SUDDIKSHANA KANNADA NEWS/ DAVANAGERE/ DATE:29-05-2024
ದಾವಣಗೆರೆ: ಲವ್ ಜಿಹಾದ್ ತಡೆಗೆ ಶ್ರೀರಾಮಸೇನೆ ಸಹಾಯವಾಣಿ ಆರಂಭಿಸಿದೆ.
9090443444 ಈ ನಂಬರ್ ಗೆ ಹಿಂದೂ ಯುವತಿಯರಿಗೆ ಕಿರುಕುಳ, ಲವ್ ಜಿಹಾದ್ ಗೆ ಬೀಳಿಸಿಕೊಳ್ಳಲು ಪ್ರಯತ್ನಿಸಿದರೆ ಸಂಪರ್ಕಿಸಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಯುವತಿಯರು, ಮಹಿಳೆಯರನ್ನು ಲವ್ ಜಿಹಾದ್ ಹೆಸರಿನಲ್ಲಿ ಅನ್ಯಧರ್ಮೀಯರು ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಕಾರಣಕ್ಕೆ ತೊಂದರೆಗೆ ಸಿಲುಕಿದ ಹಿಂದೂ ಸಹೋದರಿಯರ ರಕ್ಷಣೆಗೆ ಧಾವಿಸುತ್ತೇವೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಜಿ. ಕುಲಕರ್ಣಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಲವ್ ಜಿಹಾದ್ ವಿರುದ್ಧ ಕಳೆದ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, 2008ರಲ್ಲಿ ಲವ್ ಜಿಹಾದ್ ಗೆ ಸಂಬಂಧಪಟ್ಟ ಪುಸ್ತಕವನ್ನು ಬಿಡುಗಡೆ ಮಾಡಲಾಗಿತ್ತು. .ಆ ವೇಳೆ ಕೆಲವರು ಲವ್ ಜಿಹಾದ್ ಸುಳ್ಳು ಇದು ಹಿಂದೂ ಸಂಘಟನೆಗಳು ಸೃಷ್ಠಿಸಿದೆ ಎಂದು ಹೇಳಿದ್ದರು. ಕಳೆದ ಇಪ್ಪತ್ತು ವರ್ಷದಿಂದ ಲವ್ ಜಿಹಾದ್ ಬಗ್ಗೆ ಜಾಗೃತಿ ಮಾಡುತ್ತಾ ಬಂದಿದ್ದೇವೆ. ಇದೀಗ ಸಹಾಯವಾಣಿ ಮುಖಾಂತರ ಹಿಂದೂ ಯುವತಿಯರಿಗೆ ಹಾಗೂ ಅವರ ಕುಟುಂಬಕ್ಕೆ ಅರಿವು ಮೂಡಿಸುವ ಉದ್ದೇಶ ನಮ್ಮದು ಎಂದರು.
ಲವ್ ಜಿಹಾದ್ ನಿಂದ ಹೊರಬರಲು ಶ್ರೀರಾಮ ಸೇನೆಯಿಂದ ಸಹಾಯ ನೀಡುವ ಉದ್ದೇಶ ಇದಾಗಿದೆ. ಈ ಸಹಾಯವಾಣಿ 24*7 ಕಾರ್ಯನಿರ್ವಹಿಸಲಿದೆ. ರಾಜ್ಯದ ಯಾವುದೇ ಮೂಲೆಯಿಂದಲೂ ಕರೆ ಬಂದರೆ ಸ್ವೀಕರಿಸಲಾಗುವುದು. ಕೂಡಲೇ ಆಯಾ ಜಿಲ್ಲಾ ಟೀಮ್ ಕಾರ್ಯ ಪ್ರವೃತ್ತವಾಗಲಿದೆ ಈ ಮೂಲಕ ನೆರವು ನೀಡಲಾಗುವುದು ಇದರೊಂದಿಗೆ ಕಾನೂನು ಸಲಹೆ, ಲವ್ ಜಿಹಾದ್ ನಿಂದ ಹೊರಬಂದು ವಿದ್ಯಾಭ್ಯಾಸ ಮಾಡಲು ಇಚ್ಚಿಸಿದವರಿಗೆ ನೆರವು, ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯ, ಮಕ್ಕಳ ಸಮೇತ ಹೊರಬಂದರೆ ಮಕ್ಕಳ ವಿದ್ಯಾಭ್ಯಾಸ ನೀಡುವುದು ಹಾಗೂ ಕೋರ್ಟ್ ಕಚೇರಿ ನೆರವು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಆರು ಕೇಂದ್ರಗಳಲ್ಲಿ ಸಹಾಯವಾಣಿ ಉದ್ಘಾಟನೆ ಮಾಡಲಾಗಿದೆ. ಕಲ್ಬುರ್ಗಿ ಯಲ್ಲಿ ಸಿದ್ದಲಿಂಗ ಶ್ರೀ, ಪ್ರಮೋದ್ ಮುತಾಲಿಕ್ ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರು, ಮಂಗಳೂರು, ಬಾಗಲಕೋಟೆಯಲ್ಲಿಯೂ ಸಹಾಯವಾಣಿ ಉದ್ಘಾಟನೆ ಮಾಡಲಾಗಿದೆ. ಲವ್ ಜಿಹಾದ್ ಹಿಂದೂ ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ ಹಿಂದೂಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುವುದು ಎಂದರು.
