Home ದಾವಣಗೆರೆ ಕಾಪಾಡು ವೆಂಕಟೇಶ್ವರ.. ಮುಡಿ ಕೊಟ್ಟು ಪ್ರಾರ್ಥಿಸಿದ ಹಾರ್ದಿಕ್ ಪಾಂಡ್ಯ: ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ ಜೊತೆ ತಿಮ್ಮಪ್ಪನ ದರ್ಶನ ಪಡೆದ ಸ್ಟಾರ್ ಆಲ್ ರೌಂಡರ್!
ದಾವಣಗೆರೆಕ್ರೀಡೆನವದೆಹಲಿಬೆಂಗಳೂರು

ಕಾಪಾಡು ವೆಂಕಟೇಶ್ವರ.. ಮುಡಿ ಕೊಟ್ಟು ಪ್ರಾರ್ಥಿಸಿದ ಹಾರ್ದಿಕ್ ಪಾಂಡ್ಯ: ಗರ್ಲ್ ಫ್ರೆಂಡ್ ಮಹಿಕಾ ಶರ್ಮಾ ಜೊತೆ ತಿಮ್ಮಪ್ಪನ ದರ್ಶನ ಪಡೆದ ಸ್ಟಾರ್ ಆಲ್ ರೌಂಡರ್!

Share
ಹಾರ್ದಿಕ್ ಪಾಂಡ್ಯ
Share

ತಿರುಪತಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ಆಂಧ್ರಪ್ರದೇಶದ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಹಾರ್ದಿಕ್ ಪಾಂಡ್ಯ ತಮ್ಮ ತಲೆಗೂದಲನ್ನು ಸಂಪೂರ್ಣವಾಗಿ ತೆಗೆಸಿ (ಮೊಟ್ಟೆಯಾಗಿ) ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಸುಪ್ರಭಾತ ಸೇವೆಯಲ್ಲಿ ಭಾಗಿ:

ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಶರ್ಮಾ ಇಬ್ಬರೂ ಸಾಂಪ್ರದಾಯಿಕ ಬಿಳಿ ಉಡುಪಿನಲ್ಲಿ ತಿರುಮಲ ಶ್ರೀನಿವಾಸನ ದರ್ಶನ ಪಡೆದರು. ದೇವಾಲಯದ ಅತ್ಯಂತ ಪವಿತ್ರ ಪೂಜೆಗಳಲ್ಲಿ ಒಂದಾದ ಬೆಳಗಿನ ‘ಸುಪ್ರಭಾತ ಸೇವೆ’ಯಲ್ಲಿ ಪಾಲ್ಗೊಂಡು ಕಲ್ಯಾಣ ವೆಂಕಟೇಶನ ಆಶೀರ್ವಾದ ಪಡೆದರು. ಸಾಂಪ್ರದಾಯಿಕವಾಗಿ ಭಕ್ತರು ದೇವರಿಗೆ ಮುಡಿ ಕೊಟ್ಟು ಹರಿಕೆ ತೀರಿಸುವಂತೆ, ಪಾಂಡ್ಯ ಕೂಡ ಶ್ರೀನಿವಾಸನಿಗೆ ಮುಡಿ ಅರ್ಪಿಸಿದ್ದಾರೆ. ಇವರ ಈ ಧಾರ್ಮಿಕ ಭೇಟಿಯ ವೀಡಿಯೋಗಳು ಮತ್ತು ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕಂಬ್ಯಾಕ್‌ಗೆ ಸಿದ್ಧತೆ:

ಐಪಿಎಲ್ 2026ರ ನಂತರ ಬೆನ್ನು ನೋವು ಹಾಗೂ ತೊಡೆಯ ಗಾಯದಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಾರ್ದಿಕ್ ಪಾಂಡ್ಯ, ಪ್ರಸ್ತುತ ಬೆಂಗಳೂರಿನ ‘ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್’ (BCCI Centre of Excellence) ನಲ್ಲಿ ರಿಹ್ಯಾಬಿಲಿಟೇಶನ್ ಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಅಫ್ಘಾನಿಸ್ತಾನ್, ಇಂಗ್ಲೆಂಡ್ ಹಾಗೂ ಜಿಂಬಾಬ್ವೆ ಸರಣಿಗಳಿಂದ ಹೊರಗುಳಿದಿದ್ದ ಪಾಂಡ್ಯ, ಮುಂಬರುವ ಸರಣಿಗಳಲ್ಲಿ ಭಾರತೀಯ ತಂಡಕ್ಕೆ ಪುನರಾಗಮಿಸುವ ನಿರೀಕ್ಷೆಯಿದೆ.

ಮುಂಬರುವ ಪ್ರಮುಖ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಮುನ್ನ ಈ ಆಧ್ಯಾತ್ಮಿಕ ಭೇಟಿಯು ಅವರಿಗೆ ಹೊಸ ಚೈತನ್ಯ ನೀಡಲಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *