Home ಕ್ರೈಂ ನ್ಯೂಸ್ ತಂದೆ ನೋಡಲು ಬಾರದ ಮಕ್ಕಳು, ಸಾಕು ಅಪ್ಪನಅಂತ್ಯಕ್ರಿಯೆಗೆ 5,100 ರೂ. ಕಳುಹಿಸಿ ವಿಡಿಯೋ ಕರೆ ಮಾಡಿ ವೀಕ್ಷಿಸಿದ ಪುತ್ರಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ತಂದೆ ನೋಡಲು ಬಾರದ ಮಕ್ಕಳು, ಸಾಕು ಅಪ್ಪನಅಂತ್ಯಕ್ರಿಯೆಗೆ 5,100 ರೂ. ಕಳುಹಿಸಿ ವಿಡಿಯೋ ಕರೆ ಮಾಡಿ ವೀಕ್ಷಿಸಿದ ಪುತ್ರಿ!

Share
ತಂದೆ
Share

ಸೋನಿಪತ್ (ಹರ್ಯಾಣ): ತಮ್ಮ ಇಡೀ ಜೀವನವನ್ನು ಹೆಣ್ಣುಮಕ್ಕಳ ಶಿಕ್ಷಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಮುಡಿಪಾಗಿಟ್ಟಿದ್ದ ವೃದ್ಧ ತಂದೆಯೊಬ್ಬರು ವೃದ್ಧಾಶ್ರಮದಲ್ಲಿ ಅನಾಥರಾಗಿ ಕೊನೆಯುಸಿರೆಳೆದ ದುರಂತ ಘಟನೆ ಹರ್ಯಾಣದ ಸೋನಿಪತ್‌ನಲ್ಲಿ ನಡೆದಿದೆ.

ಮೂಲತಃ ಮುಂಬೈನ ಮಾಜಿ ಜವಳಿ ಉದ್ಯಮಿ ಶಿವಚರಣ್ ರಾಮ್ ರತನ್ ಗುಪ್ತಾ ಅವರು ವೃದ್ಧಾಶ್ರಮದಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೂವರು ಮಕಳಿಗೆ ಸಮಯವಿಲ್ಲದೆ, ವಿಡಿಯೋ ಕಾಲ್ ಮೂಲಕವೇ ಅಂತ್ಯಸಂಸ್ಕಾರ ವೀಕ್ಷಿಸಿದ್ದಾರೆ.

ಆರೋಗ್ಯ ಕ್ಷೀಣಿಸುತ್ತಿದ್ದರೂ ಬಾರದ ಮಕಳು:

ಶಿವಚರಣ್ ಅವರು ಕಳೆದ ಒಂದೂವರೆ ವರ್ಷದಿಂದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿರುವ ಬಗ್ಗೆ 20 ದಿನಗಳ ಮುಂಚಿತವಾಗಿಯೇ ನೇಪಾಳ, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ನೆಲೆಸಿರುವ ಮೂವರು ಮಕ್ಕಳಿಗೆ ಆಶ್ರಮದ ಆಡಳಿತ ಮಂಡಳಿ ಮಾಹಿತಿ ನೀಡಿತ್ತು. ಆದರೂ ಯಾರೊಬ್ಬರೂ ತಂದೆಯನ್ನು ನೋಡಲು ಬರಲಿಲ್ಲ.

ಆನ್‌ಲೈನ್‌ನಲ್ಲೇ ಅಂತ್ಯಕ್ರಿಯೆ ವೀಕ್ಷಣೆ:

ತಂದೆಯ ನಿಧನದ ನಂತರವೂ ಪ್ರಯಾಣಿಸಲು ಸಮಯವಿಲ್ಲ ಎಂದ ಮಕಳು, ವಿಡಿಯೋ ಕಾಲ್ ಮೂಲಕವೇ ಅಂತ್ಯಕ್ರಿಯೆ ಪ್ರಕ್ರಿಯೆಯನ್ನು ವೀಕ್ಷಿಸಿದರು. ನೇಪಾಳದಲ್ಲಿ ಶಿಕ್ಷಕಿಯಾಗಿರುವ ಹಿರಿಯ ಮಗಳು ಅನಿತಾ ಅಂತ್ಯಸಂಸ್ಕಾರದ ವೆಚ್ಚಕ್ಕಾಗಿ ₹5,100 ಆನ್‌ಲೈನ್ ಮೂಲಕ ಕಳುಹಿಸಿಕೊಟ್ಟಿದ್ದಾರೆ. ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರೇ ಸೇರಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದರು.

ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಶಿವಚರಣ್:

ಮಕಳು ಅಂತ್ಯಕ್ರಿಯೆಗೆ ಬರದಿದ್ದರೂ, ತಂದೆಯ ಇಚ್ಛೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದು, ನಿಧನದ ನಂತರ ಶಿವಚರಣ್ ಅವರ ನೇತ್ರದಾನ ನೆರವೇರಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles