
ಇಂದೋರ್: ಕೋವಿಡ್-19 ಮಹಾಮಾರಿಯ ಕಾಲದಿಂದಲೂ ಸಾಮಾನ್ಯ ಭಕ್ತರಿಗೆ ಪ್ರವೇಶ ನಿಷೇಧಿಸಿರುವ ಇಂದೋರ್ನ ಪ್ರಸಿದ್ಧ ಖಜ್ರಾನಾ ಗಣೇಶ ದೌರ್ಜಾನದ ಗರ್ಭಗುಡಿಯೊಳಗೆ ಬಿಜೆಪಿ ಶಾಸಕ ಗೋಲು ಶುಕ್ಲಾ ಅವರ ಪುತ್ರ ರುದ್ರಕ್ಷ್ ಶುಕ್ಲಾ ವಿಶೇಷ ಪೂಜೆ ಸಲ್ಲಿಸಿರುವ ವೀಡಿಯೊ ವೈರಲ್ ಆಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಮುಂಜಾನೆ ಐಷಾರಾಮಿ ವಾಹನಗಳ ಬೆಂಗಾವಲಿನೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ರುದ್ರಕ್ಷ್, ನಿಯಮಗಳನ್ನು ಉಲ್ಲಂಘಿಸಿ ಗರ್ಭಗುಡಿ ಪ್ರವೇಶಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ದೇವಸ್ಥಾನದ ಪ್ರೋಟೋಕಾಲ್ ಪ್ರಕಾರ, ಕಲೆಕ್ಟರ್ ಮತ್ತು ಮುನ್ಸಿಪಲ್ ಕಮಿಷನರ್ ಅವರ ಅನುಮತಿ ಪಡೆದ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಗರ್ಭಗುಡಿಗೆ ಪ್ರವೇಶವಿದ್ದು, ಶಾಸಕರ ಮಗನಿಗೆ ಪ್ರವೇಶ ನೀಡಿದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ದೇವಸ್ಥಾನದ ವ್ಯವಸ್ಥಾಪಕ ಘನ್ಶ್ಯಾಮ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ರೀಲ್ಸ್ ಮಾಡಿದ್ದರಿಂದ ಹಾಗೂ ಬಿಜಾಸನ್ ಮಾತಾ ದೇವಸ್ಥಾನದ ಅನಧಿಕೃತ ಪ್ರವೇಶದಿಂದಲೂ ರುದ್ರಕ್ಷ್ ವಿವಾದಕ್ಕೆ ಸಿಲುಕಿದ್ದರು.
ಕೋವಿಡ್ ನಿಮಯಗಳ ಉಲ್ಲಂಘನೆ: ಕೊರೊನಾ ಕಾಲದಿಂದಲೂ ಸಾಮಾನ್ಯ ಭಕ್ತರಿಗೆ ಗರ್ಭಗುಡಿ ಪ್ರವೇಶ ಸಂಪೂರ್ಣ ನಿಷೇಧವಿದ್ದರೂ, ವಿಐಪಿ ಸಂಸ್ಕೃತಿಯಡಿ ಶಾಸಕರ ಮಗನಿಗೆ ಅಕ್ರಮ ಪ್ರವೇಶ ನೀಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ: ಶಾಸಕರ ಮಗನ ಪ್ರವೇಶಕ್ಕೆ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮರುಕಳಿಸಿದ ವಿವಾದಗಳು: ಬಿಜೆಪಿ ಶಾಸಕ ಗೋಲು ಶುಕ್ಲಾ ಪುತ್ರ ರುದ್ರಕ್ಷ್ ಹಿಂದೆಯೂ ಮಹಾಕಾಳೇಶ್ವರ ಹಾಗೂ ಬಿಜಾಸನ್ ಮಾತಾ ದೇವಸ್ಥಾನಗಳಲ್ಲಿ ಇದೇ ರೀತಿಯ ಅನಧಿಕೃತ ಪ್ರವೇಶ ಮತ್ತು ವಿವಾದಾತ್ಮಕ ವರ್ತನೆಗಳ ಮೂಲಕ ಸುದ್ದಿಯಲ್ಲಿದ್ದರು.
ಸಾಮಾನ್ಯ ಭಕ್ತರಿಗೆ ಕಠಿಣ ನಿಯಮಗಳು ಅನ್ವಯವಾಗುತ್ತಿದ್ದರೂ, ಪ್ರಭಾವಿ ರಾಜಕಾರಣಿಗಳ ಮಕ್ಕಳಿಗೆ ಮಾತ್ರ ಅರಮನೆಯಂತಹ ವಿಶೇಷ ಆತಿಥ್ಯ ಸಿಗುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




