇ ಅವರ ಫೋನ್ ಸಂಪರ್ಕ ಕಡಿತಗೊಂಡಿತು.
ಈ ಘಟನೆಯಲ್ಲಿ ಮರಿನಾ (39), ಅವರ ನಾಲ್ಕು ವರ್ಷದ ಮಗ ತ್ರಿಶಾನ್ ಮತ್ತು ತಾಯಿ ಮಧುರ್ ಮ್ಯಾಸಿ (62) ಸಾವನ್ನಪ್ಪಿದ್ದಾರೆ.
ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ನೀಡಿದ್ದರೂ ಪ್ರವಾಸಿಗರಿಗೆ ದೋಣಿ ಪ್ರಯಾಣಕ್ಕೆ ಅವಕಾಶ ನೀಡಿದ್ದು ಮತ್ತು ಲೈಫ್ ಜಾಕೆಟ್‌ಗಳ ಕೊರತೆಯೇ ಈ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಸರ್ಕಾರವು ಈಗಾಗಲೇ ತನಿಖೆಗೆ ಆದೇಶಿಸಿದ್ದು, ಮೂವರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ.





Leave a comment