ಬೆಂಗಳೂರು: ಭಾರತೀಯ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ನವರತ್ನ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಇಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ ಘೋಷಿಸಿದೆ. 2026ರ ಸಾಲಿನ ‘ಡಿಸೈನ್ ಟ್ರೈನಿ’ (Design Trainee) ಹಾಗೂ ‘ಮ್ಯಾನೇಜ್‌ಮೆಂಟ್ ಟ್ರೈನಿ’ (Management Trainee) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 120 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
ಡಿಸೈನ್ ಟ್ರೈನಿ (DT): 60 ಹುದ್ದೆಗಳು
ಮ್ಯಾನೇಜ್‌ಮೆಂಟ್ ಟ್ರೈನಿ (MT): 60 ಹುದ್ದೆಗಳು
ಒಟ್ಟು ಖಾಲಿ ಹುದ್ದೆಗಳು: 120
ಅ್ಯರೊನಾಟಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಮೆಟಲರ್ಜಿ ಹಾಗೂ ಪ್ರೊಡಕ್ಷನ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು, ತುಮಕೂರು, ಹೈದರಾಬಾದ್, ನಾಸಿಕ್, ಕೊರಾಪುಟ್ ಸೇರಿದಂತೆ ಹೆಚ್‌ಎಎಲ್‌ನ ವಿವಿಧ ಘಟಕಗಳಲ್ಲಿ ಹುದ್ದೆ ನೀಡಲಾಗುವುದು.
ಶೈಕ್ಷಣಿಕ ಅರ್ಹತೆ & ವಯೋಮಿತಿ:
ಗುರುತಿಸಲ್ಪಟ್ಟ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಪೂರ್ಣಾವಧಿ (Regular/Full Time) ಬಿ.ಇ / ಬಿ.ಟೆಕ್ (B.E / B.Tech) ಪದವಿ ಪೂರ್ಣಗೊಳಿಸಿರಬೇಕು.
ಅಂಕಗಳು: ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ಕನಿಷ್ಠ 70% ಹಾಗೂ SC/ST/PwBD ಅಭ್ಯರ್ಥಿಗಳಿಗೆ ಕನಿಷ್ಠ 60% ಅಂಕ ಕಡ್ಡಾಯ. (ಅಂತಿಮ ವರ್ಷದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರು).
ವಯೋಮಿತಿ: 14 ಆಗಸ್ಟ್ 2026ಕ್ಕೆ ಅನ್ವಯವಾಗುವಂತೆ ಗರಿಷ್ಠ 28 ವರ್ಷ. (SC/ST ಅಭ್ಯರ್ಥಿಗಳಿಗೆ 5 ವರ್ಷ, OBC-NCL ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ).
ವೇತನ ಮತ್ತು ಆಯ್ಕೆ ಪ್ರಕ್ರಿಯೆ:
ತರಬೇತಿ ಅವಧಿ: 1 ವರ್ಷದ ತರಬೇತಿ ಅವಧಿಯಲ್ಲಿ ಮಾಸಿಕ ₹50,000 ಮೂಲ ವೇತನ (Basic Pay) ಜೊತೆಗೆ ವಿಡಿಎ ಮತ್ತು ಇತರ ಭತ್ಯೆಗಳು ದೊರೆಯಲಿವೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ ₹50,000 – ₹1,60,000 ವೇತನ ಶ್ರೇಣಿಯಲ್ಲಿ ಅಭಿಯಂತರರಾಗಿ (Engineers) ಕಾಯಂ ಗೊಳಿಸಲಾಗುವುದು.
ಆಯ್ಕೆ ವಿಧಾನ: ಆನ್‌ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 29 ಜುಲೈ 2026 (ಮಧ್ಯಾಹ್ನ 2:00 ಗಂಟೆಯಿಂದ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಆಗಸ್ಟ್ 2026 (ಮಧ್ಯಾಹ್ನ 2:00 ಗಂಟೆಯವರೆಗೆ)
ಪರೀಕ್ಷಾ ದಿನಾಂಕ: 05 ಮತ್ತು 06 ಸೆಪ್ಟೆಂಬರ್ 2026
ಅರ್ಜಿ ಶುಲ್ಕ:
ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. SC/ST/PwBD ಹಾಗೂ ಹೆಚ್‌ಎಎಲ್ ಆಂತರಿಕ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.hal-india.co.in ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.
- Engineering Govt Jobs 2026
- HAL Design Trainee Vacancy
- HAL Exam Date 2026
- HAL India Careers
- HAL Management Trainee 2026
- HAL Online Application Form
- HAL Recruitment 2026
- HAL ಆನ್‌ಲೈನ್ ಅರ್ಜಿ
- HAL ಹುದ್ದೆಗಳು
- PSU Recruitment 2026
- ಇಂಜಿನಿಯರಿಂಗ್ ಉದ್ಯೋಗಗಳು 2026
- ಎಚ್ಎಎಲ್ ನೇಮಕಾತಿ 2026
- ಕೇಂದ್ರ ಸರ್ಕಾರಿ ಕೆಲಸ
- ಡಿಸೈನ್ ಟ್ರೈನಿ ಉದ್ಯೋಗ
- ಬೆಂಗಳೂರು ಉದ್ಯೋಗ ಸುದ್ದಿ
- ಮ್ಯಾನೇಜ್‌ಮೆಂಟ್ ಟ್ರೈನಿ ನೇಮಕಾತಿ





Leave a comment