ವರದಿಗಳ ಪ್ರಕರ ಓ ಇಂಡಿಯಾ ಮಾಧ್ಯಮ 2023ರಲ್ಲಿ ಒಂದು ವರ್ಷದ ಸರ್ವೇ ಮಾಡಿದೆ. ಇದರ ಮಾಹಿತಿಯಂತೆ ಲವ್ ಜಿಹಾದ್ ಕೇಸ್ ನಲ್ಲಿ 153 ಯುವತಿಯರ ಭಯಾನಕ ಕೊಲೆಯಾಗಿದೆ ಈ ಬಗ್ಗೆ ದಾಖಲೆ ಸಮೇತ ವರದಿ ಬಿಡುಗಡೆ ಮಾಡಲಾಗಿದೆ. ಶೇಕಡಾ 27.5ರಷ್ಟು ಅಪ್ರಾಪ್ತ ಯುವತಿಯರ ಹತ್ಯೆ ಮಾಡಲಾಗಿದೆ. ಶೇಕಡಾ 15.7ರಷ್ಟು ದಲಿತ ಎಸ್ಸಿ ಎಸ್ಟಿ ಮಹಿಳೆಯರು ಹತ್ಯೆಯಾಗುತ್ತಿದ್ದಾರೆ. ಅನ್ಯ ಧರ್ಮದ ಯುವಕರು ತಮ್ಮ ಗುರುತು ಮುಚ್ವಿಟ್ಟು ಬೇರೆ ಬೇರೆ ಧರ್ಮದ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಹಿಂದೂ ಯುವತಿಯರನ್ನು ಮದುವೆ ಯಾಗಿದ್ದಾರೆ. ಅಶ್ಲೀಲ ವಿಡಿಯೋ, ಫೋಟೊ, ಡ್ರಗ್ಸ್ ಜಾಲ, ಭಯೋತ್ಪಾದನೆ ಜಾಲದಲ್ಲಿ ಹಿಂದೂ ಯುವತಿಯರನ್ನು ಸಿಲುಕಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
2014ರಿಂದ 19ರವರೆಗೆ ಸುಮಾರು 21,684 ಹಿಂದೂ ಯುವತಿಯರು ಕಾಣೆಯಾಗಿದ್ದಾರೆ. 2019ರಿಂದ 21ರ ಅವಧಿಯಲ್ಲಿಒಟ್ಟು 13 ಲಕ್ಷ 13 ಸಾವಿರ ಯುವತಿಯರ ಅಪಹರಣ, ಅತ್ಯಾಚಾರ, ಮತಾಂತರದ ಪ್ರಕರಣಗಳು ದೇಶದಲ್ಲಿ ನಡೆದಿವೆ ಎಂದು ಲೋಕಸಭೆಯಲ್ಲಿ ಗೃಹಇಲಾಖೆ ದಾಖಲೆ ನೀಡಿದೆ ಎಂದು ವಿವರಿಸಿದರು.
ದೇಶ ಹಾಗೂ ರಾಜ್ಯದಲ್ಲಿ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಅದಕ್ಕೆ ತರಬೇತಿನೀಡಲಾಗುತ್ತಿದೆ. ರಾಕ್ಷಸೀಯ ಕೃತ್ಯದ ಮೂಲಕ ಹತ್ಯೆ ಘಟನೆ ನಡೆಯುತ್ತಿವೆ ಇದೆಲ್ಲವೂ ನಿರ್ಮೂಲನೆಯಾಗಬೇಕು ಎಂದು ಹೇಳಿದರು.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿಸರ್ಕಾರ್ ಮಾತನಾಡಿ ಜೂ.4 ರಂದು ದಾವಣಗೆರೆಯ ಹೋಟೇಲ್ ಗಳು, ಶಾಲಾ ಕಾಲೇಜುಗಳು ,ಜ್ಯೂಸ್ ಸ್ಟಾಲ್ ಗಳಲ್ಲಿ ಪ್ರತಿ ವಾರ್ಡ್ ರಸ್ತೆಗಳಲ್ಲಿ ಸಹಾಯವಾಣಿ ಪೋಸ್ಟರ್ ಅಳವಡಿಸಲಾಗುವುದು.ಕಳೆದೆರಡು ತಿಂಗಳಲ್ಲಿ 2000 ಕಾರ್ಯಕರ್ತರು ಶ್ರೀರಾಮಸೇನೆ ಸೇರ್ಪಡೆಯಾಗಿದ್ದಾರೆ. ಹಿಂದೂಗಳು ಎಚ್ವೆತ್ತುಕೊಳ್ಳಬೇಕು. ಇಲ್ಲದಿದ್ದರೆ ಜೀವನ ನಡೆಸುವುದೇ ದುಸ್ತರ ಎಂದರು.
ಗೋಷ್ಠಿಯಲ್ಲಿ ಪರಶುರಾಮ ನಡುಮನಿ, ಪಿ. ಸಾಗರ್, ರಾಹುಲ್,,ಶ್ರೀಧರ್, ಶಿವರಾಜ್ ಪೂಜಾರಿ, ಸುನೀಲ್ ವಾಲಿ, ರಾಜು, ಸಿದ್ದಾರ್ಥ್, ವಿನಯ್, ಮಂಜು, ಶಶಿಕುಮಾರ್ ಮತ್ತಿತರರು ಹಾಜರಿದ್ದರು.