Home ದಾವಣಗೆರೆ ಸಲ್ಮಾನ್ ಖಾನ್ ಶ್ರೀರಾಮ, ಸೊನಾಲಿ ಬೆಂಗ್ರೆ ಸೀತೆ: ಸೋಹೈಲ್ ಖಾನ್ ನಿರ್ದೇಶನದ ಮೆಗಾ ಪ್ರಾಜೆಕ್ಟ್ “ರಾಮಾಯಣ” ಡ್ರಾಪ್ ಆಗಿದ್ದರ ಹಿಂದಿದೆ ದೊಡ್ಡ ಕಥೆ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಸಲ್ಮಾನ್ ಖಾನ್ ಶ್ರೀರಾಮ, ಸೊನಾಲಿ ಬೆಂಗ್ರೆ ಸೀತೆ: ಸೋಹೈಲ್ ಖಾನ್ ನಿರ್ದೇಶನದ ಮೆಗಾ ಪ್ರಾಜೆಕ್ಟ್ “ರಾಮಾಯಣ” ಡ್ರಾಪ್ ಆಗಿದ್ದರ ಹಿಂದಿದೆ ದೊಡ್ಡ ಕಥೆ!

Share
ರಾಮಾಯಣ
Share

ಮುಂಬೈ: ಪ್ರಸ್ತುತ ಬಾಲಿವುಡ್‌ನಲ್ಲಿ ನಿರ್ದೇಶಕ ನಿತೀಶ್ ತಿವಾರಿ ನಿರ್ಮಾಣದ ‘ರಾಮಾಯಣ’ ಚಿತ್ರದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿದ್ದರೆ, ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಆದರೆ, ದಶಕಗಳ ಹಿಂದೆಯೇ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಶ್ರೀರಾಮನ ಪಾತ್ರದಲ್ಲಿ ನಟಿಸಬೇಕಿತ್ತು ಎಂಬ ಕುತೂಹಲಕಾರಿ ವಿಷಯ ಈಗ ಮುನ್ನೆಲೆಗೆ ಬಂದಿದೆ.

ಸೋಹೈಲ್ ಖಾನ್ ಕನಸಿನ ಪ್ರಾಜೆಕ್ಟ್:

1990ರ ದಶಕದಲ್ಲಿ ನಟ-ನಿರ್ದೇಶಕ ಸೋಹೈಲ್ ಖಾನ್ ಮಹಾಕಾವ್ಯ ‘ರಾಮಾಯಣ’ವನ್ನು ಆಧರಿಸಿ ಸಿನಿಮಾ ನಿರ್ಮಿಸಲು ಮುಂದಾಗಿದ್ದರು. ಈ ಚಿತ್ರದಲ್ಲಿ ತಮ್ಮ ಸಹೋದರ ಸಲ್ಮಾನ್ ಖಾನ್ ಅವರನ್ನು ‘ಶ್ರೀರಾಮ’ನಾಗಿ ಹಾಗೂ ನಟಿ ಸೊನಾಲಿ ಬೆಂದ್ರೆಯವರನ್ನು ‘ಸೀತೆ’ಯ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಪೂಜಾ ಭಟ್ ಸಹ ಪ್ರಮುಖ ಪಾತ್ರದಲ್ಲಿದ್ದರು.

40% ಶೂಟಿಂಗ್ ಪೂರ್ಣಗೊಂಡಿತ್ತು:

ಇತರ ಕೈಬಿಡಲಾದ ಸಿನಿಮಾಗಳಂತೆ ಈ ಚಿತ್ರ ಕೇವಲ ಆಲೋಚನೆಗೆಷ್ಟೇ ಸೀಮಿತವಾಗಿರಲಿಲ್ಲ. ಚಿತ್ರದ ಶೂಟಿಂಗ್ ಶುರುವಾಗಿ ಸುಮಾರು ಶೇ. 40 ರಷ್ಟು ಭಾಗ ಪೂರ್ಣಗೊಂಡಿತ್ತು. ಸಲ್ಮಾನ್ ಖಾನ್ ಶ್ರೀರಾಮನ ಸಾಂಪ್ರದಾಯಿಕ ಉಡುಪು, ಬಿಲ್ಲು-ಬಾಣ ಹಿಡಿದು ಪ್ರಮೋಷನಲ್ ಫೋಟೋಶೂಟ್ ಕೂಡ ಮಾಡಿದ್ದರು.

ಸಿನಿಮಾ ನಿಲ್ಲಲು ಕಾರಣವೇನು?

ಈ ಚಿತ್ರದ ನಿರ್ಮಾಣ ನಿಲ್ಲಲು ಬಜೆಟ್ ಅಥವಾ ಕ್ರಿಯೇಟಿವ್ ಸಮಸ್ಯೆ ಕಾರಣವಾಗಿರಲಿಲ್ಲ, ಬದಲಿಗೆ ಆನ್-ಸೆಟ್‌ನಲ್ಲಿ ನಡೆದ ವೈಯಕ್ತಿಕ ಬೆಳವಣಿಗೆಗಳು ಕಾರಣವಾಗಿದ್ದವು. ಶೂಟಿಂಗ್ ವೇಳೆ ನಿರ್ದೇಶಕ ಸೋಹೈಲ್ ಖಾನ್ ಹಾಗೂ ನಟಿ ಪೂಜಾ ಭಟ್ ನಡುವೆ ಪ್ರೇಮಾಂಕುರವಾಗಿತ್ತು. ವಿವಾಹವಾಗುವ ಹಂತಕ್ಕೂ ತಲುಪಿದ್ದ ಈ ಸಂಬಂಧಕ್ಕೆ ಖಾನ್ ಕುಟುಂಬದ ಹಿರಿಯ ಸಲೀಂ ಖಾನ್ ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದ ಪೂಜಾ ಭಟ್ ಸಿನಿಮಾದಿಂದ ಹೊರಬಂದರು. ಸಲ್ಮಾನ್ ಖಾನ್ ಸಂಧಾನಕ್ಕೆ ಪ್ರಯತ್ನಿಸಿದರೂ ಸಿನಿಮಾ ಮತ್ತೆ ಮುಂದುವರಿಯಲಿಲ್ಲ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles