Home ದಾವಣಗೆರೆ ದೀಪಾವಳಿಗೆ ಚಿನ್ನದಲ್ಲಿ ಹೂಡಿಕೆ: ಪ್ರತಿವರ್ಷ ರೂ. 25,000 ಹೂಡಿಕೆ ಮಾಡಿದರೆ 10, 15, 25 ವರ್ಷಗಳಲ್ಲಿ ಇದರ ಮೌಲ್ಯ ಎಷ್ಟು ಗೊತ್ತಾ?
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ದೀಪಾವಳಿಗೆ ಚಿನ್ನದಲ್ಲಿ ಹೂಡಿಕೆ: ಪ್ರತಿವರ್ಷ ರೂ. 25,000 ಹೂಡಿಕೆ ಮಾಡಿದರೆ 10, 15, 25 ವರ್ಷಗಳಲ್ಲಿ ಇದರ ಮೌಲ್ಯ ಎಷ್ಟು ಗೊತ್ತಾ?

Share
ಚಿನ್ನ
Share

ನವದೆಹಲಿ: ಭಾರತದಲ್ಲಿ ದೀಪಾವಳಿ ಮತ್ತು ಧನತ್ರೋದಶಿ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಹೂಡಿಕೆದಾರರಿಗೆ ಇದು ಅತ್ಯುತ್ತಮ ಆದಾಯ ತಂದುಕೊಟ್ಟಿದೆ. 2015ರಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು 26,000 ರೂ. ಇದ್ದದ್ದು, ಪ್ರಸ್ತುತ 1,30,000 ರೂ. ಗಡಿ ದಾಟಿದೆ. ಹೀಗಾಗಿ ಚಿನ್ನವು ದೀರ್ಘಕಾಲೀನ ಹೂಡಿಕೆಗೆ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ಸಾಧನವಾಗಿ ಹೊರಹೊಮ್ಮಿದೆ.

ಒಬ್ಬ ವ್ಯಕ್ತಿಯು ಪ್ರತಿವರ್ಷ ದೀಪಾವಳಿ ಅಥವಾ ಧನತ್ರೋದಶಿ ಹಬ್ಬದಂದು 25,000 ರೂ.ಗಳನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದರೆ, ಶೇಕಡಾ 10ರಷ್ಟು ಸರಾಸರಿ ವಾರ್ಷಿಕ ಆದಾಯದ ಪ್ರಕಾರ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಸಂಪತ್ತು ಸೃಷ್ಟಿಯಾಗಲಿದೆ. ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್‌ಗಳಿಗಿಂತ ಚಿನ್ನದ ಹೂಡಿಕೆಯು ಉತ್ತಮ ಲಾಭ ನೀಡುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

10 ವರ್ಷಗಳ ಹೂಡಿಕೆ: ಪ್ರತಿವರ್ಷ 25,000 ರೂ. ನಂತೆ 10 ವರ್ಷಗಳಲ್ಲಿ ಒಟ್ಟು 2,50,000 ರೂ. ಹೂಡಿಕೆ ಮಾಡಿದರೆ, ಶೇ. 10ರ ರಿಟರ್ನ್ಸ್ ಪ್ರಕಾರ ಇದರ ಒಟ್ಟು ಮೌಲ್ಯ ಸುಮಾರು 4,38,279 ರೂ. ತಲುಪಲಿದೆ.

15 ರಿಂದ 20 ವರ್ಷಗಳ ಮೌಲ್ಯ: 15 ವರ್ಷಗಳಲ್ಲಿ 3.75 ಲಕ್ಷ ರೂ. ಹೂಡಿಕೆಯು 8.73 ಲಕ್ಷ ರೂ. ಆಗಲಿದ್ದು, 20 ವರ್ಷಗಳಲ್ಲಿ 5 ಲಕ್ಷ ರೂ. ಹೂಡಿಕೆಯು 15.75 ಲಕ್ಷ ರೂ. ಆಗಿ ಬೆಳೆಯಲಿದೆ.

25 ವರ್ಷಗಳ ಬೃಹತ್ ಲಾಭ: 25 ವರ್ಷಗಳ ಅವಧಿಯಲ್ಲಿ ಒಟ್ಟು 6.25 ಲಕ್ಷ ರೂ. ಹೂಡಿಕೆಯು ಬಡ್ಡಿ ರೂಪದಲ್ಲಿ ಬೆಳೆದು ಅಂದಾಜು 27 ಲಕ್ಷ ರೂ.ಗಳ ಸಂಪತ್ತಾಗಿ ರೂಪುಗೊಳ್ಳಲಿದೆ.

Share

Leave a comment

Leave a Reply

Your email address will not be published. Required fields are marked *

Related Articles