SUDDIKSHANA KANNADA NEWS/ DAVANAGERE/ DATE:02-03-2024
ದಾವಣಗೆರೆ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಮಾದರಿಯ ಪ್ರದರ್ಶನವನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಕಲೆ, ಕರಕುಶಲ ಕಲೆಯ ಮತ್ತು ವಿಜ್ಞಾನ ಮಾದರಿಯ ಹೊಸ ಆವಿಷ್ಕಾರವನ್ನು ಶಾಲೆಯ ಮಕ್ಕಳು ಅಭಿವ್ಯಕ್ತಿಸಿದರು.
ದೃಶ್ಯಕಲಾ ಮಹಾವಿದ್ಯಾಲಯ ದಾವಣಗೆರೆಯ ಪ್ರಾಚಾರ್ಯ ಡಾ. ಜಯರಾಜ್ ಎಂ. ಚಿಕ್ಕ ಪಾಟೀಲ್ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ತಿಳುವಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಪ್ರಪಂಚದ ಒಳಿತಿಗಾಗಿ ಅಂತಹ ಪ್ರತಿಭೆಗಳನ್ನು ಬೆಳೆಸುವ ಮಹತ್ವವನ್ನು ಒತ್ತಿ ಹೇಳಿದರು.
ನಾನು ಪರಿಸರ” ನನ್ನನ್ನು ಉಳಿಸಿ, ನಾನು ಅಪಾಯದಲ್ಲಿದ್ದೇನೆ” ಎಂಬ ಶೀರ್ಷಿಕೆ ಅಡಿಯಲ್ಲಿ ಮಕ್ಕಳು ಪ್ರತಿಷ್ಠಾಪನ ಕಲೆಯನ್ನು ಶಾಲೆಯ ಹೊರಭಾಗದಲ್ಲಿ ಪ್ರದರ್ಶಿಸಿದರು .ಇದರ ಬಗ್ಗೆ ಮಕ್ಕಳು ಪರಿಸರದ ಪ್ರಜ್ಞೆ ಮತ್ತು ಜಾಗೃತಿ ಸಾರುವ ಕಲಾಕೃತಿ ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮಕ್ಕೆ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ ಮೌಲಾನಾ ಮೊಹಮ್ಮದ್ ಹನೀಫ್ ರಝಾ ಅವರು ಮಾತನಾಡಿ, ಭವಿಷ್ಯದ ಪೀಳಿಗೆಗೆ ಪರಿಸರವನ್ನು ರಕ್ಷಿಸುವ ನೈತಿಕ ಅಗತ್ಯವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಜೊತೆಯಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕಾರ್ಯವನ್ನು ಅರ್ಥಪೂರ್ಣವಾಗಿ ಮಾಡಬೇಕು ಎಂದು ತಿಳಿಸಿದರು.
ಇಂತಹ ಪ್ರಮುಖ ವಿಷಯದ ಬಗ್ಗೆ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳನ್ನು ಮತ್ತು ಶಾಲೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ , ಶಿಕ್ಷಕರು, ಪೋಷಕರು ಮತ್ತು ಶಾಲೆಯ ಎಲ್ಲಾ ಮಕ್ಕಳು ಭಾಗವಹಿಸಿದ್ದರು.