Home ಕ್ರೈಂ ನ್ಯೂಸ್ ಪ್ರಿಯತಮನ ಕಾರಿಗೆ 3.5 ಗಂಟೆ ಕಾಲ 3,400 ಮುತ್ತು ಕೊಟ್ಟ ಪ್ರಿಯತಮೆ: ಕಾರಿನ ತುಂಬೆಲ್ಲಾ ಲಿಪ್‌ಸ್ಟಿಕ್ ಕಿಸ್ ಕಂಡು ದಂಗಾದ ಪೊಲೀಸರು ವಿಧಿಸಿದ ದಂಡವೆಷ್ಟು ಗೊತ್ತಾ?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರಿಯತಮನ ಕಾರಿಗೆ 3.5 ಗಂಟೆ ಕಾಲ 3,400 ಮುತ್ತು ಕೊಟ್ಟ ಪ್ರಿಯತಮೆ: ಕಾರಿನ ತುಂಬೆಲ್ಲಾ ಲಿಪ್‌ಸ್ಟಿಕ್ ಕಿಸ್ ಕಂಡು ದಂಗಾದ ಪೊಲೀಸರು ವಿಧಿಸಿದ ದಂಡವೆಷ್ಟು ಗೊತ್ತಾ?

Share
ಪ್ರಿಯತಮ
Share

ಗ್ವಾಲಿಯರ್: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಟ್ರೆಂಡ್ ಹಾಗೂ ರೀಲ್ಸ್ ಮಾಡುವ ಹುಚ್ಚು ಯುವಜನತೆಯನ್ನು ಎತ್ತ ಸಾಗಿಸುತ್ತಿದೆ ಎಂಬುದಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ವಿದೇಶಿ ಸಾಮಾಜಿಕ ಜಾಲತಾಣದ ಟ್ರೆಂಡ್ ಒಂದರಿಂದ ಪ್ರೇರಿತರಾದ ಯುವತಿಯೊಬ್ಬರು, ತನ್ನ ಪ್ರಿಯತಮನ ಕಾರಿನಾದ್ಯಂತ ಸುಮಾರು 3,400 ಲಿಪ್‌ಸ್ಟಿಕ್ ಮುದ್ದಿನ (ಕಿಸ್) ಗುರುತುಗಳನ್ನು ಬಳಿದು ಸುದ್ದಿಯಾಗಿದ್ದಾರೆ. ಆದರೆ, ಈ ಪ್ರೀತಿಯ ಸೃಷ್ಟಿ ಕೊನೆಗೆ ಪೊಲೀಸರ ದಂಡ ಮತ್ತು ತಾಪತ್ರಯದಲ್ಲಿ ಅಂತ್ಯಗೊಂಡಿದೆ.

ಘಟನೆಯ ವಿವರ:

ಗ್ವಾಲಿಯರ್ ನಿವಾಸಿ ಆದಿತ್ಯ ಸಿಕರ್ವಾರ್ ಎಂಬುವವರ ಕಾರಿಗೆ ಅವರ ಪ್ರೇಯಸಿ ಸುಮಾರು 4 ಗಂಟೆಗಳ ಕಾಲ ಶ್ರಮಿಸಿ, ಪ್ರತಿಯೊಂದು ಭಾಗಕ್ಕೂ ಲಿಪ್‌ಸ್ಟಿಕ್ ಹಚ್ಚಿ ಸುಮಾರು 3,400 ಬಾರಿ ಕಿಸ್ ಮಾಡಿ ವಿಶಿಷ್ಟ ‘ಮೇಕ್ ಓವರ್’ ನೀಡಿದ್ದರು. ಈ ವಿಶಿಷ್ಟ ಕಾರಿನ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.

ಪೊಲೀಸರ ಬಿಗಿ ಕ್ರಮ ಮತ್ತು ದಂಡ:

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಹಲ್ಚಲ್ ಎಬ್ಬಿಸುತ್ತಿದ್ದಂತೆ, ಸಂಚಾರ ಪೊಲೀಸರ ಗಮನಕ್ಕೆ ಬಂದಿದೆ. ವಿಡಿಯೋದಲ್ಲಿ ಕಂಡುಬಂದ ವಾಹನ ನೋಂದಣಿ ಸಂಖ್ಯೆಯ (Registration Number) ಆಧಾರದ ಮೇಲೆ ಪೊಲೀಸರು ಕಾರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಮೋಟಾರು ವಾಹನ ಕಾಯ್ದೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಆದಿತ್ಯ ಸಿಕರ್ವಾರ್ ಅವರಿಗೆ ₹5,500 ದಂಡ (ಚಲನ್) ವಿಧಿಸಲಾಗಿದೆ.

ಕಾರು ತೊಳೆಯಿಸಿದ ಪೊಲೀಸರು:

ದಂಡ ವಿಧಿಸುವುದಷ್ಟೇ ಅಲ್ಲದೆ, ಪೊಲೀಸರು ವಾಹನ ಮಾಲೀಕನಿಗೆ ಕೌನ್ಸೆಲಿಂಗ್ ನಡೆಸಿ, ತಮ್ಮ ತಪ್ಪಿನ ಅರಿವು ಮೂಡಿಸಿದ್ದಾರೆ. ಬಳಿಕ ಠಾಣೆಯ ಆವರಣದಲ್ಲೇ ಕಾರಿನ ಮೇಲಿದ್ದ ಎಲ್ಲಾ ಲಿಪ್‌ಸ್ಟಿಕ್ ಗುರುತುಗಳನ್ನು ಉಜ್ಜಿ ತೊಳೆಯಿಸಿ, ಕಾರನ್ನು ಹಳೆಯ ಸ್ಥಿತಿಗೆ ತಂದ ನಂತರವೇ ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ತಾತ್ಕಾಲಿಕ ಲೈಕ್ಸ್ ಮತ್ತು ವ್ಯೂಸ್‌ಗಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುವುದು ಸೂಕ್ತವಲ್ಲ ಎಂದು ಈ ಘಟನೆಯ ಮೂಲಕ ಗ್ವಾಲಿಯರ್ ಪೊಲೀಸರು ಎಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles