ನವದೆಹಲಿ: ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ (AI2379) ವಿಮಾನ ನಡುಬಾನಿನಲ್ಲಿ ದಿಢೀರ್ ಎತ್ತರ ಕಳೆದುಕೊಂಡು ಪ್ರಯಾಣಿಕರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿ ಹೊರಬಿದ್ದಿದೆ. ವಿಮಾನದಲ್ಲಾದ ಹೈಡ್ರಾಲಿಕ್ ಸಿಸ್ಟಮ್ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ ದೃಢಪಡಿಸಿದೆ.
ಮತ್ತೊಂದೆಡೆ, ವಿಮಾನದ ಮುಖ್ಯ ಪೈಲಟ್ ಮಾದಕದ್ರವ್ಯ (ಗಾಂಜಾ/Marijuana) ಸೇವಿಸಿರುವುದು ಪ್ರಾಥಮಿಕ ಹಾಗೂ ದೃಢೀಕರಣ ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದಿದ್ದು, ಇದು ಸುರಕ್ಷತೆಗೆ ಧಕ್ಕೆ ತರುವ ಗಂಭೀರ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಪೈಲಟ್ ವಿರುದ್ಧ ಸೂಕ್ತ ಕಾನೂನು ಹಾಗೂ ಶಿಸ್ತುಕ್ರಮ ಕೈಗೊಳ್ಳುವಂತೆ ತನಿಖಾ ತಂಡ ಶಿಫಾರಸು ಮಾಡಿದೆ.
- Air India
- Airbus A320
- Aviation Safety.
- DGCA Investigation
- Hydraulic Pressure Loss
- Phuket Delhi Flight
- Pilot Drug Test
- ಏರ್ ಇಂಡಿಯಾ
- ಏರ್ ಇಂಡಿಯಾ ವಿಮಾನ
- ಏರ್ಬಸ್ A320
- ಡಿಜಿಸಿಎ ತನಿಖೆ
- ಪೈಲಟ್ ಡ್ರಗ್ ಪರೀಕ್ಷೆ
- ಪೈಲಟ್ ಡ್ರಗ್ಸ್ ಪರೀಕ್ಷೆ
- ಫುಕೆಟ್ ದೆಹಲಿ ವಿಮಾನ
- ವಿಮಾನ ಅಪಘಾತ ತನಿಖಾ ವರದಿ.
- ವಿಮಾನಯಾನ ಸುರಕ್ಷತೆ
- ಹೈಡ್ರಾಲಿಕ್ ವೈಫಲ್ಯ
- ಹೈಡ್ರಾಲಿಕ್ ಸಿಸ್ಟಮ್ ವೈಫಲ್ಯ





Leave a comment