Home ಕ್ರೈಂ ನ್ಯೂಸ್ “ನನ್ನ ಜಗತ್ತೇ ಕಳೆದುಹೋಯಿತು”: ನ್ಯೂಯಾರ್ಕ್ ನಲ್ಲಿ ತಾಯಿಯಿಂದ ಹತಳಾದ ಮಗಳ ಅಂತ್ಯಸಂಸ್ಕಾರಕ್ಕೆ ಕಣ್ಣೀರಿಟ್ಟು ನೆರವು ಕೋರಿದ ತಂದೆ ಕುಲದೀಪ್ ಸಿಂಗ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

“ನನ್ನ ಜಗತ್ತೇ ಕಳೆದುಹೋಯಿತು”: ನ್ಯೂಯಾರ್ಕ್ ನಲ್ಲಿ ತಾಯಿಯಿಂದ ಹತಳಾದ ಮಗಳ ಅಂತ್ಯಸಂಸ್ಕಾರಕ್ಕೆ ಕಣ್ಣೀರಿಟ್ಟು ನೆರವು ಕೋರಿದ ತಂದೆ ಕುಲದೀಪ್ ಸಿಂಗ್!

Share
ತಂದೆ
Share

ನ್ಯೂಯಾರ್ಕ್‌: ಕ್ವೀನ್ಸ್ ಪ್ರದೇಶದಲ್ಲಿ ನಡೆದ ಅತ್ಯಂತ ದಾರುಣ ಘಟನೆಯೊಂದರಲ್ಲಿ, ಐದು ವರ್ಷದ ಬಾಲಕಿ ಫ್ಯಾಬಿಯಾನಾ ಕೆಬೆಲ್ಲೊ ತನ್ನ ತಾಯಿಯ ಕೈಯಲ್ಲೇ ಹತ್ಯೆಯಾಗಿದ್ದಾಳೆ.  ಈ ಘಟನೆಯಿಂದ ಮಗುವಿನ ತಂದೆ, ಭಾರತೀಯ ಮೂಲದ ಕುಲದೀಪ್ ಸಿಂಗ್ ತೀವ್ರ ಶೋಕದಲ್ಲಿದ್ದು, ಮಗಳ ಅಂತ್ಯಸಂಸ್ಕಾರದ ವೆಚ್ಚಕ್ಕಾಗಿ ‘ಗೋಫಂಡ್‌ಮೇ’ ಮೂಲಕ ಧನಸಹಾಯ ಕೋರಿದ್ದಾರೆ.

 ನ್ಯೂಯಾರ್ಕ್‌ನ ರಿಚ್‌ಮಂಡ್ ಹಿಲ್ ಪ್ರದೇಶದಲ್ಲಿ ಘಟನೆ ನಡೆದಿದೆ. ಬಾಲಕಿಯ ತಾಯಿ 32 ವರ್ಷದ ಫ್ರಾನ್ಸಿಸ್ ಕೆಬೆಲ್ಲೊ ತಾನೇ ಪೊಲೀಸರಿಗೆ ಕರೆ ಮಾಡಿ, “ನಾನು ನನ್ನ ಮಗಳನ್ನು ಕೊಲೆ ಮಾಡಿದ್ದೇನೆ” ಎಂದು ಒಪ್ಪಿಕೊಂಡಿದ್ದಾರೆ.

ಆಸ್ಪತ್ರೆಗೆ ದಾಖಲು:

ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಗು ಅರೆಪ್ರಜ್ಞಾ ಸ್ಥಿತಿಯಲ್ಲಿ ರಕ್ತಸಿಕ್ತವಾಗಿ ಪತ್ತೆಯಾಗಿದೆ. ಕೂಡಲೇ ಜಮೈಕಾ ಆಸ್ಪತ್ರೆಗೆ ಸಾಗಿಸಿದರೂ ಮಗು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಆರೋಪಿ ಬಂಧನ:

ಮಗುವಿನ ಮೈಮೇಲೆ ಗಾಯಗಳು ಹಾಗೂ ಉಸಿರುಗಟ್ಟಿದ ಲಕ್ಷಣಗಳು ಪತ್ತೆಯಾಗಿದ್ದು, ಪೊಲೀಸರು ತಾಯಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ. ಆದರೆ ಗಂಡ ಹೆಂಡತಿ ನಡುವಿನ ಗಲಾಟೆಯೋ ಅಥವಾ ಬೇರೆ ಯಾವ ಕಾರಣವಿರಬಹುದು ಎಂಬ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles