ಪ್ರತಿಯೊಬ್ಬರ ದೇಹವು ವಿಭಿನ್ನವಾಗಿದ್ದು ಪ್ರತಿಯೊಂದು ವಿಷಯವು ಪ್ರತಿಯೊಬ್ಬರ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ.
ಸೋರೆಕಾಯಿ:- ಪೌಷ್ಟಿಕಾಂಶದಿಂದ ತುಂಬಿರುವ ಈ ಹಸಿರು ತರಕಾರಿ ಕೆಲವರಿಗೆ ಹಾನಿಕಾರಕವಾಗಿದೆ. ಅಂತಹ ತರಕಾರಿಗಳಲ್ಲಿ ಸೋರೆಕಾಯಿಯೂ ಒಂದು. ಅತಿಯಾದ ಸೋರೆಕಾಯಿ ಸೇವನೆಯು ಕೆಲವೊಂದು ಅಡ್ಡಪರಿಣಾಮಗಳನ್ನು ಹೊಂದಿದೆ. ಈ ಮಾಹಿತಿಯನ್ನು ಆಯುರ್ವೇದದಲ್ಲಿ ನೀಡಲಾಗಿದೆ. ಸೋರೆಕಾಯಿಯು ಎರಡು ದೋಶಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಸೋರೆಕಾಯಿಯನ್ನು ತಿನ್ನುವುದರಿಂದ ಯಾರ ಮೇಲೆ ಪರಿಣಾಮ ಬೀರಬಹುದು ಎಂಬುವುದನ್ನು ನಾವಿಲ್ಲಿ ತಿಳಿಯೋಣ ಚರ್ಮ, ಕೂದಲು, ಕಿವಿ, ತುಟಿಗಳು ಮತ್ತು ಕೀಲುಗಳ ಶುಷ್ಕತೆಯಿಂದ ತೊಂದರೆಗೊಳಗಾಗುತ್ತದೆ ಹೊಟ್ಟೆಯ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವುದು, ನಿರ್ಜಲೀಕರಣ, ತೂಕ ನಷ್ಟ, ಮಲಬದ್ಧತೆ ತೊಂದರೆ ತಲೆತಿರುಗುವಿಕೆ, ಚಡಪಡಿಕೆ ಕಳಪೆ ರಕ್ತ ಪರಿಚಲನೆ, ಸ್ನಾಯುಗಳ ಬಿಗಿತ, ಅಸ್ತಮಾ, ನೋವಿನಿಂದ ತೊಂದರೆಗೊಳಗಾಗುತ್ತದೆ ಚರ್ಮ ಮತ್ತು ತುಟಿಗಳ ಒರಟುತನ ಆತಂಕ, ವೇಗದ ಹೃದಯ ಬಡಿತ ಜೀರ್ಣಕ್ರಿಯೆಗೆ ಫೈಬರ್ ಅತ್ಯಗತ್ಯ. ಆದರೆ ಅದರ ಹೆಚ್ಚುವರಿ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲದು. ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆ ಸಮಸ್ಯೆಯಾಗಬಹುದು. ಹೊಟ್ಟೆ ಉಬ್ಬುವುದು, ಗ್ಯಾಸ್, ಅಜೀರ್ಣ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ನಾರಿನಂಶ ಹೆಚ್ಚಿರುವ ಸೋರೆಕಾಯಿ ಆಹಾರವನ್ನು ಸೇವಿಸುವಾಗ ಎಚ್ಚರದಿಂದಿರಿ.