Home ಕ್ರೈಂ ನ್ಯೂಸ್ ಕಾಶ್ಮೀರಕ್ಕೆ 10,000 ಉಗ್ರರ ಕಳುಹಿಸಿದ್ದ ಹಫೀಜ್‌ ಸಯೀದ್: ಪಾಕಿಸ್ತಾನಿ ಧರ್ಮಗುರು ನಾಸಿರ್ ಮದ್ನಿ ಸ್ಫೋಟಕ ಹೇಳಿಕೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಾಶ್ಮೀರಕ್ಕೆ 10,000 ಉಗ್ರರ ಕಳುಹಿಸಿದ್ದ ಹಫೀಜ್‌ ಸಯೀದ್: ಪಾಕಿಸ್ತಾನಿ ಧರ್ಮಗುರು ನಾಸಿರ್ ಮದ್ನಿ ಸ್ಫೋಟಕ ಹೇಳಿಕೆ!

Share
ಕಾಶ್ಮೀರ
Share

ನವದೆಹಲಿ: ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಜಮ್ಮು ಮತ್ತು ಕಾಶ್ಮೀರಕ್ಕೆ 10,000ಕ್ಕೂ ಹೆಚ್ಚು ಉಗ್ರರನ್ನು ರವಾನಿಸಿದ್ದ ಎಂದು ಪಾಕಿಸ್ತಾನದ ಧರ್ಮಗುರು ಅಲ್ಲಾಮ ನಾಸಿರ್ ಮದ್ನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಹೃದಯಾಘಾತದಿಂದ ಚೇತರಿಸಿಕೊಂಡು ಸಾರ್ವಜನಿಕ ವೇದಿಕೆಗೆ ಮರಳಿದ ನಾಸಿರ್ ಮದ್ನಿ, ಬಹಾವಲ್‌ನಗರದಲ್ಲಿ ನಡೆದ ಎಲ್‌ಇಟಿ ಬೆಂಬಲಿತ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಹಫೀಜ್ ಸಯೀದ್‌ನನ್ನು “ತ್ಯಾಗಿ” ಎಂದು ಬಿಂಬಿಸುವ ಭರದಲ್ಲಿ ಮದ್ನಿ ಮಾಡಿದ ಈ ಉಲ್ಲೇಖವು, ಭಾರತದಲ್ಲಿ ಲಷ್ಕರ್ ಉಗ್ರರು ನಡೆಸಿದ ರಕ್ತಪಾತ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಮತ್ತೆ ಸಾಬೀತುಪಡಿಸಿದೆ.

ಈ ನಡುವೆ, 2008ರ ಮುಂಬೈ 26/11 ದಾಳಿ ಹಾಗೂ ಪಹಲ್ಗಾಮ್ ಉಗ್ರರ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಫೀಜ್ ಸಯೀದ್ ವಿರುದ್ಧ ಜಮ್ಮು ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಮುಂಬೈ ಪೊಲೀಸರು ಗೈರುಹಾಜರಿ ವಿಚಾರಣೆ (Trial in absentia) ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *