ಹೊಸದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೌಕರರಿಗೆ ಸಿಹಿ ತಿಂಡಿಗಳು ಅಥವಾ ಸಾಮಾನ್ಯ ಗಿಫ್ಟ್ ಹ್ಯಾಂಪರ್‌ಗಳನ್ನು ನೀಡುವುದು ಸಾಮಾನ್ಯ. ಆದರೆ ದೆಹಲಿ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪಾವಳಿ ಕಾಳಜಿ ಮೆರೆಯುತ್ತಾ ದುಬಾರಿ ಬೆಲೆಯ ‘ಐಫೋನ್ 16’ (iPhone 16) ಸ್ಮಾರ್ಟ್‌ಫೋನ್‌ಗಳನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://www.instagram.com/p/DfQBeaxyhYY/?utm_source=ig_embed&utm_campaign=embed_video_watch_again
ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಉದ್ಯೋಗಿಗಳು ಕಚೇರಿಗೆ ಬಂದು ತಮ್ಮ ಮೇಜಿನ ಮೇಲೆ ರಿಬ್ಬನ್‌ನಿಂದ ಅಲಂಕರಿಸಲ್ಪಟ್ಟ ವಿವಿಧ ಬಣ್ಣಗಳ ಹೊಸ ಐಫೋನ್ 16 ಫೋನ್‌ಗಳನ್ನು ನೋಡಿ ಖುಷಿಪಟ್ಟಿದ್ದಾರೆ. ಸಾಂಪ್ರದಾಯಿಕ ಉಡುಗೊರೆಗಳ ಬದಲು ಅತ್ಯಾಧುನಿಕ ಗ್ಯಾಜೆಟ್ ನೀಡಿರುವ ಕಂಪನಿಯ ಈ ಉದಾರ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಐಫೋನ್ 16 ಉಡುಗೊರೆ: ದೆಹಲಿಯ ರೋಹಿಣಿ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ವಿಶೇಷ ಕೊಡುಗೆಯಾಗಿ ಐಫೋನ್ 16 ಸ್ಮಾರ್ಟ್‌ಫೋನ್‌ಗಳನ್ನು ಗಿಫ್ಟ್ ಮಾಡಿದೆ.
ವೈರಲ್ ಆದ ವಿಡಿಯೋ: ಉದ್ಯೋಗಿಗಳ ಮೇಜಿನ ಮೇಲೆ ಬಿಳಿ, ಹಸಿರು, ನೀಲಿ ಹಾಗೂ ಕಪ್ಪು ಬಣ್ಣದ ಐಫೋನ್‌ಗಳನ್ನು ಇಟ್ಟಿರುವ 15 ಸೆಕೆಂಡುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನೆಟ್ಟಿಗರ ಪ್ರತಿಕ್ರಿಯೆ: ನಮಗೆ ದೀಪಾವಳಿಗೆ ‘ಸೋನ್ ಪಾಪ್ಡಿ’ ಕೂಡ ಸಿಕ್ಕಿಲ್ಲ, ನಿಮ್ಮ ಕಂಪನಿಯಲ್ಲಿ ಖಾಲಿ ಹುದ್ದೆಗಳಿವೆಯೇ ಎಂದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.





Leave a comment