ದಾವಣಗೆರೆ: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಾಜಿ ಸೈನಿಕರಿಗೊಂದು ಸುವರ್ಣಾವಕಾಶ ದೊರೆತಿದೆ.
ಇಸ್ರೋಗೆ ಸೇರಿದ ಬೆಂಗಳೂರು ಹಾಗೂ ತಿರುವನಂತಪುರಂನ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್’ನಲ್ಲಿ (LPSC) ಖಾಲಿ ಇರುವ ತಾಂತ್ರಿಕ ಬಿ (Technical-B) ಹುದ್ದೆಗಳಿಗೆ ಅರ್ಹ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ ಹಾಗೂ ಇತರೆ ವಿವರಗಳು:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಮಾಜಿ ಸೈನಿಕರು ಎಸ್.ಎಸ್.ಎಲ್.ಸಿ (SSLC) ಜೊತೆಗೆ ಐ.ಟಿ.ಐ (ITI) ಅಥವಾ ಎನ್.ಟಿ.ಸಿ (NTC) / ಎನ್.ಎ.ಸಿ (NAC) ಉತ್ತೀರ್ಣರಾಗಿರಬೇಕು. ಬೆಂಗಳೂರು ಮತ್ತು ತಿರುವನಂತಪುರಂ ಕೇಂದ್ರಗಳಲ್ಲಿ ತಲಾ ಒಂದೊಂದು ತಾಂತ್ರಿಕ ಬಿ ಹುದ್ದೆಗಳು ಖಾಲಿ ಇವೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಆಸಕ್ತ ಹಾಗೂ ಅರ್ಹ ಮಾಜಿ ಸೈನಿಕರು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಗೆ ನೇರವಾಗಿ ಭೇಟಿ ನೀಡಿ ಅಥವಾ ದೂರವಾಣಿ ಸಂಖ್ಯೆ: 08182-220925 ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಅಥವಾ ತಾಂತ್ರಿಕ ಸ್ಪಷ್ಟನೆಗಾಗಿ ಇಸ್ರೋದ ಅಧಿಕೃತ ದೂರವಾಣಿ ಸಂಖ್ಯೆಗಳಾದ 0471-2567729 / 2567781 ಅಥವಾ ಶಿವಮೊಗ್ಗ ಕಚೇರಿಯನ್ನು ಸಂಪರ್ಕಿಸಬಹುದೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ex servicemen job opportunities in Karnataka
- ISRO careers
- ISRO Jobs for Ex Servicemen
- ISRO LPSC recruitment
- LPSC Recruitment.ISRO jobs for ex servicemen
- Shimoga soldier welfare board
- SSLC ITI jobs in ISRO.
- Technical B post in ISRO
- ಇಸ್ರೋ ಉದ್ಯೋಗ
- ಇಸ್ರೋ ತಾಂತ್ರಿಕ ಹುದ್ದೆಗಳು
- ದಾವಣಗೆರೆ ಸುದ್ದಿ
- ಮಾಜಿ ಸೈನಿಕರಿಗೆ ಉದ್ಯೋಗ
- ಶಿವಮೊಗ್ಗ ಸೈನಿಕ ಕಲ್ಯಾಣ ಇಲಾಖೆ





Leave a comment