SUDDIKSHANA KANNADA NEWS/ DAVANAGERE/ DATE:31-03-2025
ದಾವಣಗೆರೆ: ಪಿ.ಎಲ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಹೆಚ್. ಆರ್. ಅಶೋಕ್ ಗೋಪನಾಳ ಅವರು ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಅಶೋಕ್ ಗೋಪನಾಳ್ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನಗೆ ತಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲರನ್ನಾಗಿ ಮಾಡಿ ಸಹಕಾರ ಕ್ಷೇತ್ರದಲ್ಲಿ ಹೆಚ್ಚಿನ ಸೇವೆಯನ್ನು
ಸಲ್ಲಿಸಲು ಅವಕಾಶ ಕಲ್ಪಿಸಿದ ಬ್ಯಾಂಕಿನ ಎಲ್ಲಾ ಆಡಳಿತ ಮಂಡಳಿಯವರಿಗೂ ಹಾಗೂ ಚುನಾವಣೆಯ ಗೆಲುವಿಗೆ ಶ್ರಮಿಸಿದ ನಮ್ಮ ತಂಡದ ಕಾರ್ಯಕರ್ತರು ಮತ್ತು ಅಭಿಮಾನಿಗಳೆಲ್ಲರಿಗೂ ಹೃತ್ಪೂರ್ವಕ
ಧನ್ಯವಾದಗಳು ಎಂದು ಹೇಳಿದ್ದಾರೆ.
ರೈತನ ಮಗನಾದ ನನಗೆ ಸಹಕಾರ ಕ್ಷೇತ್ರದಲ್ಲಿ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿದ ತಮಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಕಾರ್ಯ
ನಿರ್ವಹಿಸುತ್ತೇನೆ. ಸಹಕಾರ ಕ್ಷೇತ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಪಿಎಲ್ ಡಿ ಬ್ಯಾಂಕ್ ನ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಅಶೋಕ್ ಗೋಪಾನಾಳ ತಿಳಿಸಿದರು.
ಈ ವೇಳೆ ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಕೆ. ನಾಗರಾಜಪ್ಪ, ಶಿಮುಲ್ ಮಾಜಿ ಅಧ್ಯಕ್ಷ ಹೆಚ್.ಕೆ.ಪಾಲಾಕ್ಷಪ್ಪ ಗೋಪನಾಳ, ಬ್ಯಾಂಕಿನ ಉಪಾಧ್ಯಕ್ಷೆ ಪ್ರಿಯಾಂಕ ರುದ್ರಮುನಿ, ಬೇತೂರು ಸಂಗನಗೌಡ್ರು, ಬಾತಿ ವೀರೇಶ್,
ಹೆಬ್ಬಾಳ ರುದ್ರಮುನಿ, ಹೆಚ್.ಜೆ ರಾಜೇಂದ್ರ ಗೋಪನಾಳ, ಹಲವಾರು ಮುಖಂಡರು ಉಪಸ್ಥಿತರಿದ್ದರು.