ದಾವಣಗೆರೆ: ಕರ್ನಾಟಕ ಕುಕ್ಕುಟ ಮಹಾಮಂಡಳ ನಿಯಮಿತ, ಬೆಂಗಳೂರು ಇವರ ವತಿಯಿಂದ 2026-27ನೇ ಸಾಲಿಗೆ ದಾವಣಗೆರೆ ತಾಲ್ಲೂಕಿನ ಗ್ರಾಮೀಣ ಹಾಗೂ ತಾಂಡಾ (ಬಂಜಾರ) ಮಹಿಳೆಯರಿಗೆ ಉಚಿತವಾಗಿ ೫ ವಾರಗಳ ವಯಸ್ಸಿನ ದೇಶಿ ಕೋಳಿಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಮಹಿಳೆಯರು ನಿಗದಿತ ದಿನಾಂಕದೊಳಗೆ ಸಂಬಂಧಪಟ್ಟ ಪಶು ವೈದ್ಯ ಸಂಸ್ಥೆಗಳಲ್ಲಿ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ.
ಫಲಾನುಭವಿಗಳ ವಿವರ: ದಾವಣಗೆರೆ ತಾಲ್ಲೂಕಿನ 99 ಗ್ರಾಮೀಣ ಮಹಿಳೆಯರು ಹಾಗೂ 93 ಬಂಜಾರ ಮಹಿಳೆಯರಿಗೆ ತಲಾ 20 ರಂತೆ 5 ವಾರಗಳ ವಯಸ್ಸಿನ ದೇಶಿ ಕೋಳಿಮರಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಮೀಸಲಾತಿ ವಿವರ: ಸಾಮಾನ್ಯ ವರ್ಗಕ್ಕೆ ಶೇ. 44, ಹಿಂದುಳಿದ ವರ್ಗಕ್ಕೆ ಶೇ. 32, ಪರಿಶಿಷ್ಟ ಜಾೃತಿಗೆ ಶೇ. 17 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7ರಂತೆ ಮೀಸಲಾತಿ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ನಡೆಯಲಿದೆ.
ಅರ್ಜಿ ಸಲ್ಲಿಕೆ ಕೊನೆಯ ದಿನ: ಆಸಕ್ತರು ನವೆಂಬರ್ 15ರೊಳಗೆ ದಾವಣಗೆರೆ ತಾಲ್ಲೂಕಿನ ಪಶು ವೈದ್ಯ ಸಂಸ್ಥೆಗಳಿಂದ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕು.





Leave a comment