ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಉಪನ್ಯಾಸಕಿ ಮನೆಗೆ ಕನ್ನ: ಪ್ರಕರಣ ದಾಖಲಾಗಿ 48 ಗಂಟೆಯಲ್ಲೇ ಮನೆಕಳ್ಳತನ ಆರೋಪಿ ಬಂಧನ!

On: March 19, 2025 10:00 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:19-03-2025

ದಾವಣಗೆರೆ: ಪ್ರಕರಣ ದಾಖಲಾದ 48 ಗಂಟೆಯಲ್ಲೇ ಮನೆ ಕಳ್ಳತನ ಆರೋಪಿಯನ್ನು ಬಂಧಿಸಿರುವ ಹೊನ್ನಾಳಿ (Honnāli) ಪೊಲೀಸರು (Police) , ಬಂಧಿತನಿಂದ 5.50 ಲಕ್ಷ ರೂಪಾಯಿ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.

ಕಳೆದ ಮಾರ್ಚ್ 17ರಂದು ಬೆಳಿಗ್ಗೆ ಸಮಯದಲ್ಲಿ ಹೊನ್ನಾಳಿ ಪಟ್ಟಣದ ಸರ್ವರ್ ಕೇರಿ ನಿವಾಸಿ ಹಾಗೂ ಉಪನ್ಯಾಸಕಿ ಸಾಗರಿಕ ಸಂತೋಷ್ ವಾಸದ ಮನೆಗೆ ಯಾರೋ ಕಳ್ಳರು ಮನೆಯ ಹೆಂಚು ತೆಗೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದರು.

READ ALSO THIS STORY: ಆರುಂಡಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ: ಅಕ್ರಮ ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಜಿ. ಬಿ. ವಿನಯ್ ಕುಮಾರ್ ಆಗ್ರಹ

ಮನೆಯ ರೂಂನಲ್ಲಿನ ಕಬೊರ್ಡ್ ನಲ್ಲಿಟ್ಟಿದ್ದ 60 ಗ್ರಾಂ ತೂಕದ ಬಂಗಾರದ ತಾಳಿ ಸರ, 17 ಗ್ರಾಂ ತೂಕದ ಬಂಗಾರದ ಬ್ರೇಸ್ ಲೈಟ್, 7 ಗ್ರಾಂ ತೂಕದ ಮುತ್ತುಳ್ಳಾ ಬಂಗಾರದ ಚೈನ್ ಸರ, 8 ಗ್ರಾಂ ತೂಕದ ಬಂಗಾರದ 2 ಉಂಗುರ, 17 ಗ್ರಾಂ ತೂಕದ ಬಂಗಾರದ 6 ಜೋತೆ ಕಿವಿಯೋಲೆ, 25 ಗ್ರಾಂ ತೂಕದ ಬೆಳ್ಳಿಯ ಕಾಲ್ ಚೈನ್ ಒಟ್ಟು 109 ಗ್ರಾಂ ತೂಕದ ಬಂಗಾರದ ಒಡವೆಗಳು ಮತ್ತು 25 ಗ್ರಾಂ ತೂಕದ ಬೆಳ್ಳಿಯ ಕಾಲಿನ ಚೈನ್ ಕಳ್ಳತನವಾಗಿರುವ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ ಹೆಚ್. ಹಾಗೂ ಸಿಬ್ಬಂದಿಗಳನ್ನೊಳಗೊಂಡ ಪೊಲೀಸ್ ತಂಡವು ಮನೆಕಳ್ಳತನ ಪ್ರಕರಣದ ಆರೋಪಿತನಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚರ್ಚುಗುಂಡಿ ಗ್ರಾಮದ ವಾಸಿ ಶಿವರಾಜ ಪಿ. ಎಸ್. ಅಲಿಯಾಸ್ ಶೀವುನನ್ನು ಬಂಧಿಸಿದೆ. ಕಳವು ಮಾಡಿದ್ದ ಒಟ್ಟು 5,50.000 ರೂ ಮೌಲ್ಯದ 109 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದೆ.

ಆರೋಪಿ ಹಿನ್ನೆಲೆ :

ಶಿವರಾಜ ಪಿ. ಎಸ್. ಅಲಿಯಾಸ್ ಶಿವು ವಿರುದ್ಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇವೆ. ಆರೋಪಿ ಬಂಧಿಸಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ, ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ನಿರೀಕ್ಷಕ ಬಿ.ಇಸ್ಮಾಯಿಲ್, ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್ಐ ಕುಮಾರ, ಹೊನ್ನಾಳಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಹರೀಶ. ಹೆಚ್.ವಿ., ಸಿಬ್ಬಂದಿಯವರಾದ ರವಿ ಎನ್, ರಾಜಶೇಖರ, ಸುರೇಶನಾಯ್ಕ., ಮಹೇಂದ್ರ ನಂಜಪ್ಪನವರ, ಅಕ್ತರ್, ವೀರೇಶ, ನಾಗರಾಜ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment