ಕೋಲ್ಕತ್ತಾ: ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಹೊರಬಿದ್ದಿರುವ ಎಕ್ಸಿಟ್ ಪೋಲ್‌ಗಳ ಕುರಿತು ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಮೀಕ್ಷೆಗಳು ವಾಸ್ತವಕ್ಕೆ ದೂರವಾಗಿದ್ದು, ಕೇವಲ ಸ್ಟಾಕ್ ಮಾರ್ಕೆಟ್ ಮೇಲೆ ಪ್ರಭಾವ ಬೀರಲು ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಮಾರುಕಟ್ಟೆ ಕುಶಲತೆಯ ಆರೋಪ:
“2021 ಮತ್ತು 2024ರಲ್ಲಿ ಮಾಡಿದಂತೆಯೇ ಈಗಲೂ ಷೇರು ಮಾರುಕಟ್ಟೆಯನ್ನು ಮ್ಯಾನಿಪುಲೇಟ್ ಮಾಡಲು ಎಕ್ಸಿಟ್ ಪೋಲ್‌ಗಳನ್ನು ಬಳಸಲಾಗುತ್ತಿದೆ,” ಎಂದು ಅವರು ಕಿಡಿಕಾರಿದ್ದಾರೆ.
ಗೆಲುವಿನ ವಿಶ್ವಾಸ:
ಮೈದಾನದಲ್ಲಿ ಹೋರಾಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ದೀದಿ, ಟಿಎಂಸಿ 200ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ.





Leave a comment