SUDDIKSHANA KANNADA NEWS/ DAVANAGERE/ DATE:16-03-2024
ದಾವಣಗೆರೆ: ನಗರದ ಪಿಬಿ ರಸ್ತೆಯಲ್ಲಿ ಸುಲಿಗೆ ಮಾಡಿದ್ದ ಯುವಕ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿರುವ ಬಡಾವಣೆ ಪೊಲೀಸರು ಬಂಧಿತನಿಂದ 70 ಸಾವಿರ ರೂಪಾಯಿ ಮೌಲ್ಯದ ಆಕ್ಟೀವ್ ಹೊಂಡಾ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.
ದಾವಣಗೆರೆಯ ಪಿಬಿ ರಸ್ತೆಯ ಹಿಂಭಾಗದ ಸಿಗಂಧೂರು ಚೌಡೇಶ್ವರಿ ಹೊಟೇಲ್ ಹಿಂಭಾಗದಲ್ಲಿನ ರೇಡಿಯಂ ಸ್ಟೀಿಕ್ಕರ್ ಕೆಲಸ ಮಾಡುತ್ತಿದ್ದ ಸಂಗಮೇಶ್ (20) ಬಂಧಿತ ಆರೋಪಿ.
ದೇವರಾಜ್ ಅರಸ್ ಬಡಾವಣೆಯ ಪಿ. ಕೆ. ಆಕಾಶ್ (18) ಎಂಬಾತ ಕಳೆದ ಮಾರ್ಚ್ 6ರಂದು ರಾತ್ರಿ ಸುಮಾರು ಬೆಳಿಗ್ಗಿನ ಜಾವ 12.20ರ ಸಮಯದಲ್ಲಿ ಸಾಯಿ ಇಂಟರ್ ನ್ಯಾಷನಲ್ ಹೊಟೇಲ್ನಲ್ಲಿ ಕೆಲಸ ಮುಗಿಸಿಕೊಂಡು ದಾವಣಗೆರೆ ಪಿ.ಬಿ ರಸ್ತೆಯ ಟಿ.ವಿ.ಎಸ್ ಶೂ ರೂಂ ಹಾಗೂ ಭಾರತ್ ಪೇಟ್ರೋಲ್ ಬಂಕ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ದೇವರಾಜ್ ಅರಸ್ ಬಡಾವಣೆಯ ರೂಂಗೆ ಹೋಗುತ್ತಿದ್ದಾಗ ಆಗ ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಯಿಂದ ಯಾರೋ ಇಬ್ಬರು ಆಪರಿಚಿತ ವ್ಯಕ್ತಿಗಳು ಸ್ಕೂಟಿಯಲ್ಲಿ ಬಂದು ಎಣ್ಣೆ ಅಂಗಡಿ ಎಲ್ಲಿದೆ ಎಂದು ಕೇಳಿದ್ದಾರೆ.
ಆಗ ಆಕಾಶನು ಮುಂದೆ ಇದೇ ಹೋಗಿ ಎಂದಿದ್ದಾರೆ. ನಾವು ಹೊಸಬರು ನೀನು ಎಲ್ಲಿಯವನು ಎಂದು ಕೇಳಿದರು. ಲೋಕಲ್ ಎಂದು ಹೇಳಿದೆನು. ನಾನು ರೂಂಗೆ ಹೋಗಬೇಕು ಎಂದಿದ್ದರಿಂದ ಸ್ಕೂಟಿಯಲ್ಲಿ ಹಿಂದೆ ಕುಳಿತ್ತಿದ್ದವ ಏಕಾಏಕಿ ನನ್ನ ಕಪಾಳಕ್ಕೆ ಹೊಡೆದು ನನ್ನ ಹತ್ತಿರ ಇದ್ದ ರೂ. ಆರು ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಮೊಬೈಲ್ ಫೋನ್ ಬಲವಂತಾವಾಗಿ ಕಿತ್ತುಕೊಂಡು ನನಗೆ ಚಾಕು ತೋರಿಸಿ ಸ್ಕೂಟಿಯಲ್ಲಿ ಹೋಗಿದ್ದಾರೆ ಎಂದು ದೂರು ಅನ್ನು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನೀಡಲಾಗಿತ್ತು.
ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ.ಸಿ. ಶೇತಸನದಿ ಅವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿಗಯನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಆರೋಪಿ ಸಂಗಮೇಶ್ ಬಿ. ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ವಶಕ್ಕೆ ಪಡೆದು ಸುಲಿಗೆ ಮಾಡಿದ್ದ 6000 ರೂ. ಮೌಲ್ಯದ ಮೊಬೈಲ್ ಮತ್ತು ಕೃತ್ಯಕ್ಕೆ ಬಳಿಸಿದ್ದ 70,000 ರೂ. ಬಾಳುವ ಆಕ್ಟೀವ್ ಹೊಂಡಾ ಸ್ಕೂಟರ್ ಅನ್ನು ವಶಪಡಿಸಿಕೊಂಡಿದೆ.
ಆರೋಪಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ವಿದ್ಯಾನಗರ ಪಿಎಸ್ ಐ ವಿಶ್ವನಾಥ ಜಿ.ಎನ್, ಸಿಬ್ಬಂದಿಯಾದ ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಯೋಗೀಶ್ ನಾಯ್ಕ, ಗೋಪಿನಾಥ ಬಿ ನಾಯ್ಕ, ಲಕ್ಷ್ಮಣ್ ಆ., ನಾಗರಾಜ ಕೂಲೇರ, ಮಂಜುನಾಥ ಬಿ.ವಿ ಅವರನ್ನು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್, ಮಂಜುನಾಥ ಜಿ. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.