SUDDIKSHANA KANNADA NEWS/DAVANAGERE/DATE:30-04-2024
ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋಗಳು ಇದೆ ಎನ್ನಲಾದ ಪೆನ್ ಡ್ರೈವ್ ಕುರಿತಂತೆ ಎಸ್ ಐ ಟಿ ತನಿಖೆ ನಡೆಸುತ್ತಿದ್ದು, ಇದರ ಸತ್ಯಾಸತ್ಯತೆ ತಿಳಿಯಬೇಕಿದೆ. ಜನತೆ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ ಎಂದು ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.
ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ. ನಾನು ತೋರಿಸಿದ್ದ ಪೆನ್ ಡ್ರೈವ್ ಅದೇ ಪೆನ್ ಡ್ರೈವ್ ಎಂದು ಕೇಳುತ್ತಿದ್ದಾರೆ. ಇಂಥ ಪೆನ್ ಡ್ರೈವ್ ಮಾಡಿಲ್ಲ. ಇಂಥ ಪೆನ್ ಡ್ರೈವ್ ಮಾಡುವುದು ಅವರ ನಡವಳಿಕೆ, ಸಂಸ್ಕೃತಿ. ಕಳೆದ ಒಂದು ವರ್ಷದ ಹಿಂದೆಯೂ ಇದನ್ನೇ ಮಾಡಿದ್ದಾರೆ. ಡಿ. ಕೆ. ಶಿವಕುಮಾರ್ ಪೆನ್ ಡ್ರೈವ್ ಮಹಾನಾಯಕ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಛೇಡಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ನೆಲದ ಕಾನೂನಿನ ಪ್ರಕಾರ ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ತನಿಖೆಗೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟವಾಗಿ ನಾಡಿನ ಜನತೆ ಮುಂದೆ
ಹೇಳುತ್ತೇನೆ. ತಾಯಂದಿರು, ಸಹೋದರಿಯರು ಇದರಲ್ಲಿ ಬಲವಂತ ಇದ್ದರೆ ಎಸ್ ಐ ಟಿ ಮುಂದೆ ಹೇಳಿ ಎಂದರು.
2012-13ರಲ್ಲಿ ನಡೆದ ಪ್ರಕರಣ ಈಗ ಯಾಕೆ ಬೆಳಕಿಗೆ ಬಂತು. ಸೆಕ್ಸ್ ವಿಡಿಯೋಗಳು ಉಳ್ಳ ಪೆನ್ ಡ್ರೈವ್ ಬಿಡುಗಡೆ ಮಾಡಿದ್ದು ಯಾರು? ಕಾಂಗ್ರೆಸ್ ನ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿಲ್ಲ. ಪುಡಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರಾ? ವಿಡಿಯೋದಲ್ಲಿ ಇರುವವರು ಪ್ರತಿಭಟನೆ ನಡೆಸಿದ್ಯಾರು? ಜೆ. ಪಿ. ನಗರದ ನನ್ನ ಮನೆ ಮುಂದೆ ಪ್ರತಿಭಟನೆ ನಡೆಸಲು ನನಗೂ ಈ ಪ್ರಕರಣಕ್ಕೂ ಸಂಬಂಧ ಏನು? ಕಳೆದ ಏಪ್ರಿಲ್ 21ರ ರಾತ್ರಿ ಸೋಷಿಯಲ್ ಮೀಡಿಯಾ, ವ್ಯಾಟ್ಸಪ್, ಫೇಸ್ ಬುಕ್ ನಲ್ಲಿ ಹರಿದಾಡಿಸಿದ್ದು ಯಾರು? ದೇಶಕ್ಕೆ, ವಿದೇಶಕ್ಕೂ ಹೋಗುವಂತೆ ಮಾಡಲು ಸಾಮಾನ್ಯ ವ್ಯಕ್ತಿ ಅಲ್ಲ. ದೊಡ್ಡ ವ್ಯಕ್ತಿಯ ಹಿಂದೆ ಕೈವಾಡ ಇರುತ್ತದೆ ಎಂದು ಆಪಾದಿಸಿದರು.
ಸಿಎಂ ಸಿದ್ದರಾಮಯ್ಯ ನನ್ನ ವಿರುದ್ಧ ವಾಗ್ದಾಳಿ ನಡೆಸಿದ್ರು. ಹೆಣ್ಣು ಮಕ್ಕಳ ಮುಖ ಬ್ಲರ್ ಮಾಡಿ ಕುಟುಂಬಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ವಾ. ಆ ಕುಟುಂಬಗಳ ಪರಿಸ್ಥಿತಿ ಏನಾಗಬಹುದು? ತಪ್ಪುಗಳೇನಾದ್ರೂ ಆಗಿದ್ದರೆ ತಪ್ಪು ಮಾಡಿದವನು ಹೊರಗೆ ಬರಬೇಕು. ಹೆಣ್ಣುಮಕ್ಕಳ ಮುಖ ತೋರಿಸಿ, ಫೋಟೋ ಹರಿದಾಡಿಸಿದ್ದು ಎಷ್ಟರ ಮಟ್ಟಿಗೆ ಮಹಿಳೆಯರಿಗೆ ಕಾಂಗ್ರೆಸ್ ನವರು ಗೌರವ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ವಕೀಲ ದೇವರಾಜೇಗೌಡರನ್ನು ಸಂದರ್ಶನ ಮಾಡಲಾಗಿದೆ. ಇವರ ಹಿನ್ನೆಲೆ ಏನು? ಪ್ರಜ್ವಲ್ ರೇವಣ್ಣ 2019ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಹಲವು ರೀತಿ ಅಕ್ರಮ, ಆಸ್ತಿ ಲೂಟಿ ಮಾಡಿದ್ದಾರೆ ಎಂಬ ಆರೋಪ ಮಾಡಿ ಸುಪ್ರೀಂ ಕೋರ್ಟ್ ವರೆಗೆ ಹೆಚ್. ಡಿ. ರೇವಣ್ಣರ ಕುಟುಂಬದ ವಿರುದ್ಧ ಆರೋಪ ಮಾಡಿದ್ದರು. ಕಾರ್ತಿಕ್ ಎಂಬಾತನಿಂದ ಹೇಳಿಕೆ ಕೊಡಿಸಲಾಗಿದೆ. ನಾನು ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ ಎಂದು ಹೇಳಿಸಿದ್ದಾರೆ. ಯಾವ ಕಡೆ ಚಕ್ರ ತಿರುಗುತ್ತದೆ ಎಂಬುದು ಡಿಸಿಎಂಗೂ ಅರ್ಥ ಆಗಿದೆ ಎಂದು ಕಿಡಿಕಾರಿದರು.
ಕಾರ್ತಿಕ್ ಎಂಬುವವನು ನನ್ನ ಕಚೇರಿಗೆ ಬಂದ. ಕ್ಯಾಸೆಟ್ ವಿಷಯದಲ್ಲಿ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿಕೊಂಡು ಬಂದಿದ್ದ. ಕಾರಿನಲ್ಲಿ ಹೋಗುವಾಗ ವಿಷಯ ಗೊತ್ತಾಯಿತು. ನಾಡಿನ ಹೆಣ್ಣು ಮಕ್ಕಳಿಗೋಸ್ಕರ ಸಮಯ ತೆಗೆದುಕೊಳ್ಳುತ್ತೇನೆ. ಆಮೇಲೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಆರೋಪಿಸಿದರು.