Home ದಾವಣಗೆರೆ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ದಾವಣಗೆರೆ ದಕ್ಷಿಣ ಬಿಜೆಪಿ ಕಾರ್ಯಕರ್ತರ ಸಾಥ್: ಹೊಂಡ ಸರ್ಕಲ್‌ನಿಂದ ತೆರಳಿದ ಬೃಹತ್ ಪಡೆಯಾತ್ರೆ
ದಾವಣಗೆರೆಬೆಂಗಳೂರು

‘ಬಳ್ಳಾರಿ ಚಲೋ’ ಪಾದಯಾತ್ರೆಗೆ ದಾವಣಗೆರೆ ದಕ್ಷಿಣ ಬಿಜೆಪಿ ಕಾರ್ಯಕರ್ತರ ಸಾಥ್: ಹೊಂಡ ಸರ್ಕಲ್‌ನಿಂದ ತೆರಳಿದ ಬೃಹತ್ ಪಡೆಯಾತ್ರೆ

Share
ದಾವಣಗೆರೆ
Share

ದಾವಣಗೆರೆ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಲು ಸಾಲು ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆಯ 4ನೇ ದಿನದ ಅಂಗವಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ನಗರದ ಹೊಂಡ ಸರ್ಕಲ್‌ನಿಂದ ಪಾದಯಾತ್ರೆಯ ಮೂಲಕ ತೆರಳಿದರು.

ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ರೈತ ವಿರೋಧಿ ನೀತಿಗಳು, ಶಾಸಕರ ಅನುದಾನ ಕೊರತೆ ಹಾಗೂ ಜನಸಾಮಾನ್ಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ವಿರುದ್ಧ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಬೃಹತ್ ಹೋರಾಟ ನಡೆಯುತ್ತಿದೆ. ದಾವಣಗೆರೆಯಿಂದ ಹೆಜ್ಜೆ ಹಾಕಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಳ್ಳಾರಿ ಚಲೋ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಈ ಪಾದಯಾತ್ರೆಯಲ್ಲಿ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾದವ್, ದಕ್ಷಿಣ ಮಂಡಲದ ಪ್ರಧಾನ ಕಾರ್ಯದರ್ಶಿ 6ನೇ ಕಲ್ಲು ವಿಜಯಕುಮಾರ್, ಎಸ್.ಕೆ. ಮಾಲತೇಶ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್, ಗುರು ಸೋಗಿ, ಬಾಲಚಂದ್ರ ಶ್ರೇಷ್ಠಿ, ಹರೀಶ್ ಹೊನ್ನೂರು, ಅರುಣ್ ಕುಮಾರ್, ಅಂಜಿನಪ್ಪ ಶಾಮನೂರು, ತರಕಾರಿ ಶಿವು, ಗೋವಿಂದರಾಜ, ಡಿ.ಎನ್. ಅರುಣಕುಮಾರ್, ಕೆ.ಎಂ. ತಿಪ್ಪೇಸ್ವಾಮಿ, ಚಿದಾನಂದ, ಸಂತೋಷ ಕೋಟಿ, ವೀರಣ್ಣ, ಎಚ್.ಬಿ. ರವಿಕುಮಾರ್, ಸುರೇಶ್ ಕೆ.ವಿ., ಸುರೇಶ್ ಬೆಳವನೂರ, ಪುನಿತ್, ಅಣ್ಣಪ್ಪ, ಭಾಗ್ಯ ಪೀಸಾಳೆ, ರೇಣುಕಾ ಕೃಷ್ಣ ಹಾಗೂ ಲೀಲಮ್ಮ, ಸಂಗೀತಾ, ನೇತ್ರಾ, ಶಿವಗಂಗಮ್ಮ, ಶಿವಪ್ರಕಾಶ್ ಸೇರಿದಂತೆ ಪಕ್ಷದ ನೂರಾರು ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *