ದಾವಣಗೆರೆ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ವತಿಯಿಂದ 2026-27ನೇ ಸಾಲಿನ ಕೃಷಿ ಮತ್ತು ಕೃಷಿ ಸಂಬಂಧಿತ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಕೃಷಿಕರ ಕೋಟಾದಡಿ ಪ್ರವೇಶ ಪಡೆಯಲು ಇಚ್ಛಿಸುವ, ಈಗಾಗಲೇ ಸಿ.ಇ.ಟಿ (CET-2026) ಅರ್ಜಿಯಲ್ಲಿ ದಾಖಲೆ ಸಲ್ಲಿಸಿ ಅನರ್ಹರಾಗಿರುವ ಅಥವಾ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಲು ದಿನಾಂಕವನ್ನು ಮೇ 4, 2026ರ ಮಧ್ಯಾಹ್ನ 12ಗಂಟೆಯವರೆಗೆ ವಿಸ್ತರಿಸಲಾಗಿದೆ.
ಮೂಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಕೊನೆಯ ಮೇ 4 ರಂದು ಮಧ್ಯಾಹ್ನ 12 ಗಂಟೆಯವರೆಗೆ, ದಾಖಲಾತಿಗಳ ಪರಿಶೀಲನೆ ಹಾಗೂ ಅರ್ಹ ಅಭ್ಯರ್ಥಿಗಳ ಪಟ್ಟಿ ಸಿದ್ಧತೆ: ಮೇ 5 ಸಂಜೆ 4 ಗಂಟೆ, ಅಂತಿಮ ಅರ್ಹತಾ ಪಟ್ಟಿ
ಪ್ರಕಟಣೆ (KEA ಜಾಲತಾಣದಲ್ಲಿ): ಮೇ 7 ರಂದು ಪ್ರಕಟಿಸಲಾಗುವುದು ಪ್ರವೇಶ ಪತ್ರ ಗಳನ್ನು ಮೇ 8 ರಿಂದ 10 ರವರೆಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.
ರಾಜ್ಯದ 17 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೇ 10 ರಂದು ಬೆಳಗ್ಗೆ 9 ಗಂಟೆಗೆ ಪ್ರಾಯೋಗಿಕ ಪರೀಕ್ಷೆಗಳು ಪ್ರಾರಂಭವಾಗಲಿವೆ. ಶಿವಮೊಗ್ಗದ ಕೃಷಿ ಮಹಾವಿದ್ಯಾಲಯ ಹಾಗೂ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯಗಳು ಪರೀಕ್ಷಾ ಕೇಂದ್ರಗಳಾಗಿರುತ್ತವೆ. ಅಭ್ಯರ್ಥಿಗಳು
ಅಂದು ಬೆಳಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಬೇಕು. ತಡವಾಗಿ ಬರುವವರಿಗೆ ಅವಕಾಶವಿರುವುದಿಲ್ಲ.
ಪರೀಕ್ಷಾ ಫಲಿತಾಂಶವು ದಿನಾಂಕ 14-05-2026ರಂದು ಬೆಳಗ್ಗೆ 11 ಗಂಟೆಯೊಳಗೆ ಪ್ರಕಟವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣ www.uahs.edu.in ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣ http://kea.kar.nic.in ಗೆ ಭೇಟಿ ನೀಡಬಹುದು ಎಂದು ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ.
- Agricultural Practical Test
- Agriculture Degree Admission 2026
- Agriculturist Quota
- Document Upload Extension
- Karnataka CET 2026
- KEA
- Keladi Shivappa Nayaka University
- Practical Exam Dates
- UAHS Shivamogga
- ಕೃಷಿ ಪದವಿ ಪ್ರವೇಶ 2026
- ಕೃಷಿ ವಿಜ್ಞಾನ ಕೋರ್ಸ್
- ಕೃಷಿಕರ ಕೋಟಾ
- ಕೆಇಎ
- ದಾಖಲಾತಿ ಸಲ್ಲಿಕೆ ಅವಧಿ ವಿಸ್ತರಣೆ
- ಪ್ರವೇಶ ಪತ್ರ ಡೌನ್‌ಲೋಡ್
- ಪ್ರಾಯೋಗಿಕ ಪರೀಕ್ಷೆ
- ಯುಎಹೆಚ್ಎಸ್ ಶಿವಮೊಗ್ಗ
- ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ





Leave a comment