SUDDIKSHANA KANNADA NEWS/ DAVANAGERE/ DATE:25-01-2025
ಚೆನ್ನೈ: ಎರಡನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ. ತಿಲಕ್ ವರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಆಂಗ್ಲನ್ನರ ವಿರುದ್ಧ ರೋಚಕ ಜಯ ದಾಖಲಿಸಿತು. ತಿಲಕ್ ವರ್ಮಾ ಏಕಾಂಗಿ ಹೋರಾಟ ನಡೆಸಿದರು. ಅರ್ಧಶತಕ ಬಾರಿಸಿ ಗಮನ ಸೆಳೆದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ರೂಟ್ ಒಳ್ಳೆಯ ಫಾರಂನಲ್ಲಿ ಇದ್ದಂತೆ ಕಂಡು ಬಂದರೂ ಔಟ್ ಆಗುವ ಮೂಲಕ ಆರಂಭಿಕ ಆಘಾತಕ್ಕೆ ಕಾರಣವಾಯಿತು.
ನಿಗದಿತ 20 ಓವರ್ ಗಳಲ್ಲಿ 165 ರನ್ ಗಳಿಸಿದ ಇಂಗ್ಲೆಂಡ್ ತಂಡವು 166 ರನ್ ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಭಾರತ ತಂಡವು ಆರಂಭಿಕ ಆಘಾತ ಅನುಭವಿಸಿತು. 10 ಓವರ್ ಆಗುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಶರ್ಮಾ (12), ಸಂಜು ಸ್ಯಾಮ್ಸನ್ (5), ಮತ್ತು ಸೂರ್ಯಕುಮಾರ್ ಯಾದವ್ (12) ವಿಫಲರಾದರು.
ಇಂಗ್ಲೆಂಡ್ ಪರ ಜೋಸ್ ಬಟ್ಲರ್ 30 ಎಸೆತಗಳಲ್ಲಿ 45 ರನ್ ಗಳಿಸಿದರೆ, ಬ್ರೈಡನ್ ಕಾರ್ಸೆ 17 ಎಸೆತಗಳಲ್ಲಿ 31 ರನ್ ಗಳಿಸಿದರು. ಭಾರತದ ಬೌಲರ್ಗಳು, ವಿಶೇಷವಾಗಿ ಅಕ್ಷರ್ ಪಟೇಲ್ (2/32) ಮತ್ತು ವರುಣ್ ಚಕ್ರವರ್ತಿ (2/38), ಇಂಗ್ಲೆಂಡ್ಗೆ ನಿರ್ಬಂಧ ಹೇರಲು ಪ್ರಮುಖ ವಿಕೆಟ್ಗಳನ್ನು ಪಡೆದು ಯಶ ಕಂಡರು.
ಪ್ರತ್ಯುತ್ತರವಾಗಿ, ಭಾರತ ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡಿತು, 10 ನೇ ಓವರ್ನಲ್ಲಿ ಐವರು ಆಟಗಾರರು ಔಟಾದರು. ವಾಷಿಂಗ್ಟನ್ ಸುಂದರ್ ಹಾಗೂ ತಿಲಕ್ ವರ್ಮಾ ಉತ್ತಮ ಜೊತೆಯಾಟ ನೀಡುವ ಹೊತ್ತಿನಲ್ಲೇ ವಾಷಿಂಗ್ಟನ್ ಸುಂದರ್ ಬೌಲ್ಡ್ ಆದರು. ಅಕ್ಷರ್ ಪಟೇಲ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ ತಿಲಕ್ ವರ್ಮಾರ ಏಕಾಂಗಿ ಹೋರಾಟದ ನೆರವಿನಿಂದ ಟೀಂ ಇಂಡಿಯಾ ಎರಡನೇ ಟಿ-20 ಪಂದ್ಯ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.